ಮೈಸೂರು, ಮೇ 10(ಆರ್ಕೆಬಿ)- ಮೈಸೂ ರಿನ ವಿವಿಧ ಬಡಾವಣೆಗಳ ಬಡವರು, ನಿರಾ ಶ್ರಿತರು, ವಿಶೇಷಚೇತನರಿಗೆ ಕುವೆಂಪು ನಗ ರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪ ದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ದಿನಸಿ ಕಿಟ್ ವಿತರಿಸಿದರು. ಈ ಸಂದರ್ಭ ಮೈಸೂರು ಜಿಲ್ಲಾ ವಿಶೇಷಚೇತನರ ಸಂಘದ ಅಧ್ಯಕ್ಷ ಪ್ರಭು, ಪಾಲಿಕೆ ಮಾಜಿ ಸದಸ್ಯ ಎಂ. ಸುನಿಲ್, ರೈಲ್ವೆ ಸಹಕಾರ ಸಂಘದ ನಿರ್ದೇ ಶಕ ಚಂದ್ರು, ಮುಖಂಡರಾದ ಗುಣಶೇಖರ್, ವಿಶ್ವ, ನಿರಾಲ್ ಶಾ, ತ್ಯಾಗರಾಜ್ ಇದ್ದರು. ಲಾಕ್ಡೌನ್ ವೇಳೆ ಸತತ 47ನೇ ದಿನದಿಂದ ಕೂಲಿ ಕಾರ್ಮಿಕರು, ಬಡವರಿಗೆ ಉಚಿತ ಆಹಾರ ಪೂರೈಸುವ ಜೊತೆಗೆ ಅಗತ್ಯವುಳ್ಳ ವರಿಗೆ ದಿನಸಿ ಪದಾರ್ಥ ನೀಡುತ್ತಾ ಬಂದಿದ್ದಾರೆ.
