ಸಚಿವ ಸ್ಥಾನ ಉಳಿಸಿಕೊಳ್ಳಲು ಜಯಮಾಲಾರಿಂದ ಹೆಚ್.ಡಿ.ರೇವಣ್ಣ ಹೊಗಳಿಕೆ
ಹಾಸನ

ಸಚಿವ ಸ್ಥಾನ ಉಳಿಸಿಕೊಳ್ಳಲು ಜಯಮಾಲಾರಿಂದ ಹೆಚ್.ಡಿ.ರೇವಣ್ಣ ಹೊಗಳಿಕೆ

November 8, 2018

ಹಾಸನ: ಸಚಿವ ಹೆಚ್.ಡಿ. ರೇವಣ್ಣ ರನ್ನು ಹೊಗಳುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎ. ಮಂಜು ವಾಗ್ದಾಳಿ ನಡೆಸಿದರು.

ಹಾಸನಾಂಬೆ ತಾಯಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಜೈನಕಾಶಿ ಶ್ರವಣಬೆಳ ಗೊಳದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಸರ್ಕಾರದ ವತಿಯಿಂದ ನೀಡಲಾದ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಜಯಮಾಲಾ ಅವರು ಸ್ವಾಮೀಜಿ ಯವರ ಕಾರ್ಯ ಮತ್ತು ಮಠದ ಬಗ್ಗೆ ಮಾತನಾಡುವುದನ್ನು ಬಿಟ್ಟು ರೇವಣ್ಣನವರನ್ನು ಹೊಗಳುವ ಕೆಲಸಕ್ಕೆ ಕೈಹಾಕಿರುವುದಾಗಿ ದೂರಿದರು.

ಜಯಮಾಲಾ ಅವರು ನೇರವಾಗಿ ಚುನಾವಣೆ ಎದುರಿಸಿ ಮಂತ್ರಿಯಾಗಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಹಿಂಬಾಗಿಲಿನಿಂದ ಸಚಿವರಾಗಿರುವುದರಿಂದ ಸಚಿವ ಸ್ಥಾನ ಉಳಿಸಿಕೊಳ್ಳಲು ಈ ರೀತಿ ಮಾಡು ತ್ತಿದ್ದಾರೆ. ಅವರು ನಟನೆ ಬಿಟ್ಟು ವಾಸ್ತವ ಸ್ಥಿತಿಯ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

ರೇವಣ್ಣ ಯಾವ ಸಾಮ್ರಾಜ್ಯ ಕಟ್ಟಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಅವರ ತಂದೆ ದೇವೇಗೌಡರು ಮತ್ತು ನಾನು ಕೂಡ ಈ ಜಿಲ್ಲೆಯಲ್ಲಿ ಸೋಲು-ಗೆಲುವುಗಳನ್ನು ಕಂಡಿದ್ದೇವೆ. ಆದರೆ ಚುನಾವಣೆಯನ್ನು ಎದುರಿಸದೇ ಸಚಿವ ಸ್ಥಾನ ಪಡೆದವರು ಎಲ್ಲಿ ಸಚಿವ ಸ್ಥಾನ ಹೋಗುತ್ತದೋ ಎಂಬ ಭಯದಿಂದ ಈ ರೀತಿ ಮಾತನಾಡುತ್ತಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಕಾಗೋಡು ತಿಮ್ಮಪ್ಪರನ್ನು ಮಂತ್ರಿ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ ತಕ್ಷಣ ಜಯಮಾಲಾ ಅವರಿಗೆ ಭಯವಾಗಿ ರೇವಣ್ಣರನ್ನು ಹೊಗಳುವ ಮೂಲಕ ಅವರ ಕೈ, ಕಾಲು ಹಿಡಿ ದುಕೊಂಡು ಸಚಿವ ಸ್ಥಾನ ಉಳಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಾವು ಜಿಲ್ಲೆ ಯಲ್ಲಿ ಅವರ ಅಪ್ಪ-ಮಕ್ಕಳ ವಿರುದ್ಧವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ ಕಾಂಗ್ರೆಸ್ ನಾಯಕರು ಈ ರೀತಿ ಬಂದು ಅವರನ್ನು ಹೊಗಳುವ ಮೂಲಕ ಪಕ್ಷಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ ಈ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ನೀಡು ವುದಾಗಿ ಹೇಳಿದರು. ಜಯಮಾಲಾ ಅವರು ನನಗೂ ಕೂಡ ಆಪ್ತರು. ಆದರೆ ಈ ರೀತಿ ಪಕ್ಷದ ವಿರುದ್ಧವಾಗಿ ಹೊಗಳಿರು ವುದು ನಿಜಕ್ಕೂ ಖಂಡನೀಯ ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದೆ ಅದು ಎಷ್ಟು ದಿನ ಇರುತ್ತದೆ ಇಲ್ಲವೋ ಎಂಬುದು ಪ್ರಶ್ನೆಯಲ್ಲ ಆದರೆ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.

Translate »