ಶಾಸಕ ಪ್ರೀತಮ್ ಜೆ.ಗೌಡ ಮನೆಗೆ ಎ.ಮಂಜು ಭೇಟಿ
ಹಾಸನ

ಶಾಸಕ ಪ್ರೀತಮ್ ಜೆ.ಗೌಡ ಮನೆಗೆ ಎ.ಮಂಜು ಭೇಟಿ

March 17, 2019

ಹಾಸನ: ಶಾಸಕ ಪ್ರೀತಮ್ ಜೆ.ಗೌಡ ಮನೆಗೆ ಮಾಜಿ ಸಚಿವ ಎ. ಮಂಜು ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದರು. ಈ ಮೂಲಕ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ.

ನಗರದ ವಿದ್ಯಾನಗರದಲ್ಲಿರುವ ಪ್ರೀತಮ್ ಮನೆಗೆ ಶನಿವಾರ ಬೆಳಿಗ್ಗೆ ತೆರಳಿ ಉಪಹಾರ ಸೇವಿಸುವ ಮೂಲಕ ರಾಜಕೀಯ ಬೆಳವಣಿಗೆಯಲ್ಲಿ ಸಂಚಲನ ಮೂಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೀತಂ ಗೌಡ ನನ್ನ ಸ್ನೇಹಿತ. ತಿಂಡಿಗೆ ಕರೆದಿ ದ್ದರು ಬಂದಿದ್ದೇನೆ. ನಿನ್ನೆ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಎಲ್ಲಾ ತಾಲೂಕಿನಲ್ಲಿ ಬೆಂಬಲಿಗರ ಸಭೆ ನಡೆಸಿದ್ದು, ಇನ್ನೂ ಎರಡು ತಾಲೂಕಿನಲ್ಲಿ ಸಭೆ ನಡೆಸುತ್ತೇನೆ. ಮುಂದಿನ ತೀರ್ಮಾನವನ್ನು ಸೋಮವಾರ ಘೋಷಣೆ ಮಾಡುತ್ತೇನೆ. ಕುಟುಂಬ ರಾಜಕಾರಣ ವಿರುದ್ಧ ಹಾಗೂ ದೇಶದ ಪರ ನಮ್ಮ ಹೋರಾಟ ಎಂದು ತಿಳಿಸಿದರು.

ಶಾಸಕ ಪ್ರೀತಮ್ ಜೆ.ಗೌಡ ಮಾತನಾಡಿ, ಮಾಜಿ ಸಚಿವ ಎ.ಮಂಜು ಅವರು ನನಗೆ ಉತ್ತಮ ಸ್ನೇಹಿತರು. ಈಗಾಗಲೇ ಅವರು ಹೇಳಿರುವ ಅಭಿಪ್ರಾಯಗಳನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತ. ಹಾಸನದಲ್ಲಿ ಯಾರೇ ಅಭ್ಯರ್ಥಿಯಾದರೂ ಬಿಜೆಪಿಯೇ ಗೆಲ್ಲಲಿದೆ. ಇದು ದೇಶದ ಭದ್ರತೆಗಾಗಿ ನಡೆಯು ತ್ತಿರುವ ಚುನಾವಣೆ. ಇಲ್ಲಿ ಮೋದಿಯೇ ಅಭ್ಯರ್ಥಿ ಇದ್ದಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಹೆಚ್.ಎಂ.ಸುರೇಶ್‍ಕುಮಾರ್, ಮುಖಂಡ ರಾದ ಚನ್ನಕೇಶವ, ಪ್ರಸನ್ನಕುಮಾರ್, ಶೋಭನ್ ಬಾಬು, ಶಿವಕುಮಾರ್ ಇತರರು ಇದ್ದರು.

Translate »