ಸ್ಪಷ್ಟ ಬಹುಮತದೊಂದಿಗೆ ೨೦೨೩ರಲ್ಲಿ ಜೆಡಿಎಸ್ ಅಧಿಕಾರಕ್ಕೆ
ಮೈಸೂರು

ಸ್ಪಷ್ಟ ಬಹುಮತದೊಂದಿಗೆ ೨೦೨೩ರಲ್ಲಿ ಜೆಡಿಎಸ್ ಅಧಿಕಾರಕ್ಕೆ

January 16, 2022

ಮಾಜಿ ಪ್ರಧಾನಿ ದೇವೇಗೌಡರ ವಿಶ್ವಾಸ

ದೈವ, ಜನ ನಮ್ಮ ಕೈಬಿಡುವುದಿಲ್ಲವೆಂಬ ಅಚಲ ವಿಶ್ವಾಸ

ಚಿಕ್ಕನಾಯಕನಹಳ್ಳಿಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನೆ

ಭೇರ್ಯ, ಜ.೧೪- ಜೆಡಿಎಸ್ ಮುಗಿಸುತ್ತೇವೆ ಎನ್ನುವವರಿಗೆ ಸೆಡ್ಡು ಹೊಡೆದು ೨೦೨೩ರಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಯಲ್ಲಿ ಆಂಜನೇಯಸ್ವಾಮಿ ದೇವಾಲಯ ಉದ್ಘಾ ಟನೆ ಮತ್ತು ಕಳಶ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕರ ಸಂಕ್ರಮಣದ ಮುನ್ನಾದಿನ ಆಂಜನೇಯಸ್ವಾಮಿ ದೇವಾಲಯ ಉದ್ಘಾಟಿಸಿದ್ದು, ಅವರ ಆಶೀರ್ವಾ ದದಿಂದ ನಾವು ಎಲ್ಲವನ್ನೂ ಸಾಧಿಸುತ್ತೇವೆ ಎಂದರು.
ನಾನು ಜೀವನದಲ್ಲಿ ಅತಿಯಾಗಿ ನಂಬುವುದು ದೈವ ಮತ್ತು ಜನರನ್ನು ಮಾತ್ರ. ಹಾಗಾಗಿ ಅವರಿ ಬ್ಬರೂ ನಮ್ಮನ್ನು ಯಾವುದೇ
ಕಾರಣಕ್ಕೂ ಕೈಬಿಡುವುದಿಲ್ಲ ಎಂಬ ನಂಬಿಕೆ ಇದ್ದು, ಸಂಜೀ ವಿನಿ ಪರ್ವತ ಹೊತ್ತು ತಂದು ಲಕ್ಷ÷್ಮಣನನ್ನು ಉಳಿಸಿದ ಹಾಗೆ ಆಂಜನೇಯ ನಮ್ಮನ್ನು ಕಾಪಾಡುತ್ತಾನೆ ಎಂದರು. ದೇಶಕ್ಕೆ ಸ್ವಾತಂತ್ರ÷್ಯ ತಂದುಕೊಡಲು ರಾಷ್ಟçಪಿತ ಮಹಾತ್ಮಾ ಗಾಂಧಿ, ಮತದಾನದ ಹಕ್ಕು ಕೊಡಿಸಲು ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಹುಟ್ಟಿ ಬರಬೇಕಾಯ್ತು. ಹಾಗೆಯೇ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಹೆಚ್.ಡಿ.ದೇವೇಗೌಡರೇ ಕಾರಣರಾದರು ಎಂದು ಅವರು ಮಾರ್ಮಿಕವಾಗಿ ನುಡಿದರು. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ೨೫ ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡುವ ಜೊತೆಗೆ ಮೀಟರ್ ಬಡ್ಡಿ ಮಾಫಿಯಾದಿಂದ ಜನರನ್ನು ಪಾರು ಮಾಡಲು ಹೊಸ ಕಾಯಿದೆ ಜಾರಿಗೆ ತಂದರೂ ಬಿಜೆಪಿಯವರು ಅದನ್ನು ಅನುಷ್ಠಾನಗೊಳಿಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಒಂದೇ ದೇಶ ಒಂದೇ ಭಾಷೆ. ನಾವೆಲ್ಲಾ ಹಿಂದೂಗಳು ಎಂದು ಹೊರಟರೆ ದಲಿತರು, ಹಿಂದುಳಿದವರು, ಬಡವರು ಎಲ್ಲಿಗೆ ಹೋಗಬೇಕು ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ಯೋಚನೆಗಳನ್ನು ಟೀಕಿಸಿದರು.

ರಾಮಧೂತ ಆಂಜನೇಯನಿಗೆ ಅಸಾಧ್ಯವಾ ದುದು ಯಾವುದೂ ಇಲ್ಲ. ಜೊತೆಗೆ ಆತನ ಆಶೀರ್ವಾದ ಇರುವವರೆಗೆ ಯಾವ ಕೆಡಕು ಆಗುವುದಿಲ್ಲ ಎಂಬ ನಂಬಿಕೆ ನನ್ನಲ್ಲಿದ್ದು, ಅದನ್ನು ನಿಜವನ್ನಾಗಿಸಲು ಕಡೆ ಉಸಿರಿರುವವರೆಗೂ ರೈತರು ಮತ್ತು ಬಡವರ ಪರ ಹೋರಾಟ ಮಾಡುತ್ತೇನೆ ಎಂದು ಘೋಷಿ ಸಿದರು. ಹಳ್ಳಿಯ ರೈತನ ಮಗನಾದ ನನಗೆ ಜನರಿಗೆ ಮತ್ತು ಬಡವರಿಗೆ ಯಾವ ರೀತಿಯ ಅನುಕೂಲ ಮಾಡಿಕೊಡಬೇಕು ಎಂಬುದು ಚೆನ್ನಾಗಿ ಗೊತ್ತಿದ್ದು, ಕಾವೇರಿ ನೀರಿನ ಪ್ರತಿ ಹನಿಯನ್ನು ಜನರಿಗೆ ದೊರಕಿಸುವಂತೆ ಭವಿಷ್ಯದಲ್ಲಿ ಕೆಲಸ ಮಾಡುತ್ತೇನೆ ಎಂದರು. ಸಾಲಿಗ್ರಾಮ ಮತ್ತು ಸುತ್ತಮುತ್ತಲ ಭಾಗಗಳಿಗೆ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದ್ದೇ ನಾನು ಎಂದು ತಿಳಿಸಿದ ಅವರು, ನಾವು ಮಾತಾ ಡಬಾರದು. ಆದರೆ ರಾಜಕೀಯ ಅಧಿಕಾರ ಇದ್ದಾಗ ಮಾಡಿದಕೆಲಸಗಳು, ಜನರ ಮುಂದೆ ಮಾತನಾಡುವಂತಿರಬೇಕು ಎಂದರು.

ಇದಕ್ಕೂ ಮುನ್ನಾ ಚಿಕ್ಕನಾಯಕನಹಳ್ಳಿಗೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಿಗೆ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಇದಕ್ಕೂ ಮೊದಲು ಹೆಲಿಕಾಪ್ಟರ್‌ನಲ್ಲಿ ಸಾಲಿಗ್ರಾಮ ಸಮೀಪ ನಿರ್ಮಿ ಸಿದ್ದ ಹೆಲಿಪ್ಯಾಡ್‌ಗೆ ಬಂದಿಳಿದ ಹೆಚ್.ಡಿ.ದೇವೇ ಗೌಡರನ್ನು ಶಾಸಕರಾದ ಸಾ.ರಾ.ಮಹೇಶ್ ಮತ್ತು ಸಿ.ಎನ್.ಮಂಜೇಗೌಡ ಹೂಗುಚ್ಛ ನೀಡಿ ಸ್ವಾಗತಿಸಿದರು.

ಈ ವೇಳೆ ಲಕ್ಷಿ÷್ಮÃಪುರ ಗ್ರಾಪಂ ಅಧ್ಯಕ್ಷ ರಂಗೇಗೌಡ, ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಕೆ.ನಾಗರಾಜು, ಸುಂದರಮ್ಮ, ಶಾಂತಮ್ಮ, ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಚಂದ್ರಶೇಖರ್, ಮೈಸೂರು ನಗರ ಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಹುಣಸೂರು ತಾಲೂಕು ಜೆಡಿಎಸ್ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ವಾಸು, ಗೋಪಾಲ್ ಮತ್ತಿತರರಿದ್ದರು.

 

 

ನೀರಿನ ವಿಚಾರದಲ್ಲಿ ಬೀದಿಯಲ್ಲಿ ನಿಂತು ಕೇಳಿದರೆ ನ್ಯಾಯ ಸಿಗುತ್ತಾ…
ಭೇರ್ಯ: ಕಾವೇರಿ ಜಲ ವಿವಾದದ ಬಗ್ಗೆ ಕಾಂಗ್ರೆಸ್ ನಾಯಕರು ರಸ್ತೆಯಲ್ಲಿ ನಿಂತು ನಗಾರಿ ಬಾರಿಸಿದರೂ, ಆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇವರ ಪರವಾಗೇನೂ ತೀರ್ಪು ನೀಡುವುದಿಲ್ಲವೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ವ್ಯಂಗ್ಯವಾಡಿದರು.

ನೂತನ ಸಾಲಿಗ್ರಾಮ ತಾಲೂಕಿನ ತಹಸೀಲ್ದಾರರ ಕಚೇರಿ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತ£ Áಡಿದ ಅವರು, ಜಲ ವಿವಾದದ ಪ್ರಕರಣ ನ್ಯಾಯಾ ಲಯದಲ್ಲಿ ಇರುವುದರಿಂದ ಬೀದಿಯಲ್ಲಿ ನಿಂತು ಹೋರಾಟ ಮಾಡಿದರೆ ನ್ಯಾಯ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾವೇರಿ ಜಲ ವಿವಾದ, ಮೇಕೆದಾಟು ಯೋಜನೆ ಸೇರಿದಂತೆ ನೀರಿನ ಯಾವುದೇ ವಿಚಾರದಲ್ಲಿ ಹೊರಗಡೆ ನಿಂತು ನ್ಯಾಯ ಪಡೆಯಲು ಸಾಧ್ಯವಿಲ್ಲ ಎಂಬ ಈ ವಿಚಾರ ಎಲ್ಲರಿಗೂ ಗೊತ್ತಿದ್ದರೂ, ಕೆಲವರು ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿ ದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾ ಧಾನ ವ್ಯಕ್ತಪಡಿಸಿದರು. ಈಗ ಸ್ಥಗಿತಗೊಳಿಸಿರುವ ಮೇಕೆದಾಟು ಪಾದಯಾತ್ರೆಯನ್ನು ಮತ್ತೆ ರಾಮ ನಗರದಿಂದಲೇ ಆರಂಭಿಸುತ್ತಾರAತೆ. ನಾವು ಸಹ ಈ ಹಿಂದೆ ರಾಜ್ಯದ ಜನರಿಗೆ ನೀರಿನ ವಿಚಾರದಲ್ಲಿ ನ್ಯಾಯ ದೊರಕಿಸಿ ಕೊಡಲು ಎಷ್ಟು ಪಾದಯಾತ್ರೆ ಗಳನ್ನು ಮಾಡಿದ್ದೇವೆ ಎಂಬುದು ದೇಶದ ಜನರಿಗೆ ಗೊತ್ತಿದೆ ಎಂದವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಮೇಕೆದಾಟು ಪಾದಯಾತ್ರೆ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿ ಹೈಕೋರ್ಟ್ ಮಧ್ಯ ಪ್ರವೇಶಿಸ ಬೇಕಾಯಿತಲ್ಲಾ ಎಂದು
ಸುದ್ದಿಗಾರರು ಪ್ರಶ್ನಿಸಿದಾಗ ಅದಕ್ಕುತ್ತರಿಸಿದ ಮಾಜಿ ಪ್ರಧಾನಮಂತ್ರಿಗಳು ಇಲ್ಲಿ ಪಾದಯಾತ್ರೆ ನಡೆಸುವುದು ನಂತರ ಅದನ್ನು ನಿಲ್ಲಿಸು ವುದು ಮುಖ್ಯವಲ್ಲ. ಅಂತಿಮವಾಗಿ ಜನರಿಗೆ ನ್ಯಾಯ ಕೊಡಿಸುವುದು ಅತ್ಯಂತ ಪ್ರಮುಖವಾದುದು. ನನಗಿರುವ ರಾಜಕೀಯ ಅನುಭವದಲ್ಲಿ ಎಂದೂ ಕಾವೇರಿ ಜಲ ವಿವಾದದ ಬಗ್ಗೆ ರಸ್ತೆಯಲ್ಲಿ ನಿಂತು ಹೋರಾಟ ಮಾಡಿಲ್ಲ. ಹಾಗಾಗಿ ನಮಗೆ ನಿಜವಾಗಿಯೂ ನ್ಯಾಯ ಸಿಗಬೇಕಾದರೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅಲ್ಲಿ ನಮ್ಮ ಸಮಸ್ಯೆ ಮತ್ತು ಸತ್ಯಾಸತ್ಯತೆಯನ್ನು ಮನವರಿಕೆ ಮಾಡಿ ಗೆಲ್ಲಬೇಕೆಂದರು.
ಈಗ ಪಾದಯಾತ್ರೆ ಮೂಲಕ ಹೋರಾಟ ಮಾಡುತ್ತಿರು ವವರು ಅವರ ಅಧಿಕಾರದ ಅವಧಿಯಲ್ಲಿ ಏನೇನು ಮಹತ್ ಕಾರ್ಯಗಳನ್ನು ಮಾಡಿದ್ದಾರೆ ಎಂಬುದನ್ನು ನಾನು ಹೆಚ್ಚಾಗಿ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ ಎಂದವರು ನುಡಿದರು.

ಕಾವೇರಿ ಜಲ ವಿವಾದದ ವಿಚಾರದಲ್ಲಿ ಅತೀ ಹೆಚ್ಚು ಹೋರಾಟ ಮಾಡಿದ ಉತ್ತಮ ನಾಯಕರಿದ್ದರೆ ಅದು ಮಾಜಿ ಮಂತ್ರಿ ಎಚ್. ಎಂ.ಚನ್ನಬಸಪ್ಪ ಅವರೊಬ್ಬರೇ ಎಂದು ಮಾಜಿ ಪ್ರಧಾನ ಮಂತ್ರಿಗಳು ಶ್ಲಾಘನೆ ವ್ಯಕ್ತಪಡಿಸಿದರು.

Translate »