ಉತ್ತಮ ಕವನ ರಚನೆಗೆ ಭಾವನಾತ್ಮಕತೆ ಅಗತ್ಯ
ಹಾಸನ

ಉತ್ತಮ ಕವನ ರಚನೆಗೆ ಭಾವನಾತ್ಮಕತೆ ಅಗತ್ಯ

March 18, 2019

ಆಲೂರು: ಕಾವ್ಯ ರಚನೆಯಲ್ಲಿ ಮುಖ್ಯವಾಗಿ ಬೇಕಾದುದು ವಸ್ತುವಿನ ಆಯ್ಕೆ. ಅದು ಸದಾಕಾಲ ಉಳಿದರೆ ಕವನವೂ ಎಲ್ಲ್ಲಾ ಕಾಲಘಟ್ಟದಲ್ಲೂ ಗಟ್ಟಿಯಾಗಿ ನಿಲ್ಲುತ್ತದೆ. ನಮ್ಮ ಸುತ್ತಲಿನ ವಿಷಯಗಳೇ ಕವನಕ್ಕೆ ವಸ್ತುವಾಗಬಲ್ಲವು. ಪ್ರಕೃತಿಯಲ್ಲಿನ ಎಲ್ಲ ವಿಷಯಗಳೂ ಕವಿಯ ಭಾವನೆಗಳನ್ನು ಪ್ರೇರೇಪಿಸುವಂತಿವೆ. ಉತ್ತಮವಾದ ಕವನ ರಚಿಸಲು ಕವಿಗೆ ಭಾವನಾತ್ಮಕತೆ ಇರ ಬೇಕು. ಇಲ್ಲವಾದಲ್ಲಿ ಶುಷ್ಕತೆ ಕವನದಲ್ಲಿ ಎದ್ದು ಕಾಣುತ್ತದೆ ಎಂದು ಹಿರಿಯ ಕವ ಯಿತ್ರಿ ಎಸ್.ಲಲಿತಾ ಹೇಳಿದರು.

ಪಟ್ಟಣದ ಸಂತ ಬಿಲಿವಿಯರ್ಸ್ ಚರ್ಚ್‍ನಲ್ಲಿ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಯಿಂದ ಹಮ್ಮಿಕೊಂಡಿದ್ದ ತಾಲೂಕು ಪದ ಗ್ರಹಣ ಹಾಗೂ ಜಿಲ್ಲಾ ಮಟ್ಟದ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಕವನ ಬರೆಯುವ ಮುನ್ನ ಹಿರಿಯ ಮತ್ತು ಪ್ರಸಿದ್ಧ ಕವಿಗಳ ಕವನಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದರಿಂದ ಕವಿತೆಯ ರಚನೆಯ ಕುರಿತು ಮನಸ್ಸಿನಲ್ಲಿ ಒಂದಿಷ್ಟು ರೂಪುರೇಷೆಗಳು ಮೂಡುತ್ತವೆ. ಬಳಿಕ, ಕವಿ ತನ್ನದೇ ಶೈಲಿಯನ್ನು ಸೃಷ್ಟಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಪ್ರಕೃತಿಯ ವಿಷಯವನ್ನು ಕುರಿತು ಇಬ್ಬರು ಕವಿಗಳ ಮನಗಳೂ ಒಂದೇ ರೀತಿ ಯೋಚಿ ಸಿವೆ ಎನ್ನುವುದೇ ವಿಸ್ಮಯಕಾರಿ ಸಂಗತಿ ಯಾಗಿದೆ. ಜಿಎಸ್‍ಎಸ್ ಅವರ ‘ಯಾವ ಮೋಹನ ಮುರಳಿ ಕರೆಯಿತೋ… ದೂರ ತೀರಕೆ ನಿನ್ನನು’ ಎನ್ನುವ ಸಾಲುಗಳು ಓದು ಗರನ್ನು ಬಹಳವಾಗಿ ಚಿಂತನೆಗೆ ದೂಡುತ್ತದೆ. ಕವಿ ನಿಸಾರ್‍ಅಹಮದ್ ಅವರು ತಮ್ಮ ನಿತ್ಯೋತ್ಸವ ಕವಿತೆಯಲ್ಲಿ ಕನ್ನಡನಾಡನ್ನು ತಾಯಿಯೆಂದು ಭಾವಿಸಿ ‘ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯೇ ನಿನಗೆ ನಿತ್ಯೋತ್ಸವ’ ಎಂದಿದ್ದಾರೆ. ಇದು ನಮ್ಮಲ್ಲಿನ ವನಸಂಪತ್ತಿನ ಸಮೃದ್ಧಿಯ ಸೂಚಕವಾ ಗಿದೆ. ಇಂತಹ ಭಾವಪೂರ್ಣ ಕವಿತೆಗಳ ಸಾಲನ್ನು ಓದಿದ ನಂತರ ನಾವು ಬರೆದ ಕವನಗಳನ್ನು ಮತ್ತೊಮ್ಮೆ ಓದಿದರೆ ಕವನದ ಲೋಕದಲ್ಲಿ ನಮ್ಮ ಸ್ಥಾನ ಎಷ್ಟನೆ ಯದು ಎಂಬುದನ್ನು ನಾವೇ ತಿಳಿಯ ಬಹುದು. ಸಮಾಜ ಕವಿಗಳಿಗೆ ವಿಶೇಷ ಮಾನ್ಯತೆಯನ್ನು ನೀಡಿದೆ. ಅದನ್ನು ಉಳಿಸಿಕೊಳ್ಳಲಾದರೂ ನಮ್ಮಿಂದ ಉತ್ತಮ ಕವಿತೆಗಳು ರಚನೆಯಾಗಬೇಕು ಎಂದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಕುಮಾರ್ ಛಲವಾದಿ ಆಶಯ ನುಡಿಗಳನ್ನಾಡಿದರು. ಕಸಾಪ ಮಾಜಿ ಅಧ್ಯಕ್ಷ ಫಾ.ಹೈ.ಗುಲಾಂ ಸತ್ತಾರ್, ರಾಜ್ಯ ಸಮಿತಿ ಸದಸ್ಯ ನಾಗರಾಜ ದೊಡ್ಡ ಮನಿ, ಮುಖಂಡರಾದ ಎಚ್.ಎಸ್. ಬಸವರಾಜ್, ವಾಣಿಮಹೇಶ್ ಅವರು ಗಳು ವೇದಿಕೆಯ ಧ್ಯೇಯೋದ್ಧೇಶಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್, ಮುಖಂಡರಾದ ಫಾದರ್ ಬಸವರಾಜ್, ವಾಸು ಸಮುದ್ರ ವಳ್ಳಿ, ಗಂಜಲಗೂಡು ಗೋಪಾಲೇಗೌಡ, ಹೆತ್ತೂರು ನಾಗರಾಜು, ನಟರಾಜು ನಾಕಲಗೂಡು, ಎಚ್.ಎಸ್.ವೆಂಕಟೇಶ್, ಟಿ.ಕೆ.ನಾಗರಾಜ್, ಟಿ.ಕೆ.ಕುಮಾರಸ್ವಾಮಿ, ಎಚ್.ಡಿ.ಪ್ರದೀಪ್, ಬ್ಯಾಕರವಳ್ಳಿ ವೆಂಕಟೇಶ್, ಆದಿಲ್ ಪಾಷ, ಸಲೀಂ, ಟಿ.ಎಂ.ಸತೀಶ್ ಇದ್ದರು.

Translate »