ಮೈಸೂರಲ್ಲಿ ಕೊರೊನಾಗೆ ಲಸಿಕೆ ಮೂಲಕ ಕಡಿವಾಣಕ್ಕೆ ಜಿಲ್ಲಾಡಳಿತ ಹರಸಾಹಸ
ಮೈಸೂರು

ಮೈಸೂರಲ್ಲಿ ಕೊರೊನಾಗೆ ಲಸಿಕೆ ಮೂಲಕ ಕಡಿವಾಣಕ್ಕೆ ಜಿಲ್ಲಾಡಳಿತ ಹರಸಾಹಸ

December 9, 2021

ಮೈಸೂರು,ಡಿ.8(ಎಂಟಿವೈ)-ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ರೂಪಾಂ ತರಿ ಒಮಿಕ್ರಾನ್, ಡೆಲ್ಟಾಫ್ಲಸ್‍ನಿಂದ ಜನರನ್ನು ರಕ್ಷಿ ಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಂಡಿದ್ದು, 2ನೇ ಡೋಸ್ ಲಸಿಕೆ ಪಡೆ ಯದೇ ಇರುವವರ ಪತ್ತೆ ಮಾಡುವುದರೊಂದಿಗೆ ಲಸಿಕೆ ಹಾಕುವ ಅಭಿಯಾನ ಚುರುಕುಗೊಳಿಸಲಾಗಿದೆ.

ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮನೆ ಮನೆಗೆ ತೆರಳಿ ಲಸಿಕೆ ಹಾಕುವುದರೊಂದಿಗೆ ಜನ ದಟ್ಟಣೆ ಇರುವ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಮೊಬೈಲ್ ಯೂನಿಟ್ ಸ್ಥಾಪಿಸಲಾಗಿದೆ. ಕಳೆದ 2 ತಿಂಗಳಿಂದ ಲಸಿಕೆ ಪಡೆಯುವಂತೆ ಮನವಿ ಮಾಡಿದರೂ ಹಿಂದೇಟು ಹಾಕುತ್ತಿದ್ದ ಕೆಲವರು ಇದೀಗ ಒಮಿಕ್ರಾನ್, ಡೆಲ್ಟಾ ಫ್ಲಸ್‍ನಿಂದ ಜೀವ ಉಳಿಸಿಕೊಳ್ಳಲು ತಾವಾಗಿಯೇ ಲಸಿಕೆ ಪಡೆದುಕೊಳ್ಳುವುದಕ್ಕೆ ಮುಂದೆ ಬರುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೆ ಸಮಾಧಾನ ತಂದಿದೆ. ಅಲ್ಲದೆ ಕಳೆದ ಎರಡು ದಿನಗಳಿಂದ ಲಸಿಕೆ ಪಡೆದು ಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಸೋಂಕಿನಿಂದ ಜನರನ್ನು ಪಾರು ಮಾಡಲು ಜಿಲ್ಲಾ ಡಳಿತ ನಿಟ್ಟುಸಿರು ಬಿಡುವಂತಾಗಿದೆ.

ಮುಂದುವರೆದ ತಪಾಸಣೆ: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸುವು ದರೊಂದಿಗೆ ಕೋವಿಡ್ ನಿಯಮ ಪಾಲಿಸದವರ ವಿರುದ್ಧ ದಂಡ ವಿಧಿಸಲು ಪಾಲಿಕೆ ಮುಂದಾಗಿದೆ. ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ನೇತೃತ್ವದಲ್ಲಿ ಎಲ್ಲಾ 9 ವಲಯಗಳಲ್ಲೂ ಪಾಲಿಕೆ ಆರೋಗ್ಯಾಧಿಕಾರಿಗಳ ತಂಡ ಕಾರ್ಯೋ ನ್ಮುಖವಾಗಿವೆ. ಅಲ್ಲದೆ, ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

ಸಿನಿಮಾಕ್ಕೂ ಲಸಿಕೆ ಕಡ್ಡಾಯ: ಮೈಸೂರಿನ ಚಿತ್ರ ಮಂದಿರ, ಮಾಲ್, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಬರುವವರು ಎರಡು ಡೋಸ್ ಲಸಿಕೆ ಪಡೆದ ದೃಢೀಕರಣ ಪತ್ರ ಪರಿಶೀಲಿಸುವ ಕಾರ್ಯಾಚರಣೆ ಬುಧವಾರವೂ ಮುಂದುವರೆಯಿತು. ಕಳೆದ 2 ದಿನಗಳಿಂದ ಮೈಸೂರಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪಾಲಿಕೆ ಸಿಬ್ಬಂದಿ ಇಂದು ಮೈಸೂ ರಿನ ಹ್ಯಾಬಿಟೇಟ್ ಮಾಲ್ ಸೇರಿದಂತೆ ವಿವಿಧ ಮಾಲ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ಖಾಸಗಿ ಭದ್ರತಾ ಸಿಬ್ಬಂದಿಗಳೊಂದಿಗೆ ಮಾಲ್‍ಗೆ ಹಾಗೂ ಮಲ್ಟಿಫ್ಲೆಕ್ಸ್ ಚಿತ್ರಮಂದಿರಕ್ಕೆ ಭೇಟಿ ನೀಡುವವರಿಂದ ಲಸಿಕೆ ಪಡೆದಿರುವುದು ಖಾತರಿಯಾದ ನಂತರವಷ್ಟೇ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು.

ಜಾಗೃತಿಯೊಂದಿಗೆ ದಂಡ ವಿಧಿಸಲಾಗುತ್ತದೆ: ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಲಸಿಕೆ ಪಡೆಯದೇ ಇರುವವರಿಗೆ ಮಾಲ್, ಚಿತ್ರಮಂದಿರ ಪ್ರವೇಶ ನಿರಾಕರಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸ ಲಾಗುತ್ತಿದೆ. ಇನ್ನು ಮುಂದೆ ಮಾಸ್ಕ್ ಧರಿಸದೇ ಇರುವವರ ವಿರುದ್ಧವೂ ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತದೆ ಎಂದರು.

ಚೇತರಿಸಿಕೊಂಡ ಲಸಿಕಾ ಅಭಿಯಾನ: ಜನ ದಟ್ಟಣೆ ಇರುವ ಪ್ರದೇಶದಲ್ಲಿ ಲಸಿಕೆ ಹಾಕುವುದಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸ್ಥಾಪಿಸಿರುವ ಮೊಬೈಲ್ ಯೂನಿಟ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೆ ಬೇರೆ ಬೇರೆ ಕಾರಣದಿಂದ ಇದುವರೆಗೂ ಲಸಿಕೆ ಪಡೆಯದೇ ಇದ್ದವರಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ಮೊಬೈಲ್ ಯೂನಿಟ್ ಸಹಕಾರಿಯಾಗಿದ್ದು, ಇಂದು ಸಹ ನೂರಾರು ಮಂದಿ ಮೊಬೈಲ್ ಯೂನಿಟ್‍ನಲ್ಲಿ ಲಸಿಕೆ ಪಡೆದರು. ಮೈಸೂರಿನ ಚಿಕ್ಕಗಡಿಯಾರದ ವೃತ್ತದ ಬಳಿ ಇಂದು ಇದ್ದ ಮೊಬೈಲ್ ಯೂನಿಟ್ ನಲ್ಲಿ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು, ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರು, ಆಟೋ ಚಾಲಕರು, ಅಸಂಘಟಿತ ನೌಕರರು ಸೇರಿ ದಂತೆ ಇನ್ನಿತರರು ತಮಗಿಷ್ಟವಾದ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆದರು.

Translate »