ದಲಿತರ ಮತ ಕೇಳುವ ನೈತಿಕತೆ ಗೌಡರಿಗಿಲ್ಲ: ಎ.ಮಂಜು
ಹಾಸನ

ದಲಿತರ ಮತ ಕೇಳುವ ನೈತಿಕತೆ ಗೌಡರಿಗಿಲ್ಲ: ಎ.ಮಂಜು

March 18, 2019

ಬೇಲೂರು: ದಲಿತರ ಬಗ್ಗೆ ಮಾತನಾಡುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಕಾಂಗ್ರೆಸ್‍ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲಿ. ಅವರಿಗೆ ದಲಿತರ ಮತ ಕೇಳುವ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಎ.ಮಂಜು ಕಿಡಿಕಾರಿದರು.

ಬೇಲೂರು ಪಟ್ಟಣದ ಸಂಬಂಧಿಕರೊಬ್ಬರ ಮನೆಗೆ ಆಗಮಿಸಿದ ಅವರು ಮುಂಬ ರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ನಂತರ ಮಾತನಾಡಿದ ಅವರು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಭಾಷಣದ ಉದ್ದಕ್ಕೂ ಕಾಂಗ್ರೆಸ್‍ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿ ಎಂದು ನಾನು ಎಐ ಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಯವರಿಗೆ ಹೇಳಿದೆ. ಆದರೆ, ಅವರೇ ಬೇಡ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರು ಎಂದು ಸುಳ್ಳು ಹೇಳಿಕೊಂಡು ರಾಜ್ಯದ ದಲಿತರ ಓಲೈಸಿ ಮತ ಪಡೆಯಲು ದೇವೇಗೌಡರು ಯೋಚಿಸು ತ್ತಿದ್ದಾರೆ ಎಂದು ದೂರಿದರು.

ದೇವೇಗೌಡರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ, ಈಗಲೂ ಅವಕಾಶವಿದೆ. ತಮ್ಮ ಮಗ ಕುಮಾರಸ್ವಾಮಿಯಿಂದ ರಾಜೀ ನಾಮೆ ಕೊಡಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ತೋರಿ ಸಲಿ. ಅವರದ್ದೇ ಪಕ್ಷದಲ್ಲಿ ಇರುವ ಕೆಲ ದಲಿತ ಶಾಸಕರು ಜಿಲ್ಲೆಯಲ್ಲಿ ಕಳೆದ ಏಳು ಬಾರಿ ಶಾಸಕರಾಗಿ ಆಯ್ಕೆಯಾzರೂ ಮಂತ್ರಿ ಮಾಡಿಲ್ಲ. ಅವರಿಗೆ ದಲಿತರ ಮತ ಪಡೆಯಲು ಯಾವ ನೈತಿಕತೆ ಇದೆ? ಎಂದ ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದರೂ ಹಾಸನ ಜಿಲ್ಲೆ ಯಲ್ಲಿ ಕೇವಲ ಒಂದು ಕುಟುಂಬಕ್ಕೆ ಸೀಮಿತವಾದ ಸರ್ಕಾರವಾಗಿದೆ. ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಿ ಜೆಡಿಎಸ್ ಕಾರ್ಯಕರ್ತರ ಬೆಂಬಲಕ್ಕೆ ನಿಂತಿರುವ ಈ ಕುಟುಂಬ ರಾಜಕಾರಣಕ್ಕೆ ಈ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ಜಿಲ್ಲೆಯ ಜನ ತಕ್ಕ ಪಾಠ ಕಲಿಸ ಲಿದ್ದಾರೆ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಅಥವಾ ಬಿಜೆಪಿ ಯಾವುದೇ ಪಕ್ಷದ ಎರಡನೇ ಹಂತದ ನಾಯಕರು ಗಳಿಗೆ ಅವಕಾಶ ಸಿಗಬೇಕಾದರೆ ಈ ಕುಟುಂಬ ರಾಜಕಾರಣವನ್ನು ದೂರ ಮಾಡಬೇಕಿದೆ ಎಂದರು.

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್, ಜೆಡಿ ಎಸ್ ಕ್ಷೇತ್ರಗಳನ್ನು ಹಂಚಿಕೆ ಮಾಡಿ ಕೊಂಡು ಗ್ರಾಮ ಪಂಚಾಯಿತಿ ಚುನಾ ವಣೆಯ ಅನುಭವವಿಲ್ಲದ ಮೊಮ್ಮಕ್ಕಳನ್ನು ಏಕಾಏಕಿ ಪಾರ್ಲಿಮೆಂಟ್ ಚುನಾವಣೆಗೆ ನಿಲ್ಲಿಸುವ ಮೂಲಕ ಅವರ ಕುಟುಂಬ ರಾಜಕೀಯಕ್ಕೆ ಹಾಗೂ ಅವರ ಪಕ್ಷ ಬೆಳೆಸಿ ಕೊಳ್ಳುವುದಕ್ಕೆ ಮುಂದಾಗಿದ್ದರೆ ಹೊರತು ರಾಜ್ಯದ ಅಭಿವೃದ್ಧಿಯಾಗಲಿ ಅಥವಾ ರಾಷ್ಟ್ರೀಯ ರಾಜಕಾರಣದ ಹಿತಾಸಕ್ತಿಗಾಗಿ ಅಲ್ಲ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರ ನಿಲುವು ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಬೇಸತ್ತು ಅವರ ವಿರುದ್ಧವಾಗಿ ನನ್ನ ತೀರ್ಮಾನಕ್ಕೆ ಈ ಚುನಾವಣೆಯಲ್ಲಿ ಸಹಕರಿಸುವ ಒಗ್ಗಟ್ಟಿನ ಸೂಚನೆ ನೀಡಿದ್ದಾರೆ. ಅದರ ಜೊತೆಗೆ ಕೆಲವೊಂದು ತಿಳುವಳಿಕೆಯನ್ನು ನನಗೆ ತಿದ್ದಿಕೊಳ್ಳಲು ಹೇಳಿದ್ದಾರೆ. ನಾನು ತಿದ್ದಿ ಕೊಳ್ಳುತ್ತೇನೆ, ಅದು ನನ್ನ ಜವಾಬ್ದಾರಿ ಯಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಶಾಂತಿ ಪಾಲನೆ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಕಡಿದಾಳ ಮಂಜಪ್ಪ, ಮುಖಂಡ ರಾದ ಕೆ.ಪಿ.ಶೈಲೇಶ್‍ಗೌಡ, ಶ್ರೀಚನ್ನಕೇಶವ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ನಿಶಾಂತ್, ರಾಜೇಗೌಡ, ನಟೇಕೆರೆ ಮಂಜುನಾಥ್, ರಾಮೇನಹಳ್ಳಿ ವೆಂಕ ಟೇಶ್, ಚಿಕೊಲೆ ಚಂದ್ರು, ಶಿವರಾಜು, ವೆಂಕಟೇಶ್, ದಾಸಪ್ಪ, ಪ್ರಸನ್ನ, ಚಂದ್ರು ಇತರರು ಇದ್ದರು.

Translate »