ಚಾಮರಾಜನಗರ ಜಿಲ್ಲೆಯಲ್ಲಿ ಕಲ್ಲಂಗಡಿ ಖರೀದಿಸಿದ ಸಂಸದ ಡಿ.ಕೆ.ಸುರೇಶ್
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿ ಕಲ್ಲಂಗಡಿ ಖರೀದಿಸಿದ ಸಂಸದ ಡಿ.ಕೆ.ಸುರೇಶ್

April 21, 2020

ಚಾಮರಾಜನಗರ, ಏ.20- ಕೊರೊನಾ ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ರೈತರಿಗೆ ಚೈತನ್ಯ ತುಂಬುವ ಸಲುವಾಗಿ ರೈತರಿಂದ ಹಣ್ಣು, ತರಕಾರಿ ಖರೀದಿಸಿ ತಾವು ಪ್ರತಿನಿಧಿಸುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕ ಸಭಾ ಕ್ಷೇತ್ರದ ಬಡವರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಜಿಲ್ಲೆಯ ಹೂಗ್ಯಂ ಗ್ರಾಪಂ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ರೈತ ನಾಗೇಂದ್ರ, ನಾಗರಾಜು ಅವರು 18 ಎಕರೆ ಭೂಮಿಯಲ್ಲಿ ಬೆಳೆದಿದ್ದ ಕಲ್ಲಂಗಡಿ ತೋಟಕ್ಕೆ ಖುದ್ದು ಭೇಟಿದ ಅವರು, ಕೆಜಿಗೆ 6 ರೂ.ನಂತೆ ಕಲ್ಲಂಗಡಿ ಹಣ್ಣು ಖರೀದಿಸಿದರು. ಪಕ್ಕದಲ್ಲೇ ಬೆಳೆದಿದ್ದ ಬದನೆ, ಟೊಮೊಟೋ ಖರೀದಿಸುವಂತೆ ರೈತರು ಸಂಸದರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದÀ ಸಂಸದ ಸುರೇಶ್ ನಿಮಗೆ ಹೆಚ್ಚಿನ ಬೆಲೆ ಸಿಕ್ಕಿದರೆ ಮಾರುಕಟ್ಟೆಗೆ ಮಾರಾಟ ಮಾಡಿ ಇಲ್ಲದಿದ್ದರೆ ಬದನೆ, ಟಮೊಟೋವನ್ನು ರಾಮಪುರ ಜಿಪಂ ಕ್ಷೇತ್ರದ ವ್ಯಾಪ್ತಿಗೆ ಬರುವ ಹಳ್ಳಿಯ ಜನರಿಗೆ ಉಚಿತವಾಗಿ ವಿತರಿಸಿ ನಾನು ಹಣ ಕೊಡುತ್ತೇನೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಬಸವರಾಜು, ಈಶ್ವರ್ ಅವರಿಗೆ ತಿಳಿಸಿದರು.

ಮಾಜಿ ಸಂಸದ ಆರ್.ಧ್ರುವನಾರಾಯಣ್ ಕರೆಗೆ ಓಗೊಟ್ಟು ಜಿಲ್ಲೆಯ ಗಡಿಭಾಗದ ರೈತರಲ್ಲಿ ಕಲ್ಲಂಗಡಿ, ತರಕಾರಿ ಖರೀದಿಸಲಾಗಿದೆ. ಕೂಲಿ ಕಾರ್ಮಿಕರು, ಸರ್ಕಾರ, ಉದ್ಯಮಿ, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳಿಂದÀ ಹಿಡಿದು ಐಟಿಬಿಟಿ ಕಂಪನಿಯ ಉದ್ಯೋಗಸ್ಥರ ತನಕ ಯಾರಿಗೂ ಕೂಡ ದೇಶದಲ್ಲಿ ಕೊರೊನಾ ಬಂದು 40 ದಿನಗಳ ಕಾಲ ಲಾಕ್‍ಡೌನ್ ಆಗುತ್ತೇ ಅನ್ನುವ ನಿರೀಕ್ಷೆ ಇರಲಿಲ್ಲ. ಇಂತಹ ಸಂದರ್ಭ ನಮ್ಮೆಲ್ಲರ ಮುಂದೆ ಅನೇಕ ಸವಾಲು ಗಳಿದೆ. ಎಲ್ಲರಿಗೂ ಆರ್ಥಿಕ ಸಂಕಷ್ಠ ಇದೆ. ಕೈಗಾರಿಕೆಗಳು ಉತ್ಪನ್ನಗಳನ್ನು ಇಂದಲ್ಲ ನಾಳೆ ಮಾರಾಟ ಮಾಡ ಬಹುದು. ಕಟ್ಟಡ ನಿರ್ಮಾಣಗಳನ್ನು ಮಂದೂಡ ಬಹುದು. ಆದರೆ ರೈತರು ಬೆಳೆದ ತೋಟಗಾರಿಕಾ ಬೆಳೆಗಳನ್ನು ಒಂದು ವಾರದ ತನಕ ಇಟ್ಟುಕೊಳ್ಳಕ್ಕೆ ಆಗುವುದಿಲ್ಲ. ತಾಜಾ ಹಣ್ಣು, ತರಕಾರಿ, ಹೂವಿಗೆ ಒಂದು ಬೆಲೆ ಇರುತ್ತದೆ. ಅದು ಒಣಗಿದರೆ ಬೆಲೆ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಾಲ ಮಾಡಿ ಹಾಕಿದ ಬಂಡವಾಳ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಅವರಿಗೆ ಚೈತನ್ಯ ತುಂಬುವ ಸಲುವಾಗಿ ಹಣ್ಣ, ತರಕಾರಿಯನ್ನು ಖರೀದಿಸಿ ಬಡವರಿಗೆ ವಿತರಿಸಲಾಗುತ್ತಿದೆ ಎಂದರು. ಈ ವೇಳೆ ಮಾಜಿ ಸಂಸದ ಆರ್.ಧ್ರುವನಾರಾಯಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಶಾಸಕ ಅನಿಲ್ ಚಿಕ್ಕಮಾದು, ಡಾ.ರಂಗನಾಥ್, ಎಂಎಲ್‍ಸಿ ರವಿ, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ವಕೀಲ ಅರುಣ್ ಕುಮಾರ್, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್ ದೊರೈರಾಜ್ ಮುಖಂಡರಾದ ರಾಮಣ್ಣ, ಫಾರುಖ್, ಇತರರಿದ್ದರು.

Translate »