ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಸಮರ್ಥನಂ ಸುರಕ್ಷತಾ ಕಿಟ್ ವಿತರಣೆ
ಮೈಸೂರು

ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಸಮರ್ಥನಂ ಸುರಕ್ಷತಾ ಕಿಟ್ ವಿತರಣೆ

July 28, 2020

ಮೈಸೂರು, ಜು.27(ಆರ್‍ಕೆಬಿ)- ಕೋವಿಡ್-19 ನಿಯಂ ತ್ರಣದಲ್ಲಿ ಮುಂಚೂಣಿಯಲ್ಲಿ ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ಪೌರಕಾರ್ಮಿಕರಿಗೆ ಸಮರ್ಥನಂ ಅಂಗ ವಿಕಲರ ಸಂಸ್ಥೆ ವತಿಯಿಂದ ಸುರಕ್ಷತಾ ಕಿಟ್‍ಗಳನ್ನು ಗಾಯತ್ರಿಪುರಂನಲ್ಲಿರುವ ನಗರ ಪಾಲಿಕೆ ವಲಯ ಕಚೇರಿ-9ರ ಆವರಣದಲ್ಲಿ ವಿತರಿಸಲಾಯಿತು.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಕೋಕಾ-ಕೋಲಾ ಫೌಂಡೇಷನ್ ಮತ್ತು ಯುನೈಟೆಡ್ ವೇ ಮುಂಬೈ ಸಹಯೋಗದೊಂದಿಗೆ ಸಮರ್ಥನಂ ಅಂಗವಿಕಲರ ಸಂಸ್ಧೆಯು ಸ್ಯಾನಿಟೈಜರ್, ಮಾಸ್ಕ್, ಹ್ಯಾಂಡ್‍ವಾಷ್, ಮುಖ ಕವಚ, ಹ್ಯಾಂಡ್ ಗ್ಲೌಸ್ ಇನ್ನಿತರೆ ಪರಿಕರಗಳನ್ನು ಸಾಂಕೇತಿಕವಾಗಿ ನೀಡುವ ಮೂಲಕ ಉಪ ಮೇಯರ್ ಸಿ.ಶ್ರೀಧರ್ ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಮೇಯರ್ ಸಿ.ಶ್ರೀಧರ್, ಸಮರ್ಥನಂ ಅಂಗವಿಕಲರ ಸಂಸ್ಥೆಯು ದೇಶದ 13 ನಗರಗಳಲ್ಲಿ ಕೋವಿಡ್-19 ಪರಿಹಾರ ವಿತರಣಾ ಕಾರ್ಯಕ್ರಮಗಳನ್ನು ನಡೆಸಿದ್ದು, 11 ಆಸ್ಪತ್ರೆಗಳಲ್ಲಿ ದುಡಿ ಯುತ್ತಿರುವ ವೈದ್ಯಕೀಯ ತುರ್ತು ಸೇವಾ ಸಿಬ್ಬಂದಿಗಳಿಗೆ 20 ಸಾವಿರಕ್ಕೂ ಹೆಚ್ಚು ಪಿಪಿಇ ಕಿಟ್, 2 ಲಕ್ಷಕ್ಕೂ ಹೆಚ್ಚು ಜನರಿಗೆ ಪಡಿತರ ವಿತರಣೆ, ಕೋವಿಡ್ ಲಾಕ್‍ಡೌನ್ ನಿಂದಾಗಿ ಉದ್ಯೋಗ ಕಳೆದುಕೊಂಡ 1 ಸಾವಿರಕ್ಕೂ ಹೆಚ್ಚು ವಿಕಲಚೇತನರಿಗೆ ಜೀವನಾಧಾರವಾಗಿ ನಗರ ಪ್ರದೇಶ ಗಳಲ್ಲಿ ತಲಾ 7 ಸಾವಿರ, ಗ್ರಾಮೀಣ ಪ್ರದೇಶಗಳಲ್ಲಿ 5 ಸಾವಿರ ರೂ. ನಗದು ವರ್ಗಾವಣೆ, ಅಗತ್ಯ ವೈದ್ಯಕೀಯ ನೆರವು ನೀಡಿದೆ ಎಂದು ಸಮರ್ಥನಂ ಸಂಸ್ಥೆಯ ಮಾನ ವೀಯ ಕಾರ್ಯವನ್ನು ಶ್ಲಾಘಿಸಿದರು.

ವಿಕಲಚೇತನ ಅಧಿನಿಯಮ ವಿಶ್ರಾಂತ ಆಯುಕ್ತÀ ಕೆ.ವಿ. ರಾಜಣ್ಣ ಮಾತನಾಡಿ, ಸಮರ್ಥನಂ ಅಂಗವಿಕಲರ ಸಂಸ್ಥೆಯು ವಿಶ್ವ ಮಟ್ಟದಲ್ಲಿ ವಿಕಲಚೇತನರ ಅಭಿವೃದ್ಧಿಗೆ ದುಡಿಯು ತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಧರ ಕ್ರಿಕೆಟ್ ತಂಡ ಗಳನ್ನು ಸಂಘಟಿಸುವ ಮೂಲಕ ಅಂಧ ಆಟಗಾರರನ್ನು ಮುಂಚೂಣಿಗೆ ತರುವುದರಲ್ಲಿಯೂ ಶ್ರಮಿಸುತ್ತಿದೆ ಎಂದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾ ಗದ ಸಂಯೋಜಕ ಎಂ.ಶಿವರಾಜು ಮಾತನಾಡಿ, ಸಂಸ್ಥೆಯು ಆಶಾ, ಅಂಗನವಾಡಿ, ಸಮುದಾಯ ಆರೋಗ್ಯ ಮತ್ತು ಪೆÇಲೀಸ್ ಸೇರಿದಂತೆ 1,10,000 ವೈದ್ಯಕೀಯ ಪರಿಕರ ವಿತರಣೆ ಹಾಗೂ ಕೊರೊನಾ ವಾರಿಯರ್ಸ್‍ಗಳ 2500 ಮಕ್ಕ ಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಟ್ಯಾಬ್‍ಗಳು, ವರ್ಚುವಲ್ ಶಿಕ್ಷಣದ ಅಗತ್ಯ ವಸ್ತುಗಳು ಮತ್ತು ಬೇಸಿಗೆ ಶಿಬಿರ ಮಾಡಲಾ ಗಿದೆ. ಸಂಸ್ಥೆಯು ತನ್ನ ಎಲ್ಲಾ ಸಿಬ್ಬಂದಿಯ 1 ದಿನದ ವೇತನ 5 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿ ಹಾರ ನಿಧಿಗೆ ನೀಡಿದೆ ಎಂದರು. ಪಾಲಿಕೆ ವಲಯ-9ರ ಆಯುಕ್ತ ಮುರಳಿಧರ್, ಸಂಸ್ಥೆಯ ದರ್ಶನ್, ಸಿದ್ಧಾರೂಢ, ಪರಿಸರ ಅಭಿಯಂತರ ಚೇತನ್ ಇನ್ನಿತರರು ಉಪಸ್ಥಿತರಿದ್ದರು.

Translate »