ಎರಡು ದಿನದಲ್ಲಿ 78 ಸಾವಿರ ಮಂದಿಗೆ ಲಸಿಕೆ
ಮೈಸೂರು

ಎರಡು ದಿನದಲ್ಲಿ 78 ಸಾವಿರ ಮಂದಿಗೆ ಲಸಿಕೆ

December 9, 2021

ಮೈಸೂರು,ಡಿ.8(ಎಂಟಿವೈ)- ಹೆಚ್ಚಾಗುತ್ತಿರುವ ಕೊರೊನಾ ಭೀತಿಯಿಂದಾಗಿ ಕೊನೆಗೂ ಜನ ಎಚ್ಚೆತ್ತುಕೊಂಡಿದ್ದು, ಬುಧವಾರ ಒಂದೇ ದಿನ 50 ಸಾವಿರ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು. ಮೈಸೂರು ಜಿಲ್ಲೆಯಲ್ಲಿ ಬುಧವಾರ 10300 ಮಂದಿ ಮೊದಲ ಡೋಸ್, 39948 ಮಂದಿ ಎರಡನೇ ಡೋಸ್ ಸೇರಿದಂತೆ 50 ಸಾವಿರ ಮಂದಿಗೆ ಲಸಿಕೆ ಹಾಕಲಾಗಿದೆ. ಮೈಸೂರು ನಗರದಲ್ಲಿ 3311 ಮೊದಲ ಡೋಸ್, 12293 ಎರಡನೇ ಡೋಸ್ ಸೇರಿದಂತೆ 15604 ಮಂದಿ ಲಸಿಕೆ ಪಡೆದಿದ್ದಾರೆ. ಮೈಸೂರು ತಾಲೂಕಲ್ಲಿ ಮೊದಲ ಡೋಸ್ 1405, ಎರಡನೇ ಡೋಸ್ 3551 ಸೇರಿ 4956 ಮಂದಿಗೆ ಲಸಿಕೆ ಹಾಕಲಾಗಿದೆ. ಟಿ.ನರಸೀಪುರ ತಾಲೂಕÀಲ್ಲಿ ಮೊದಲ ಡೋಸ್ 686, ಎರಡನೇ ಡೋಸ್ 4159 ಸೇರಿದಂತೆ 4845 ಮಂದಿ ಲಸಿಕೆ ಪಡೆದಿದ್ದಾರೆ. ನಂಜನಗೂಡು ತಾಲೂಕಲ್ಲಿ ಮೊದಲ ಡೋಸ್ 771, ಎರಡನೇ ಡೋಸ್ 2802 ಸೇರಿ 3573 ಮಂದಿಗೆ ಲಸಿಕೆ ಹಾಕಲಾಗಿದೆ. ಹುಣಸೂರು ತಾಲೂಕಲ್ಲಿ 890 ಮೊದಲ ಡೋಸ್, 2465 ಎರಡನೇ ಡೋಸ್ ಒಳಗೊಂಡಂತೆ 3355 ಮಂದಿ ಲಸಿಕೆ ಪಡೆದಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಲ್ಲಿ 807 ಮೊದಲ ಡೋಸ್, 7723 ಎರಡನೇ ಡೋಸ್ ಒಳಗೊಂಡಂತೆ 8530 ಮಂದಿಗೆ ಲಸಿಕೆ ಹಾಕಲಾಗಿದೆ. ಪಿರಿಯಾ ಪಟ್ಟಣ ತಾಲೂಕಲ್ಲಿ 2046 ಮೊದಲ ಡೋಸ್, 3921 ಎರಡನೇ ಡೋಸ್ ಸೇರಿದಂತೆ 5967 ಲಸಿಕೆ ಹಾಕಲಾಗಿದೆ. ಕೆ.ಆರ್.ನಗರ ತಾಲೂಕಲ್ಲಿ 384 ಮಂದಿಗೆ ಮೊದಲ ಡೋಸ್, 3034 ಮಂದಿಗೆ ಎರಡೇ ಡೋಸ್ ಸೇರಿ 2418 ಡೋಸ್ ಲಸಿಕೆ ಹಾಕಲಾಗಿದೆ. ಜಿಲ್ಲೆಯಲ್ಲಿ ಬುಧವಾರ 10300 ಮಂದಿ ಮೊದಲ ಡೋಸ್, 39948 ಮಂದಿ ಎರಡನೇ ಡೋಸ್ ಸೇರಿದಂತೆ 50248 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಮಂಗಳವಾರ 28 ಸಾವಿರ ಮಂದಿಗೆ ಲಸಿಕೆ ಹಾಕಲಾಗಿತ್ತು. ಜನರು ಲಸಿಕೆ ಪಡೆದು ಕೊರೊನಾದಿಂದ ಆಗಬಹುದಾದ ದುಷ್ಪರಿಣಾಮದಿಂದ ಪಾರಾಗುವಂತೆ ಸಲಹೆ ನೀಡಿದರು.

Translate »