ಪ.ಜಾತಿ, ವರ್ಗದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ವಿತರಣೆ
ಮೈಸೂರು ಗ್ರಾಮಾಂತರ

ಪ.ಜಾತಿ, ವರ್ಗದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ವಿತರಣೆ

March 10, 2020

ಕೆ.ಆರ್.ನಗರ, ಮಾ.9(ಕೆಟಿಆರ್)- 2019-20ನೇ ಸಾಲಿನ 5ರಿಂದ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ.ಜಾತಿ, ವರ್ಗದ ವಿದ್ಯಾರ್ಥಿನಿಯರಿಗೆ ಪಟ್ಟಣದ ಕೆನರಾ ಬ್ಯಾಂಕ್‍ನಿಂದ ಖಾತೆ ತೆರೆದು ಶೈಕ್ಷಣಿಕ ಪ್ರೋತ್ಸಾಹ ಧನ ವಿತರಿಸಲಾಯಿತು.

ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಮಾಲತಿ ಕೆ.ಎಸ್, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಮೂವರು ವಿದ್ಯಾರ್ಥಿನಿಯರಿಗೆ ತಲಾ 2,500, ಪ್ರೌಢಶಾಲೆಯ ವಿದ್ಯಾ ರ್ಥಿನಿಯರಿಗೆ ತಲಾ 5 ಸಾವಿರ ರೂ. ವಿದ್ಯಾ ರ್ಥಿ ವೇತನ ವಿತರಿಸಿ ಮಾತನಾಡಿದರು.

ಬಡ ವಿದ್ಯಾರ್ಥಿನಿಯರು ಹಾಗೂ ಅತೀ ಹೆಚ್ಚು ಅಂಕಗಳಿಸಿದ ಮಹಿಳಾ ವಿದ್ಯಾರ್ಥಿಗಳಿಗೆ ನೆರವು ನೀಡಬೇಕೆಂಬ ಉದ್ದೇಶದಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹೆಣ್ಣು ಮಕ್ಕಳು ಉನ್ನತ ವ್ಯಾಸಂಗದಿಂದ ವಂಚಿತರಾಗಬಾರದು. ಬ್ಯಾಂಕ್‍ನ ಪ್ರೋತ್ಸಾಹ ಧನವನ್ನು ವಿದ್ಯಾ ರ್ಥಿಗಳು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆನರಾ ಬ್ಯಾಂಕ್‍ನ ಸಿದ್ದಯ್ಯ ಮಾತ ನಾಡಿ, ವಿದ್ಯಾರ್ಥಿಗಳು ಶ್ರಮ ವಹಿಸಿ ಉತ್ತಮ ಅಂಕ ಪಡೆದಿದ್ದು, ಅವರನ್ನು ಗುರುತಿಸಿ ಪ್ರೋತ್ಸಾಹ ಧನ ನೀಡಲಾಗಿದೆ. ಇದು ಅವರ ಶಿಕ್ಷಣಕ್ಕೆ ಅನುಕೂಲ ವಾಗುವ ಜತೆಗೆ ಇತರೆ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳಿಸಲು ಮಾದರಿ ಯಾಗಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ಸಿದ್ದಯ್ಯ, ರಾಮಣ್ಣ, ರಮೇಶ್, ಅನಿಲ್, ಸ್ಮಿತಾ, ಪೂಜಾ, ಭಾವನಾ ಮತ್ತು ಮುಖ್ಯಶಿಕ್ಷಕ ಮಂಜು ಹಾಗೂ ಪೋಷಕರಿದ್ದರು.

Translate »