ಹದಿನಾರು ಗ್ರಾಮದ ಬಂಡೀಜಾತ್ರೆ ಸಿದ್ಧತೆ ಪರಿಶೀಲನೆ
ಮೈಸೂರು ಗ್ರಾಮಾಂತರ

ಹದಿನಾರು ಗ್ರಾಮದ ಬಂಡೀಜಾತ್ರೆ ಸಿದ್ಧತೆ ಪರಿಶೀಲನೆ

March 10, 2020

ಸುತ್ತೂರು, ಮಾ.9- ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಬಂಡೀ ಜಾತ್ರೆಗೆ ಸಿದ್ಧತೆ ಭರದಿಂದ ಸಾಗಿದ್ದು, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮ ದಲ್ಲಿ ಶ್ರೀ ಚೌಡೇಶ್ವರಿ, ಕಾಳಿಕಾಂಬ, ಮಣಿ ಯಮ್ಮ ಅಮ್ಮನವರ ಜಾತ್ರೆ ವಿಜೃಂಭಣೆ ಯಿಂದ ನಡೆಯಲಿದೆ. ಭಕ್ತಾದಿಗಳು ನೂಕು ನುಗ್ಗಲಿಲ್ಲದೆ ಜಾತ್ರೆ, ಕೊಂಡೋತ್ಸವ ವೀಕ್ಷಿ ಸಲು ಅನುಕೂಲವಾಗುವಂತೆ ಕ್ರೀಡಾಂಗಣ ಮಾದರಿಯಲ್ಲಿ 100ಕ್ಕೂ ಹೆಚ್ಚು ಮೆಟ್ಟಿಲು ಗಳನ್ನು ನಿರ್ಮಾಣ ಮಾಡಲಾಗಿದೆ. ಯದು ವಂಶದ ಮೂಲವಾದ ಈ ಗ್ರಾಮವನ್ನು ಅಭಿವೃದ್ಧಿಗೊಳಿಸಲಾಗಿದೆ. ಗ್ರಾಮದ ಕೆರೆಯನ್ನು ಪುನರುಜ್ಜೀವನಗೊಳಿಸಿ, ಪಕ್ಷಿ ಧಾಮ ನಿರ್ಮಾಣ ಮಾಡಲಾಗಿದೆ. ದೇಶ ವಿದೇಶಗಳಿಂದ ಪಕ್ಷಿಗಳು ಆಗಮಿಸುತ್ತಿದ್ದು, ಪಕ್ಷಿ ಪ್ರೇಮಿಗಳು ಸಂತಸಗೊಂಡಿದ್ದಾರೆ. ಗ್ರಾಮಸ್ಥರ ವಾಯುವಿಹಾರಕ್ಕೆ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಗ್ರಾಮದ ರಸ್ತೆ ಗಳನ್ನು ಕಾಂಕ್ರಿಟೀಕರಣಗೊಳಿಸಲಾಗಿದೆ. ಗ್ರಾಮ ರಾಜ್ಯದಲ್ಲೇ ಅಭಿವೃದ್ಧಿ ಹೊಂದಿದ 14ನೇ ಮಾದರಿ ಗ್ರಾಮವಾಗಿ ಸ್ಥಾನ ಪಡೆ ದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಹೆಚ್.ಎನ್.ನಂಜಪ್ಪ, ಗ್ರಾಪಂ ಅಧ್ಯಕ್ಷೆ ಸುಧಾ ಮಣಿ, ನಾಡಗೌಡರಾದ ಸೋಮಣ್ಣ, ಮಾಜಿ ಗ್ರಾಪಂ ಅಧ್ಯಕ್ಷ ಗುರುಮಲ್ಲಪ್ಪ, ಮುಖಂಡ ರಾದ ಹೆಚ್.ಸಿ.ನಿಂಗಯ್ಯ, ಪ್ರಮೋದ್ ಕುಮಾರ್, ಸ್ವಾಮಿ, ತಳೂರು ನಾಗಣ್ಣ, ಮಹೇಶ್, ಕಂಟ್ರಾಕ್ಟರ್ ಮಾಲಂಗಿ ನಾಗ ರಾಜು, ತಿಬ್ಬಣ್ಣ, ರಾಜು, ನನ್ನಯ್ಯ, ಕೆ.ಎಸ್.ಹುಂಡಿ ರವಿ, ಕೆ.ಎಸ್.ಯೋಗೇಶ್, ಸೇರಿದಂತೆ ಹಲವು ಮುಖಂಡರಿದ್ದರು.

Translate »