ಗುಂಡ್ಲುಪೇಟೆಯಲ್ಲಿ ಸ್ಯಾನಿಟೈಸಿಂಗ್ ಕಾರ್ಯಕ್ಕೆ ಚಾಲನೆ
ಮೈಸೂರು

ಗುಂಡ್ಲುಪೇಟೆಯಲ್ಲಿ ಸ್ಯಾನಿಟೈಸಿಂಗ್ ಕಾರ್ಯಕ್ಕೆ ಚಾಲನೆ

May 5, 2021

ಗುಂಡ್ಲುಪೇಟೆ,ಮೇ4 (ಸೋಮ್.ಜಿ)-ಕೊರೊನಾ ಬಗ್ಗೆ ಭಯ ಬೇಡ, ಜಾಗೃತಿ ಇರಲಿ. ತಾಲೂಕಿನಲ್ಲಿ ಕೋವಿಡ್ ಕೇರ್ ಆಸ್ಪತ್ರೆ ಹಾಗೂ ಸೆಂಟರ್‍ನ್ನು ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜನತೆ ಯಾವುದೇ ಕಾರಣಕ್ಕೂ ಭಯಭೀತ ರಾಗಬಾರದು ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಮನವಿ ಮಾಡಿದರು.

ಪಟ್ಟಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಸ್ಯಾನಿ ಟೈಸಿಂಗ್ ಕಾರ್ಯಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಕೊರೊನಾ ಬಗ್ಗೆ ಜನ ರಲ್ಲಿ ಅರಿವಿದೆ. ಈ ಬಗ್ಗೆ ಯಾವುದೇ ಕಾರ ಣಕ್ಕೂ ಭಯಬೇಡ. ಆದಷ್ಟು ಜಾಗ್ರತೆಯಿಂದ ಇರಬೇಕು. ಕೋವಿಡ್ ನಿಯಮಗಳನ್ನು ಪಾಲಿಸುವುದರೊಂದಿಗೆ ಕೊರೊನಾ ಮಹಾಮಾರಿಯಿಂದ ಪಾರಾಗಬಹುದು. ಸರ್ಕಾರ ದೊಂದಿಗೆ ಜನರ ಸಹಕಾರ ಬಹು ಮುಖ್ಯ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಹಗಲು-ರಾತ್ರಿ ಶ್ರಮಿಸುತ್ತಿದೆ. ಇದನ್ನು ಅರ್ಥಮಾಡಿಕೊಂಡು ಜನತೆ ನಿಯಮ ಗಳನ್ನು ಉಲ್ಲಂಘಿಸಬಾರದು. ಸಂಪೂರ್ಣ ಸಹಕಾರ ನೀಡಿದಾಗ ಮಾತ್ರ ಕೊರೊನಾ ಮಟ್ಟಹಾಕಲು ಸಾಧ್ಯ ಎಂದರು.

ಅಗ್ನಿಶಾಮಕ ವಾಹನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳನ್ನು ಸ್ಯಾನಿಟೈಸ್ ಮಾಡ ಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಎನ್.ರಮೇಶ್, ನಾಗೇಶ್, ಶಶಿಧರ್ (ದೀಪು), ತಾಪಂ ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ಮುಖ್ಯಾಧಿಕಾರಿ ಎ.ರಮೇಶ್, ಪರಿಸರ ಇಂಜಿ ನಿಯರ್ ಸಾಗರ್, ಆರೋಗ್ಯ ನಿರೀಕ್ಷಕ ಗೋಪಿ, ಅಗ್ನಿಶಾಮಕ ಇಲಾಖೆಯ ಹನು ಮಂತು, ಮುಖಂಡರಾದ ಹೊಸೂರು ಬಸವರಾಜು, ಕೊಡಸೋಗೆ ಸಿದ್ದರಾಮಪ್ಪ ಸೇರಿದಂತೆ ಹಲವರಿದ್ದರು.

Translate »