ಹುಣಸೂರು ಮಾ.9(ಎಚ್‍ಎಸ್‍ಎಂ)- ಹುಣಸೂರು ತಾಲೂಕು ಗಾವಡಗೆರೆ ಚೆಕ್ ಪೋಸ್ಟ್‍ನಲ್ಲಿ ಮದ್ಯದ ವ್ಯಾಪಾರಿಯೊಬ್ಬರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ವೃತ್ತ ನಿರೀಕ್ಷಕ ಶಿವಕುಮಾರ್ ತಿಳಿಸಿದ್ದಾರೆ.
ಹುಣಸೂರು ತಾಲೂಕು ಗುರುಪುರ ಗ್ರಾಮದ ಬಾರ್ ಮಾಲೀಕ ಲಕ್ಷ್ಮಣ್ ಅವರು ತಮ್ಮ ಎರಿಟಿಗಾ ಕಾರಿ(ಕೆಎ45, ಎಂ3483) ನಲ್ಲಿ ಹೊಳೆನರಸೀಪುರದಿಂದ ಹುಣಸೂರು ಕಡೆಗೆ ಬರುತ್ತಿದ್ದ ವೇಳೆ ಗಾವಡಗೆರೆ ಚೆಕ್ ಪೋಸ್ಟ್‍ನಲ್ಲಿ ತನಿಖಾಧಿಕಾರಿ ಪ್ರಕಾಶ್ ನೇತೃತ್ವದ ತಂಡ ತಪಾಸಣೆ ನಡೆಸಿದ ವೇಳೆ ದಾಖಲೆ ಇಲ್ಲದ 3.40 ಲಕ್ಷ ರೂ. ನಗದು ಪತ್ತೆಯಾಗಿದೆ.
ಚೆಕ್ ಪೋಸ್ಟ್ ಸಿಬ್ಬಂದಿ ಮಾಹಿತಿ ನೀಡಿದ ಮೇರೆಗೆ ಹಿರಿಯ ಅಧಿಕಾರಿಗಳಾದ ಎ.ಸಿ. ಚಂದ್ರಶೇಖಯ್ಯ, ಮಾದರಿ ನೀತಿ ಚುನಾ ವಣೆ ಸಂಹಿತೆ ನೋಡಲ್ ಅಧಿಕಾರಿ ಕೃಷ್ಣ ಕುಮಾರ್, ತಹಸೀಲ್ದಾರ್ ಬಸವರಾಜು, ವೃತ್ತ ನಿರೀಕ್ಷಕ ಶಿವಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಗರದನ್ನು ವಶಕ್ಕೆ ಪಡೆದಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.