ಜಿಲ್ಲಾ ಕೋವಿಡ್ ಆಸ್ಪತ್ರೆ ದುರಂತಕ್ಕೆ  ಶಾಸಕ ಪುಟ್ಟರಂಗಶೆಟ್ಟಿ ಕಾರಣ
ಚಾಮರಾಜನಗರ

ಜಿಲ್ಲಾ ಕೋವಿಡ್ ಆಸ್ಪತ್ರೆ ದುರಂತಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಕಾರಣ

May 5, 2021

ಚಾಮರಾಜನಗರ, ಮೇ 4-ಶಾಸಕ ಪುಟ್ಟರಂಗಶೆಟ್ಟಿ ಚಾಮರಾಜನಗರದಲ್ಲಿ ಪ್ರತಿದಿನ ಆಸ್ಪತ್ರೆಗೆ ಭೇಟಿ ಕೊಟ್ಟು ಅಲ್ಲಿನ ಆಕ್ಸಿಜನ್ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿ ದಲ್ಲಿ ಈ ಅನಾಹುತ ತಪ್ಪಿಸಬಹುದಿತ್ತು ಎಂದು ಬಿಜೆಪಿಯ ಮುಖಂಡ ಮಲ್ಲೇಶ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಶಾಸಕ ಪುಟ್ಟರಂಗಶೆಟ್ಟಿ ಆಕ್ಸಿಜನ್ ಕೊರ ತೆಯ ಬಗ್ಗೆ ಮಾಹಿತಿ ಪಡೆದು ಮೈಸೂರಿನ ಜಿಲ್ಲಾಧಿಕಾರಿ ಸಿಂಧೂರಿಯನ್ನು ತರಾಟೆಗೆ ತೆಗೆದುಕೊಂಡಿದ್ದರೆ ಹಾಗೂ ಅವರು ಅದಕ್ಕೆ ಬಗ್ಗದಿದ್ದಲ್ಲಿ ಅವರ ನಿವಾಸದ ಮುಂದೆ ಧರಣಿ ಕೂರಬಹುದಿತ್ತು. ಇಲ್ಲ ಮಾಧ್ಯಮ ಗಳ ಮೂಲಕ ಗಮನ ಸೆಳೆದು ಮುಖ್ಯ ಮಂತ್ರಿ, ಮುಖ್ಯಕಾರ್ಯದರ್ಶಿಗೆ ಆಕ್ಸಿಜನ್ ಕೊರತೆಯ ಬಗ್ಗೆ ಮನವರಿಕೆ ಮಾಡಬಹು ದಿತ್ತು. ಆದರೆ ಪುಟ್ಟರಂಗಶೆಟ್ಟಿ ಈ ಬಗ್ಗೆ ಗಮನಹರಿಸದೆ ತಮ್ಮ ಮನೆಯಲ್ಲೇ ಕುಳಿತು ಅನಾಹುತಕ್ಕೆ ಕಾರಣರಾಗಿದ್ದಾರೆ. ಅವರು ತಾನೊಬ್ಬ ಶಾಸಕ ಎಂಬುದನ್ನೇ ಮರೆತು ಸಾಮಾನ್ಯನಂತೆ ಅಸಾಯಕತೆ ವ್ಯಕ್ತಪಡಿಸಿ ದ್ದಾರೆ ಎಂದು ಮಲ್ಲೇಶ ಹೇಳಿದ್ದಾರೆ.

ಶಾಸಕ ಪುಟ್ಟರಂಗಶೆಟ್ಟಿ ಇಲ್ಲಿಯ ತನಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಲೋಪದೋಷಗಳ ಬಗ್ಗೆ ಮಾಹಿತಿಯನ್ನೇ ಪಡೆದಿಲ್ಲ. ಇದಕ್ಕೆ ಸಾಕ್ಷಿಯನ್ನು ಅಲ್ಲಿನ ಸಿಸಿ ಕ್ಯಾಮೆರಾಗಳು ಹೇಳುತ್ತವೆ. ವಿನಾ ಕಾರಣ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡದೇ ತಪ್ಪನ್ನು ಒಪ್ಪಿಕೊಂಡು 24 ಜನರ ಸಾವಿನ ಹೊಣೆಯನ್ನು ಶಾಸಕರೇ ಹೊರಬೇಕು ಎಂದು ಆಗ್ರಹಿಸಿದ್ದಾರೆ.

ಪುಟ್ಟರಂಗಶೆಟ್ಟಿ ಅವರು ಈ ಹಿಂದೆ ಮಂತ್ರಿ ಸಹ ಆಗಿದ್ದರು. ಇವರಿಗೆ ಆರೋಗ್ಯ ಕಾರ್ಯದರ್ಶಿಗಳು, ಮುಖ್ಯ ಕಾರ್ಯ ದರ್ಶಿಗಳು, ರೀಜನಲ್ ಕಮಿಷನರ್‍ಗಳ ಬಗ್ಗೆ ಮಾಹಿತಿ ಇರಬೇಕಿತ್ತು. ಮೈಸೂರು ಜಿಲ್ಲಾಧಿಕಾರಿ ಸಿಂಧೂರಿ ಆಕ್ಸಿಜನ್ ಪೂರೈಕೆ ಯಲ್ಲಿ ನಿರ್ಲಕ್ಷ್ಯ ಮಾಡಿದ್ದಲ್ಲಿ ಮೇಲ್ಪಟ್ಟ ಅಧಿಕಾರಿಗಳ ಗಮನಕ್ಕೆ ತರಬಹುದಿತ್ತು. ಆದರೆ ಯಾವ ಜವಾ ಬ್ದಾರಿಯನ್ನು ನಿರ್ವ ಹಿಸದೆ ರಾಜ್ಯ ಸರ್ಕಾರವನ್ನು ದೂರುವುದ ರಲ್ಲಿ ಅರ್ಥವಿಲ್ಲ. ಈ ಸಾವುಗಳಿಗೆ ಅಧಿ ಕಾರಿಗಳೇ ನೇರ ಕಾರಣರಾಗಿದ್ದಾರೆ. ಅವರಿಗೆ ತಕ್ಕ ಶಿಕ್ಷೆ ಮುಂದೆ ಕಾದಿದೆ ಎಂದು ಮಲ್ಲೇಶ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾನು ಸಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಮನೆಯಲ್ಲಿ ಹೋಂ ಐಸೋಲೇಶನ್ ಇರ ಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಆದಕಾರಣ ಶೀಘ್ರದಲ್ಲೇ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ, ಅವರಿಗೆ ಸಾಂತ್ವನ ಹಾಗೂ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

Translate »