ವೈದ್ಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಚಿತ ವರ್ತನೆ ಆರೋಪ:  ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಪ್ರತಿಭಟನೆ
ಹಾಸನ

ವೈದ್ಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಚಿತ ವರ್ತನೆ ಆರೋಪ: ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಪ್ರತಿಭಟನೆ

November 8, 2018

ಹಾಸನ: ಹಿರಿಯ ಪೊಲೀಸ್ ಅಧಿಕಾರಿಗಳು ಕರ್ತವ್ಯ ಸಮಯದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯರೊಂದಿಗೆ ಅಸಭ್ಯವಾಗಿ ವರ್ತಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದಿಂದ ತಾತ್ಕಾ ಲಿಕ ಕ್ಲಿನಿಕ್ ಬಂದ್ ಮಾಡಿ ಮೌನ ಪ್ರತಿ ಭಟನೆ ನಡೆಸಲಾಯಿತು.

ತಾತ್ಕಾಲಿಕ ಕ್ಲಿನಿಕ್ ಎದುರು ಕೆಲ ಸಮಯ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕರ್ನಾ ಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ (ಐಎಂಎ) ರವೀಂದ್ರ, ಪತ್ರಕರ್ತ ರೊಂದಿಗೆ ಮಾತನಾಡಿ, ಹಾಸನಾಂಬೆ ಬಾಗಿಲು ತೆರೆದ ದಿನದಿಂದ ಇಲ್ಲಿಯವ ರೆಗೂ ಭಕ್ತಾದಿಗಳ ಅನುಕೂಲಕ್ಕಾಗಿ ದೇವಾ ಲಯದ ಬಳಿ ಇರುವ ಶ್ರೀ ಪ್ರಸನ್ನ ಗಣಪತಿ ದೇವಾಲಯದ ಬಳಿ ಕುಟುಂಬ ಕಲ್ಯಾಣ ಇಲಾಖೆಯ ತಾತ್ಲಾಲಿಕ ಕ್ಲಿನಿಕ್ ತೆರೆಯ ಲಾಗಿದ್ದು, ವೈದ್ಯಾಧಿಕಾರಿಗಳು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದಾರೆ.

ಸೋಮವಾರ ರಾತ್ರಿ ಹಾಸನಾಂಬೆ ದರ್ಶನ ಕ್ಕಾಗಿ ಆರೋಗ್ಯ ಇಲಾಖೆಯ ನಿವೃತ್ತ ನಿರ್ದೇಶಕರೋರ್ವರು ಬಂದಂತಹ ಸಂದ ರ್ಭದಲ್ಲಿ ತಾತ್ಕಾಲಿಕ ಚಿಕಿತ್ಸಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಎಂ.ವಿ. ಸಂತೋಷ್ ಅವರು ತಾಲೂಕು ದಂಡಾ ಧಿಕಾರಿಗಳ ಪೂರ್ವಾನುಮತಿ ಪಡೆದು ದೇವಸ್ಥಾನ ಪ್ರವೇಶಿಸಲು ಮುಂದಾದಾಗ ಸ್ಥಳದಲ್ಲಿದ್ದ ಹಾಸನದ ಪೊಲೀಸ್ ವರಿಷ್ಠಾ ಧಿಕಾರಿ ಪ್ರಕಾಶ್‍ಗೌಡ ಅವರು ತಡೆದು ಏಕಾ ಏಕಿ ತಾಲೂಕು ಆರೋಗ್ಯಾಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ಅವರ ಕೊರಳಿನಲ್ಲಿದ್ದ ಗುರುತಿನ ಚೀಟಿಯನ್ನು ಕಸಿದುಕೊಂಡಿದ್ದಾರೆ ಎಂದು ದೂರಿದರು.

ಏಕವಚನದಲ್ಲಿ ಫ್ರಾಡ್ ಮಾಡಲು ಬಂದಿದ್ದೀಯಾ ಎಂದು ಗದರಿಸಿ ಕಳುಹಿಸಿದ್ದಾರೆ. ತುರ್ತು ಚಿಕಿತ್ಸೆಗೆಂದು ದೇವಾಲಯದ ಒಳಗೆ ಹೋಗಲು ಮುಂದಾದ ಅರೆ ವೈದ್ಯಕೀಯ ಸಿಬ್ಬಂದಿಗೂ ಪ್ರವೇಶ ನಿರಾಕರಿಸಿದ್ದಾರೆ ಎಂದರು. ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ರಕ್ಷಣೆ ಒದಗಿಸಬೇಕಾದ ಮತ್ತು ಎಲ್ಲರಿಗೂ ಮಾದರಿಯಾಗಿ ನಡೆದುಕೊಳ್ಳಬೇಕಾದ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳೇ ವೈದ್ಯಾಧಿ ಕಾರಿಗಳೊಂದಿಗೆ ಹಾಗೂ ಸಿಬ್ಬಂದಿ ಗಳೊಂದಿಗೆ ಅನುಚಿತವಾಗಿ ವರ್ತಿಸಿರುವುದು ತೀವ್ರಾಘಾತವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಹಿರಿಯ ಮಾಜಿ ನಿರ್ದೇಶಕ ನಟರಾಜು ದೇವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ದರ್ಶನ ಮಾಡಲು ಕೇಳಲಾಗಿದ್ದು, ವೈದ್ಯರಿಗೆ 5 ಪಾಸ್ ವಿತರಣೆ ಮಾಡಿ ದ್ದರು. ದೇವಾಲಯಕ್ಕೆ ಕರೆದೊಯ್ಯುವಾಗ ಎಸ್ಪಿ ಅವರು ಗುರುತಿನ ಕಾರ್ಡ್ ಕಿತ್ತು ಕೊಂಡಿದ್ದಾರೆ. ಒಬ್ಬ ವೈದ್ಯ ಎಂದು ಘನತೆ ತೋರದೆ ಏಕವಚನದಲ್ಲಿ ಮಾತನಾ ಡಿದ್ದಾರೆ. ಸ್ಟಾಫ್ ನರ್ಸ್ ಹೆಣ್ಣು ಮಗಳು ಎಂಬುದನ್ನೂ ನೋಡದೆ ಏಕವಚನದಲ್ಲಿ ಮಾತನಾಡಿದ್ದಾರೆ. ಇವರಿಬ್ಬರ ಬಳಿ ಪೊಲೀಸ್ ಅಧಿಕಾರಿಗಳು ಖುದ್ದಾಗಿ ಬಂದು ಕ್ಷಮೆ ಕೇಳ ಬೇಕು ಎಂದ ಅವರು, ಇಂದು ಸಂಘದ ತುರ್ತು ಸಭೆ ಕರೆಯಲಾಗಿದ್ದು, ಇಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ಎಸ್ಪಿಯವರೆ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಗಮನಕ್ಕೂ ತರುವ ಪ್ರಯತ್ನ ಮಾಡಲಾಗುವುದು. ಅಷ್ಟರೊ ಳಗೆ ಸಮಸ್ಯೆ ಪರಿಹಾರವಾದರೇ ಸಾಕು. ಇಲ್ಲವಾದರೇ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮತ್ತೊಮ್ಮೆ ಎಚ್ಚರಿಕೆ ಕೊಟ್ಟರು.

ಇದೆ ವೇಳೆ ಸಂಘದ ರಾಷ್ಟ್ರ ಉಪಾಧ್ಯಕ್ಷ ಪ್ರಭಾಕರ್, ಮಾಜಿ ಅಧ್ಯಕ್ಷ ಎ.ನಾಗ ರಾಜು, ಅಧ್ಯಕ್ಷ ಕಾಂತರಾಜು, ರಾಜ್ಯ ಉಪಾ ಧ್ಯಕ್ಷ ತಿಮ್ಮಯ್ಯ, ಹೆಚ್.ಎಲ್.ಜನಾರ್ಧನ್, ವಿಜಯ, ಶಿವಶಂಕರ್ ಇತರರು ಇದ್ದರು.

Translate »