‘ಕೈ’ಗೆ ಶಾಕ್ ನೀಡಲಿದ್ದಾರಾ ಎ.ಮಂಜು?
ಹಾಸನ

‘ಕೈ’ಗೆ ಶಾಕ್ ನೀಡಲಿದ್ದಾರಾ ಎ.ಮಂಜು?

March 17, 2019

ನೂರಾರು ಬೆಂಬಲಿಗರೊಂದಿಗೆ ‘ಕಮಲ’ ಹಿಡಿಯಲು ಮಂಜು ರೆಡಿ, ಜಿಲ್ಲೆಯಲ್ಲಿ ‘ಕೈ’ ಭವಿಷ್ಯ ಅಂತ್ಯವಾಗುವ ಭೀತಿ

ಹಾಸನ: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾ ಗಿದ್ದು, ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಗಳು ಸಂಚಲನ ಮೂಡಿಸಿದೆ. ಈಗಾ ಗಲೇ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾಗಿ ಪ್ರಜ್ವಲ್ ಕಣಕ್ಕಿಳಿದಿದ್ದು, ಚುನಾ ವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇವರಿಗೆ ಸವಾಲೊಡ್ಡಲು ಮತ್ತೊಂದೆಡೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ‘ಕೈ’ ತೊರೆದು ಬಿಜೆಪಿ ಸೇರು ತ್ತಾರೆಂಬ ಚರ್ಚೆ ಶುರುವಾಗಿದೆ.

ಮಾಜಿ ಸಚಿವ ಎ.ಮಂಜು ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರನ್ನು ಬಿಜೆಪಿಗೆ ಕರೆದೊಯ್ಯುವ ಸಾಧ್ಯತೆ ಇರುವ ಕಾರಣ ಜಿಲ್ಲೆಯಲ್ಲಿ ಕಾಂಗ್ರೆಸ್ ಅತಂತ್ರವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸೇರುವ ಕುರಿತು ಮಂಜು ಅವರು ರಾಜ್ಯ ಬಿಜೆಪಿ ನಾಯಕರ ಜೊತೆ ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಮಂಜು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹಾಗೂ ಶನಿವಾರ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರ ಮನೆಗೆ ಭೇಟಿ ನೀಡಿರುವುದು ಇದಕ್ಕೆ ಪುಷ್ಟಿ ನೀಡಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂಬ ಊಹಾಪೆÇೀಹ ಜಿಲ್ಲಾ ರಾಜಕಾರಣದಲ್ಲಿ ಶುರುವಾಗಿದೆ.

ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡ ವಿರುದ್ಧ ಸ್ಪರ್ಧಿಸಿದ್ದ ಮಂಜು, ಗೌಡರ ಗೆಲುವಿನ ಅಂತರವನ್ನು 1.6ಲಕ್ಷ ಮತಗಳಿಗೆ ಇಳಿಸಿದ್ದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸೋತಿರುವ ಅವರು, ಮರಳಿ ರಾಜಕೀಯ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಹೊಂದಿದ್ದಾರೆ. ಮಂಜು ಅವರು ತಮ್ಮ ಮಾತೃಪಕ್ಷ ಬಿಜೆಪಿ ಅಭ್ಯರ್ಥಿಯಾದರೆ ಅನುಕೂಲ ಆಗಬಹುದು ಎಂಬುದು ನಾಯಕರ ಲೆಕ್ಕಾಚಾರ. 1999 ರಲ್ಲಿ ಮೊದಲ ಬಾರಿಗೆ ಅವರು ಬಿಜೆಪಿ ಯಿಂದಲೇ ಶಾಸನಸಭೆ ಪ್ರವೇಶಿಸಿದ್ದರು. ನಂತರ ಎಸ್.ಎಂ.ಕೃಷ್ಣ ಅವರು ಮಂಜು ಅವರನ್ನು ಕಾಂಗ್ರೆಸ್‍ಗೆ ಸೆಳೆದಿದ್ದರು. ಅವರು ಪಕ್ಷ ತ್ಯಜಿಸಿದ ಬಳಿಕ ಅರಕಲಗೂಡು ಕ್ಷೇತ್ರ ದಲ್ಲಿ ಬಿಜೆಪಿ ಬಲ ಕುಂದಿತ್ತು. ಸದ್ಯ ಎ.ಮಂಜು ಪಕ್ಷಕ್ಕೆ ಮರಳಿದರೆ ಅನುಕೂಲವಾಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.

ಈ ಲೋಕಸಭಾ ವ್ಯಾಪ್ತಿಗೆ 8 ವಿಧಾನ ಸಭಾ ಕ್ಷೇತ್ರಗಳು ಬರಲಿದ್ದು, ಹಾಸನ ಜಿಲ್ಲೆಯ ಹೊಳೆನರಸೀಪುರ, ಸಕಲೇಶ ಪುರ, ಬೇಲೂರು, ಅರಸೀಕೆರೆ, ಚನ್ನರಾಯ ಪಟ್ಟಣ, ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.

ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಜ್ವಲ್ ರೇವಣ್ಣ ಎಂಜಿನಿಯರ್ ಪದವೀಧರ. ತಾತ ಎಚ್.ಡಿ.ದೇವೇಗೌಡ, ತಂದೆ ಎಚ್.ಡಿ. ರೇವಣ್ಣ ಅವರ ಜೊತೆ ಕ್ಷೇತ್ರದ್ಯಾಂತ ಓಡಾಡಿ ಕಾರ್ಯಕರ್ತರ ಜೊತೆ ಒಡನಾಟ ಇಟ್ಟು ಕೊಂಡಿದ್ದಾರೆ. ಈ ಬಾರಿ ಗೌಡರು ತಮ್ಮ ಮೊಮ್ಮಗನನ್ನು ರಾಜಕೀಯ ಅಖಾಡಕ್ಕೆ ತರಲು ಲೋಕಸಭಾ ಚುನಾ ವಣೆಯನ್ನು ವೇದಿಕೆ ಮಾಡಿಕೊಂಡಿದ್ದು, ಪ್ರಜ್ವಲ್ ಗೆಲುವು ಗೌಡರ ಕುಟುಂಬಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾ ದರೂ ಜಿಲ್ಲೆಯಲ್ಲಿ ಜೆಡಿಎಸ್ ಎಲ್ಲಾ ಹಂತದಲ್ಲಿಯೂ ಮೇಲುಗೈ ಸಾಧಿಸಿರುವುದು ಕಾಂಗ್ರೆಸ್ ಮುಖಂಡರು, ಕಾರ್ಯ ಕರ್ತರಲ್ಲಿ ಅಸಮಾಧಾನ ಉಂಟು ಮಾಡಿದೆ. ಇನ್ನೂ ಕುಟುಂಬ ರಾಜಕಾರಣದ ಮೂಲಕವೇ ಹೆಸರಾಗಿದ್ದ ಗೌಡರ ಕುಟುಂಬ ಈ ಬಾರಿ ತಮ್ಮ ಮೂರನೇ ತಲೆಮಾರನ್ನೂ ರಾಜಕೀಯ ಅಖಾಡಕ್ಕೆ ಕರೆತರುತ್ತಿ ರೋದೇ ಅವರಿಗೆ ಮುಳುವಾಗಲಿದೆಯೇ ಎಂಬ ಚರ್ಚೆ ಗ್ರಾಸವಾಗಿದ್ದು, ಇತ್ತ ಜೆಡಿ ಎಸ್‍ಗೆ ಪ್ರಬಲ ಪೈಪೋಟಿ ನೀಡಬಲ್ಲ ಎ. ಮಂಜು ಬಿಜೆಪಿ ಸೇರಿದರೆ ಅವರೊಂದಿಗೆ ಬೆಂಬಲಿಗರು ಪಕ್ಷಾಂತರ ಮಾಡಲು ನಿರ್ಧ ರಿಸಿದ್ದಾರೆ. ಉಳಿದವರು ಅನಿವಾರ್ಯ ವಾಗಿ ಮೈತ್ರಿ ಅಭ್ಯರ್ಥಿ ಬೆಂಬಲಿಸಲು ನಿರ್ಧಾರ ಕೈಗೊಂಡರೆ ಫಲಿತಾಂಶ ಬದ ಲಾಗಬಹುದು ಎಂದು ವಿಶ್ಲೇಷಿಸಲಾಗಿದೆ.

– ರಾಚೇನಹಳ್ಳಿ ಸೋಮೇಶ್

Translate »