ಲಯನ್ಸ್ ಮಯೂರಿ ಸಂಸ್ಥೆಯಿಂದ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಲಯನ್ಸ್ ಮಯೂರಿ ಸಂಸ್ಥೆಯಿಂದ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

April 25, 2020

ಮೈಸೂರು, ಏ.24(ಆರ್‍ಕೆಬಿ)- ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೈಸೂರಿನ ದಟ್ಟಗಳ್ಳಿ 2ನೇ ಹಂತದ ಕನಕದಾಸ ನಗರದ 7ನೇ ಕ್ರಾಸ್‍ನ ಕೂಲಿ ಕಾರ್ಮಿಕರಿಗೆ ಲಯನ್ಸ್ ಕ್ಲಬ್ ಆಫ್ ಮಯೂರಿಯಿಂದ ದಿನಸಿ ಕಿಟ್ ವಿತರಿಸಲಾಯಿತು. ಸಂಸ್ಥೆ ಅಧ್ಯಕ್ಷೆ ಕೊಮಲ, ಕಾರ್ಯದರ್ಶಿ ಮಂಗಳಾ, ಲಯನ್ಸ್ ಕ್ಲಬ್ ಆಫ್ ರಾಜೀವ್ ನಗರ ಅಧ್ಯಕ್ಷ ವಿಶ್ವನಾಥ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಸಂಸ್ಥೆಯ ಸದಸ್ಯೆಯರಾದ ನಾಗರತ್ನ, ವೀಣಾ, ಜ್ಯೋತಿ, ವೀಣಾರಾಜ್ ಖಾಟೋಕರ್, ರಾಜೀವ್ ನಗರ ಲಯನ್ಸ್ ಕಾರ್ಯದರ್ಶಿ ಎಂ.ವಿಜಯಕುಮಾರ್, ಇನ್ನಿತರರಿದ್ದರು.

Translate »