ಕಾಂಗ್ರೆಸ್ ಮುಖಂಡರ ಮನೆಗಳಿಗೆ ಪ್ರಜ್ವಲ್ ಭೇಟಿ
ಹಾಸನ

ಕಾಂಗ್ರೆಸ್ ಮುಖಂಡರ ಮನೆಗಳಿಗೆ ಪ್ರಜ್ವಲ್ ಭೇಟಿ

March 17, 2019

ಹಾಸನ: ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ಮುಖಂಡರು ಗಳ ಮನೆಗೆ ದಿಢೀರ್ ಭೇಟಿ ನೀಡಿ ಚುನಾವಣೆಯಲ್ಲಿ ಸಹಕರಿಸುವಂತೆ ಮನವಿ ಮಾಡುವ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದರು.

ಮೊದಲು ನೂತನ ನಗರಸಭೆ ಸದಸ್ಯರಾಗಿರುವ ಹೆಚ್.ಸಿ.ಮಂಜುನಾಥ್ ಮನೆಗೆ ತೆರಳಿದರು. ನಂತರ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್.ಅನೀಲ್ ಕುಮಾರ್ ಮನೆಗೆ ತೆರಳಿ ಸಭೆ ನಡೆಸಿದರು. ಇದಾದ ಬಳಿಕ ಕಾಂಗ್ರೆಸ್ ಮುಖಂಡ ಹೆಚ್.ಪಿ. ಮೋಹನ್, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಆಡುವಳ್ಳಿ ರವಿ, ಶ್ಯಾಮಸುಂದರ್, ಲತೀಶ್ ಇತರರ ಮನೆಗೆ ಹೋಗಿ ಕೆಲ ಸಮಯ ಚರ್ಚೆ ನಡೆಸಿದರು. ಅಲ್ಲದೆ ಬಿಜೆಪಿಯ ಕೆಲ ಮುಖಂಡರು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಚುನಾವಣೆಗೆ ಭರ್ಜರಿ ತಾಲೀಮು ನಡೆಸಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್.ಅನಿಲ್‍ಕುಮಾರ್, ಜಿಪಂ ಸದಸ್ಯ ಸ್ವರೂಪ್, ಹೆಚ್‍ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗಿರೀಶ್ ಚನ್ನವೀರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್.ಶಂಕರ್ ಇತರರು ಪಾಲ್ಗೊಂಡಿದ್ದರು.

Translate »