ಕಾರುಗಳು ಡಿಕ್ಕಿ: ಪಯಣಿಸುತ್ತಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರು
ಮೈಸೂರು

ಕಾರುಗಳು ಡಿಕ್ಕಿ: ಪಯಣಿಸುತ್ತಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರು

July 28, 2020

ಮೈಸೂರು, ಜು. 27(ಆರ್‍ಕೆ)- ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆ ವಿಜಯಾ ಬ್ಯಾಂಕ್ ಸರ್ಕಲ್‍ನಲ್ಲಿ ಸೋಮವಾರ ಬೆಳಗ್ಗೆ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಮಾರುತಿ ಓಮ್ನಿ ಮತ್ತು ಸ್ವಿಫ್ಟ್ ಕಾರು ನಡುವೆ ಬೆಳಗ್ಗೆ 9.30 ಗಂಟೆಗೆ ಡಿಕ್ಕಿ ಸಂಭವಿ ಸಿದೆ. ಕಾರಿನಲ್ಲಿದ್ದವ ರಿಗೆ ಸಣ್ಣಪುಟ್ಟ ಗಾಯ ಗಳಾಯಿತು. ತಕ್ಷಣ ಸಾರ್ವಜನಿಕರು ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಘಟನೆಯಿಂದ ಎರಡೂ ಕಾರುಗಳು ಜಖಂಗೊಂಡವಾದರೂ, ಅವುಗಳಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಕೆಆರ್ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಹೆಚ್.ಎನ್.ವಿನಯ್ ತಿಳಿಸಿದ್ದಾರೆ.

Translate »