ಮೈಸೂರು,ಅ.1-ಮೈಸೂರಿನ ರಾಜ ಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಸ್ಥಾನದ ಆವ ರಣದಲ್ಲಿ ನರಸಿಂಹರಾಜ ಕ್ಷೇತ್ರದ ನೂತನ ಮಹಿಳಾ ಮೋರ್ಚಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ವಿತರಿಸಿದರು.
ನರಸಿಂಹರಾಜ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ ಚಂದ್ರಶೇಖರ್, ಉಪಾ ಧ್ಯಕ್ಷರಾದ ವನಜಾಕ್ಷಿ, ಕಸ್ತೂರಿ ಚಂದ್ರ ಶೇಖರ್, ದಿವ್ಯ ದಿವಾಕರ್, ಮಂಜುಳಾ, ಪ್ರಧಾನ ಕಾರ್ಯದರ್ಶಿಗಳಾದ ಅನಿತಾ, ರೀನಾ ಚಂಗಪ್ಪ, ಕಾರ್ಯದರ್ಶಿಗಳಾದ ಶಾಲಿನಿ, ಸುಬ್ಬಲಕ್ಷ್ಮಿ, ಸುಮಿತ್ರ, ಜೀಜಾಬಾಯಿ, ತುಳಸಿ, ಭಾಗ್ಯ, ಉಮಾಶ್ರೀ, ಉಮಾ ಅವರಿಗೆ ಪ್ರಮಾಣ ಪತ್ರ ನೀಡಿದರು.
ಬಿಜೆಪಿ ನಗರಾಧ್ಯಕ್ಷ ಟಿಎಸ್ ಶ್ರೀವತ್ಸ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದೇಶದ ಯುವ ಸಮಾರಂಭಕ್ಕೆ ಪ್ರೇರಣಾ ಶಕ್ತಿಯಾಗಿದ್ದಾರೆ. ಮೋದಿ ಅವರು ಸ್ವಾರ್ಥಿ ಯಲ್ಲ. ಅವರು ತನಗಾಗಿ ಬದುಕುವುದಿಲ್ಲ. ದೇಶದ ಭವಿಷ್ಯ ಉಜ್ವಲಗೊಳಿಸಲು ಮತ್ತು ಭಾರತವನ್ನು ವಿಶ್ವ ಗುರುವಾಗಿ ಮಾಡುವ ನಿಟ್ಟಿನಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ ಎಂದು ಹೇಳಿದರು.
ನರಸಿಂಹರಾಜ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ ಚಂದ್ರಶೇಖರ್ ಮಾತ ನಾಡಿ, ಚೈತನ್ಯದ ಚಿಲುಮೆಯಂತಿರುವ ಮೋದಿ ಅವರು ಯುವ ಪೀಳಿಗೆಗೆ ಆಶಾ ಕಿರಣ. ಅವರ ರಾಜನೀತಿ ಹಾಗೂ ಆಡಳಿತ ಮಾದರಿಯಾಗಿದೆ. ಜಗತ್ತಿನ ಹಲವು ರಾಷ್ಟ್ರ ಗಳು ಮೋದಿ ಅವರನ್ನು ಮೆಚ್ಚಿಕೊಂಡಿವೆ. ಮೋದಿಯವರ ದೂರದೃಷ್ಟಿಯ ಫಲವಾಗಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಜನರಿಗೆ ಅರಿವು ಮೂಡಿಸಿ ಯೋಜನೆಗಳು ಯಶಸ್ವಿಯಾಗು ವಂತೆ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ಸಿಗಬೇಕು. ಕಾರ್ಯಕರ್ತರು ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು ಎಂದರು. ಕ್ಷೇತ್ರದ ಅಧ್ಯಕ್ಷ ಭಾನುಪ್ರಕಾಶ್, ಮಹಿಳಾ ನಗರಾಧ್ಯಕ್ಷೆ ಹೇಮಾ ನಂದೀಶ್, ನಗರ ಪ್ರಧಾನ ಕಾರ್ಯ ದರ್ಶಿ ಎಚ್.ಜಿ.ಗಿರಿಧರ್, ಫಣಿಶ್ ಕುಮಾರ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಗಳಾದ ವೇಲು, ಸ್ವಾಮಿಗೌಡ, ಬಿಜೆಪಿ ಮಹಿಳಾ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್ ಇನ್ನಿತರರು ಹಾಜರಿದ್ದರು.