ಮಹಿಳೆಯರನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸಬೇಡಿ: ಭಾರತೀದೇವಿ
ಹಾಸನ

ಮಹಿಳೆಯರನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸಬೇಡಿ: ಭಾರತೀದೇವಿ

March 18, 2019

ಹಾಸನ: ಮಹಿಳೆಯರನ್ನು ಒಂದು ಚೌಕಟ್ಟಿಗೆ ಒಳಪಡಿಸುವ ಮೂಲಕ ಅವರನ್ನು ಸೀಮಿತಗೊಳಿಸಲಾಗುತ್ತಿದ್ದು ಹೊಸ ತಲೆಮಾರು ಕೂಡ ಇದನ್ನು ಮುಂದು ವರೆಸುತ್ತಿರುವುದು ದುರಂತ ಎಂದು ಸರ್ಕಾರಿ ಗೃಹ ಕಾಲೇಜಿನ ಉಪನ್ಯಾಸಕಿ ಡಾ.ಭಾರತೀದೇವಿ ವಿಷಾದಿಸಿದರು.

ನಗರದ ಸಂಸ್ಕೃತ ಭವನದಲ್ಲಿ ಪ್ರಕೃತಿ ಮಹಿಳಾ ಸಂಘ, ಸಾವಿತ್ರಿ ಬಾಯಿ ಸಾಂಸ್ಕೃತಿಕ ಮಹಿಳಾ ಸಂಘ ಹಾಗೂ ಹಾಸನಾಂಬ ಮಹಿಳಾ ಸಂಘದಿಂದ ನಡೆದ ಅಂತಾರಾ ಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ವರ್ಷಗಳಿಂದಲೂ ಮಹಿಳೆ ಯರನ್ನು ಎರಡನೇ ದರ್ಜೆಯ ಮನುಷ್ಯ ರಂತೆ ನೋಡಲಾಗುತ್ತಿದೆ. ಮಹಿಳೆಯ ರನ್ನು ನಿರ್ದಿಷ್ಟ ಮಾನದಂಡಗಳಿಗೆ ಒಳ ಪಡಿಸಬೇಡಿ. ಪುರುಷ ಪ್ರಧಾನ ಮನಸ್ಥಿತಿ ಕೇವಲ ಪುರುಷನದ್ದು ಎನ್ನುವುದು ಸರಿಯಲ್ಲ. ಅದೊಂದು ಸಮಾಜದ ಸ್ಥಿತಿ. ಯಾವುದೇ ಒಂದು ಕಾರಣದಿಂದ ನಾನು ಸ್ವತಂತ್ರ ಳಾದೆ ಎನ್ನುವುದು ತಪ್ಪು. ನಮ್ಮೊಳಗೆ ಒಳ್ಳೆಯ ಗುಣ ಬೆಳೆಯುತ್ತಾ ಹೋಗಬೇಕು. ಸಂಸ್ಕೃತಿ, ಧರ್ಮ, ಜಾತಿ, ಸೌಂದರ್ಯದ ಹೆಸರಲ್ಲಿ ನಡೆಯುತ್ತಿರುವ ಮಹಿಳಾ ದÀಮನಕಾರಿ ನೀತಿಯ ವಿರುದ್ಧ ಹೋರಾಟ ಮಾಡಿ ಸಮಾ ಜದ ತಲೆಯಲ್ಲಿರುವ ಮೂಲ ರೋಗಾಣುವನ್ನು ತೊಡೆದು ಹಾಕಬೇಕಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಶಿಕ್ಷಣ ಕೊಟ್ಟ ಸಾವಿತ್ರಿ ಫುಲೆ ನಮ್ಮೆಲ್ಲರಿಗೂ ಮಾದರಿ. ಅವರು ಶಿಕ್ಷಣ ಕೊಡದಿದ್ದರೆ ಇಂದು ನಮ್ಮ ಸ್ಥಿತಿ ಭಿನ್ನವಾಗಿರುತ್ತಿತ್ತು. ಮಹಿಳಾವಾದ ಮತ್ತು ಮೀ ಟೂ ಅಭಿಯಾನಗಳು ಮಹಿಳಾ ಹಕ್ಕಿನ ಮುಂದುವರೆದ ಹೋರಾಟಗಳು. ಮಹಿಳೆಯರ ಒಳಿತಿಗಾಗಿ ಹಾಗೂ ಇಡೀ ಸಮಾಜದ ಒಳಿತಿಗಾಗಿ ಸಮಾನತೆ ಬೇಕಾಗಿದೆ ಎಂದು ಪ್ರತಿಪಾದಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್.ಉದಯಕುಮಾರ್ ಮಾತನಾಡಿ, ಮಹಿಳಾ ಹೋರಾಟಗಳು ಇಂದು ಹೆಚ್ಚು ಪ್ರಸ್ತುತವಾಗುತ್ತಿದ್ದು ಮಾಧ್ಯಮಗಳು ಬೆಂಬಲಿಸುತ್ತಿವೆ. ಸಮ ಸಮಾಜ ನಿರ್ಮಾಣಕ್ಕೆ ಮಹಿಳಾ ದನಿ ಮತ್ತು ಹೋರಾಟಗಳು ಹೆಚ್ಚು ಅಗತ್ಯವಾ ಗಿದ್ದು, ಈ ನಿಟ್ಟಿನಲ್ಲಿ ಪುರುಷರ ಪಾತ್ರವೂ ಅಪಾರವಾಗಿದೆ ಎಂದರು.
4ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರಶ್ಮಿ, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಪ್ರಕೃತಿ ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಾ ಬೋರೇಗೌಡ, ಸಾವಿತ್ರಿ ಫುಲೆ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಭವ್ಯಾ ನಾಗರಾಜ್ ಉಪಸ್ಥಿತರಿದ್ದರು. ಪ್ರಕೃತಿ ಸಮುದಾಯ ಸಂಸ್ಥೆಯ ವರ್ಷಾ ಅವ ರನ್ನು ಇದೇ ಸಂದರ್ಭ ಸನ್ಮಾನಿಸಲಾ ಯಿತು. ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Translate »