ಬೆಂಗಳೂರು, ಜ.೧೪(ಕೆಎಂಶಿ)-ಕೋವಿಡ್ ಸಂದರ್ಭದಲ್ಲಿ ಯಾವುದೇ ರ‍್ಯಾಲಿ, ಪ್ರತಿಭಟನೆ, ಇಲ್ಲವೆ ಸಮಾರಂಭಗಳಿಗೆ ಅವಕಾಶ ನೀಡಬಾರದೆಂದು ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಆದೇಶ ಮಾಡಿದೆ. ಕೋವಿಡ್ ನಿಯಂತ್ರಣ ವಿಷಯವಾಗಿ ರಾಜ್ಯವ್ಯಾಪಿ ಒಂದೇ ರೀತಿಯ ಕಾನೂನು ಜಾರಿಗೆ ತಂದು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುವಂತೆ ಸೂಚಿಸಿದೆ.
ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಸ್ಥಗಿತಗೊಳಿಸು ವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡಿದ ಮುಖ್ಯ ನ್ಯಾಯಮೂರ್ತಿಯ ವರನ್ನೊಳಗೊಂಡ ವಿಭಾಗೀಯ ಪೀಠ ಈ ಕಟ್ಟಾದೇಶಗಳನ್ನು ಮಾಡಿದೆ. ಜನವರಿ ೪ ರಂದು ಜಾರಿಗೆ ತಂದಿರುವ ಎಸ್‌ಓಪಿ ಯನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಇದರಲ್ಲಿ ತಾರತಮ್ಯ ಮಾಡಬಾರದೆಂದು ಸರ್ಕಾರಕ್ಕೆ ಸೂಚಿಸಿದೆ.
ನ್ಯಾಯಾಲಯ ನೀಡುತ್ತಿದ್ದ ಆದೇಶವನ್ನು ಪಾಲನೆ ಮಾಡಿದ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸಿದ ಪೀಠ ಸಂಕಷ್ಟದಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಂಡು ನಡೆದುಕೊಳ್ಳಬೇಕೆಂದು ಹೇಳಿದೆ. ಕೋವಿಡ್ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ ಮತ್ತು ರ‍್ಯಾಲಿಗೆ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವು ದನ್ನು ಕಟ್ಟುನಿಟ್ಟಾಗಿ ತಡೆಯ ಬೇಕೆಂದು ಸಾರಿಗೆ ಇಲಾಖೆಗೂ ಸೂಚಿಸಿದೆ. ಕೋವಿಡ್‌ಗೆ ಸಂಬAಧಿಸಿದAತೆ ಕೆಲವು ಸಲಹೆ ಸೂಚನೆಗಳನ್ನು ಸರ್ಕಾರಕ್ಕೆ ನೀಡಿದ ಪೀಠ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತು. ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ನೀವು ಹೊರಡಿಸಿರುವ ಆದೇಶಗಳು ಸಮಂಜಸವಾಗಿದೆ ಎಂದು ಪೀಠ ಅಭಿಪ್ರಾಯಿಸಿತು.