ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಣೆ
ಮೈಸೂರು ಗ್ರಾಮಾಂತರ

ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಣೆ

May 1, 2020

ತಿ.ನರಸೀಪುರ ಏ.30(ಎಸ್‍ಕೆ)- ಲಾಕ್‍ಡೌನ್ ಮುಗಿಯುವವರೆವಿಗೂ ಮಂಗಳಮುಖಿಯರಿಗೆ ಅಗತ್ಯ ನೆರವನ್ನು ನೀಡಲು ನಿರಂತರವಾಗಿ ಸಹಾಯಾಸ್ತ ಚಾಚಲು ಸಿದ್ಧರಿರುತ್ತೇವೆ ಎಂದು ಶ್ರೀ ಚೌಡೇಶ್ವರಿ ಅಮ್ಮ ನವರ ಯುವಕರ ಸ್ನೇಹ ಬಳಗದ ಅಧ್ಯಕ್ಷ ಆರ್.ಮಣಿಕಂಠ ರಾಜ್‍ಗೌಡ ಭರವಸೆ ನೀಡಿದರು.

ಪಟ್ಟಣದ ತ್ರಿವೇಣಿ ನಗರದಲ್ಲಿ ಲಾಕ್ ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳಮುಖಿಯರಿಗೆ ಉಚಿತವಾಗಿ ಅಡುಗೆ ಸಿಲಿಂಡರ್ ಸೇರಿದಂತೆ ಆಹಾರ ಪದಾರ್ಥಗಳನ್ನು ವಿತರಿಸಿ ಅವರು ಮಾತ ನಾಡಿದರು. ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿಯಲ್ಲಿದೆ. ಸಂಕಷ್ಟದಲ್ಲಿರುವ ಮಂಗಳಮುಖಿಯರು ಯಾವುದೇ ಸಂದರ್ಭದಲ್ಲೂ ನಮ್ಮನ್ನು ಭÉೀಟಿಯಾಗಿ ನೆರವು ಪಡೆದುಕೊಳ್ಳಬಹುದು ಎಂದರು.

ಸಿಲಿಂಡರ್ ಹಾಗೂ ಆಹಾರ ಪದಾರ್ಥ ಗಳನ್ನು ಮಂಗಳಮುಖಿಯರಿಗೆ ಮಣಿ ಕಂಠರಾಜ್‍ಗೌಡರ ಮಾತೃಶ್ರೀಯವರು ವಿತರಿಸಿದರು. ಕಾಮಗೆರೆ ಸಮಾಜ ಕಲ್ಯಾಣಾ ಧಿಕಾರಿ ಕೃಷ್ಣಪ್ಪ, ಕಾರ್ಯಕರ್ತೆ ನಾಗರತ್ನಮ್ಮ, ತಾಂತ್ರಿಕ ಶಿಕ್ಷಣ ಸಹಾಯಕ ಪ್ರಾಧ್ಯಾಪಕಿ ಹರ್ಷಿತಾ, ತಾಪಂ ಸಿಎಸ್‍ಗಳಾದ ಸುರೇಶ್, ಸ್ವಾಮಿ, ಸಂಜೀವಿನಿ ವಿಭಾಗದ ಕೋಮಲಾ ನಾಗರಾಜು, ನಾಗಮಣಿ, ಮುಖಂಡರಾದ ಮಂಜು, ನವೀನ್ ರಾಜ್, ರಘು ರಾಜ್, ಮಂಜು, ಪ್ರಕಾಶ, ಚಂದ್ರು, ಕ್ರೇಜಿ ಸುರೇಶ್, ಚೇತನ್ ಹಾಗೂ ಇನ್ನಿತರರು ಹಾಜರಿದ್ದರು.

Translate »