ವಿಜ್ಞಾನ ಲೋಕಕ್ಕೆ ಉಪ್ಪಾರ ಸಮುದಾಯ ಮಹತ್ವದ ಕೊಡುಗೆ
ಮೈಸೂರು ಗ್ರಾಮಾಂತರ

ವಿಜ್ಞಾನ ಲೋಕಕ್ಕೆ ಉಪ್ಪಾರ ಸಮುದಾಯ ಮಹತ್ವದ ಕೊಡುಗೆ

May 1, 2020

ತಿ.ನರಸೀಪುರ, ಏ.30(ಎಸ್‍ಕೆ) -ಅನಾದಿ ಕಾಲದಿಂದಲೂ ಹೊಸ, ಹೊಸ ಸಂಶೋ ಧನೆಗಳನ್ನು ಮಾಡುವ ಮೂಲಕ ವಿಜ್ಞಾನ ಲೋಕಕ್ಕೆ ಉಪ್ಪಾರ ಸಮುದಾಯ ಮಹತ್ವದ ಕೊಡುಗೆ ನೀಡಿದೆ ಎಂದು ಕ್ಷೇತ್ರ ಶಿಕ್ಷಣಾ ಧಿಕಾರಿ ಎನ್.ಸ್ವಾಮಿ ಅಭಿಪ್ರಾಯಪಟ್ಟರು

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣ ದಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಗರ ಚಕ್ರವರ್ತಿಯ ವಂಶಸ್ಥರಾದ ಉಪ್ಪಾರ ಸಮುದಾಯ ಎಲ್ಲ ಸಮುದಾಯದವ ರಿಗೂ ಬೇಕಾದವರಾಗಿದ್ದು, ಸಾಗರದ ಆಳದಲ್ಲಿರುವ ಚವುಳುಮಣ್ಣನ್ನು ಸಂಶೋ ಧನೆ ನಡೆಸಿ, ಅದನ್ನು ಉಪ್ಪನ್ನಾಗಿ ಮಾಡಿ, ಜಗತ್ತಿಗೆ ರುಚಿ ತೋರಿಸಿದವರು.

ಇಂಥ ವಂಶದಲ್ಲಿ ಭಗೀರಥ ಮಹರ್ಷಿ ಜನ್ಮತಾಳುವ ಮೂಲಕ ತನ್ನ ಪೂರ್ವಜರ ಆತ್ಮಕ್ಕೆ ಶಾಂತಿ ತರಲು ಧರೆಗೆ ಗಂಗೆಯನ್ನು ಕರೆ ತಂದ ಮಹಾನ್ ಪುರುಷ. ಹಾಗಾಗಿ ಅವರ ಜಯಂತಿ ಕೇವಲ ಭಾಷಣಕ್ಕೆ ಸೀಮಿತ ವಾಗಬಾರದು. ಜನಾಂಗದ ಅಭಿವೃದ್ಧಿಗೆ ಸಂಬಂಧಿಸಿದ ಚಿಂತನ-ಮಂಥನಗಳು ನಡೆಯುವ ಅಗತ್ಯವಿದೆ ಎಂದರು.

ಉಪ್ಪಾರ ಜನಾಂಗದ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಮಾತನಾಡಿ, ಉಪ್ಪಾರ ಸಮುದಾಯ ಒಂದು ವೃತ್ತಿಗೆ ಸೀಮಿತ ವಾಗಿಲ್ಲ. ಕಲ್ಲುಬಂಡೆ ಒಡೆಯುವ, ಮದ್ದು ಗುಂಡುಗಳಿಗೆ ಉಪ್ಪು ತಯಾರಿಸಿ ಕೊಡು ವುದು, ದೇವಸ್ಥಾನದ ಕಲ್ಲುಗಳನ್ನು ನಿರ್ಮಾಣ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಭಾರತದ ಬೇರೆ, ಬೇರೆ ರಾಜ್ಯಗಳಲ್ಲಿ ಉಪ್ಪಾರರು ವಾಸವಾಗಿದ್ದು, ಬೇರೆ ಬೇರೆ ಹೆಸರುಗಳಿಂದ ಅವರನ್ನು ಕರೆಯಲಾಗುತ್ತಿದೆ. ಮಹಾನ್ ಇತಿಹಾಸ ಹೊಂದಿರುವ ಸಮುದಾಯದವರು ಶೈಕ್ಷ ಣಿಕ ಕ್ಷೇತ್ರದಲ್ಲಿ ಹಿಂದುಳಿದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪ್ಪಾರ ಸಂಘದ ಕಾರ್ಯದರ್ಶಿ ಸಿದ್ದಶೆಟ್ಟಿ, ಎಪಿಎಂಸಿ ಸದಸ್ಯ ಮರಿಸ್ವಾಮಿ, ಸಿದ್ದಪ್ಪಸ್ವಾಮಿ, ಉಪನ್ಯಾಸಕ ಕುಮಾರಸ್ವಾಮಿ, ಆಹಾರ ಇಲಾಖೆಯ ಶಿರಸ್ತೇದಾರ್ ಸಣ್ಣಸ್ವಾಮಿ, ತಾಲೂಕು ವೈದ್ಯಾಧಿ ಕಾರಿ ಡಾ.ರವಿಕುಮಾರ್, ಶಿರಸ್ತೇದಾರ್ ಪ್ರಭುರಾಜ್, ಕೃಷ್ಣಮೂರ್ತಿ, ರಾಜ್ಯಸ್ವ ನಿರೀಕ್ಷಕ ಮಹದೇವ ನಾಯ್ಕ, ಶಂಭು ದೇವನಪುರ ರಮೇಶ್ ಮತ್ತಿತರರಿದ್ದರು.

Translate »