ಹೊಸ ವರ್ಷದ ೨ನೇ ವಾರಾಂತ್ಯ ಕರ್ಫ್ಯೂ ಜಾರಿ
News, ಮೈಸೂರು

ಹೊಸ ವರ್ಷದ ೨ನೇ ವಾರಾಂತ್ಯ ಕರ್ಫ್ಯೂ ಜಾರಿ

January 16, 2022

ಅಂಗಡಿ-ಮುAಗಟ್ಟು, ವಾಣ ಜ್ಯ ವಹಿವಾಟು ಸಂಪೂರ್ಣ ಬಂದ್

ಮದ್ಯದಂಗಡಿ, ಸಿನೆಮಾ, ಮಾಲ್, ಜಿಮ್,
ಸ್ವಿಮ್ಮಿಂಗ್ ಪೂಲ್, ಉದ್ಯಾನಕ್ಕೆ ನಿಷಿದ್ಧ.

ದೇವಾಲಯ, ಪ್ರವಾಸಿ ತಾಣ, ಸಭೆ, ಸಮಾರಂಭಗಳು ಸ್ಥಗಿತ.

ಮೆಡಿಕಲ್ ಸ್ಟೋರ್, ಆಸ್ಪತ್ರೆ, ಡಯೋಗ್ನೋಸ್ಟಿಕ್ ಸೆಂಟರ್, ಹಾಲು, ಹಣ್ಣು, ತರಕಾರಿ, ದಿನಸಿ, ಮಾಂಸ, ಮೀನು ಮಾರಾಟಕ್ಕಿಲ್ಲ ಅಡ್ಡಿ. ಬಸ್, ವಿಮಾನ, ರೈಲು, ಆಟೋ, ಟ್ಯಾಕ್ಸಿ, ಆಂಬುಲೆನ್ಸ್, ಸರಕು ಸಾಗಣೆ ವಾಹನ ಸಂಚಾರಕ್ಕೆ ಅವಕಾಶ.

ಮೈಸೂರು, ಜ.೧೪(ಆರ್‌ಕೆ)-ಕೊರೊನಾ ಸೋಂಕಿಗೆ ಬ್ರೇಕ್ ಹಾಕಲು ಸರ್ಕಾರ ವಿಧಿಸಿರುವ ೫೫ ಗಂಟೆಗಳ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ.
೨೦೨೨ರ ಎರಡನೇ ವೀಕೆಂಡ್ ಕರ್ಫ್ಯೂ ಇಂದು ರಾತ್ರಿ ೧೦ ಗಂಟೆಯಿAದ ಜನವರಿ ೧೭ರ ಮುಂಜಾನೆ ೫ ಗಂಟೆವರೆಗೆ ಜಾರಿಯಲ್ಲಿರುತ್ತದೆ. ಜನವರಿ ೭ರ ರಾತ್ರಿ ೧೦ ರಿಂದ ಜನವರಿ ೧೦ರ ಮುಂಜಾನೆ ೫ ಗಂಟೆವರೆಗೆ ಮೊದಲ ವೀಕೆಂಡ್ ಕರ್ಫ್ಯೂ ನಿರ್ಬಂಧವನ್ನು ಜನರು ಕಟ್ಟು ನಿಟ್ಟಾಗಿ ಪಾಲಿಸಿದ್ದರು. ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಸಿವಿಲ್ ಮತ್ತು ಸಂಚಾರ ಠಾಣೆ ಪೊಲೀಸರು ಪಬ್ಲಿಕ್ ಆಡ್ರೆಸ್ಸಿಂಗ್ ಸಿಸ್ಟಂ ಮೂಲಕ ಜಾಗೃತಿ ಮೂಡಿಸಿ ಇಂದು ರಾತ್ರಿ ೧೦ ಗಂಟೆಗೆ ಅಗತ್ಯ ವಸ್ತು ಸೇವೆ ಹೊರತುಪಡಿಸಿ ಉಳಿದಂತೆ ಎಲ್ಲಾ ಬಗೆಯ ಅಂಗಡಿ-ಮುAಗಟ್ಟುಗಳನ್ನು ಬಂದ್ ಮಾಡಿಸಿದರು.

ಎರಡು ದಿನಗಳ ಕಾಲ ನಿರ್ಬಂಧವಿ ರುವ ಕಾರಣ, ಪಾನಪ್ರಿಯರು ಇಂದು ಸಂಜೆಯಿAದಲೇ ಮದ್ಯ ಖರೀದಿಸಲು ಮುಗಿ ಬೀಳುತ್ತಿದ್ದರು. ಅದರಲ್ಲೂ ರಾತ್ರಿ ಯಾಗುತ್ತಿದ್ದಂತೆಯೆ
ಯುವಕ-ಯುವತಿಯರು ಟ್ರೂ ಸ್ಪಿರಿಟ್, ಎಂಎಸ್‌ಐಎಲ್ ಮಳಿಗೆ, ವೈನ್ ಸ್ಟೋರ್‌ಗಳಲ್ಲಿ ಕೇಸ್‌ಗಟ್ಟಲೆ ಮದ್ಯ ಖರೀದಿಸಿ ದಾಸ್ತಾನಿರಿಸಿಕೊಳ್ಳುತ್ತಿದ್ದುದು ಕಂಡು ಬಂದಿತು.
ಉದ್ಯಾನವನ, ಅರಮನೆ, ಚಾಮುಂಡಿಬೆಟ್ಟ, ಕಾರಂಜಿಕೆರೆ, ನಂಜನಗೂಡಿನ ಶ್ರೀ ನಂಜುAಡೇಶ್ವರ ದೇವಸ್ಥಾನ, ಉತ್ತನಹಳ್ಳಿಯ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ, ಕೆಆರ್‌ಎಸ್, ರಂಗನತಿಟ್ಟು ಪಕ್ಷಿಧಾಮ, ನಿಮಿಷಾಂಬ ದೇವಸ್ಥಾನ, ಟಿಪ್ಪುಸುಲ್ತಾನ್, ಕೆಆರ್‌ಎಸ್ ಬ್ಯಾಕ್ ವಾಟರ್ ಸೇರಿದಂತೆ ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಸಿನೆಮಾ ಮಂದಿರ, ಮಾಲ್, ವೈನ್ ಸ್ಟೋರ್, ಟ್ರೂ ಸ್ಪಿರಿಟ್, ಪಬ್, ಕ್ಲಬ್, ಜಿಮ್, ಸ್ವಿಮ್ಮಿಂಗ್ ಪೂಲ್‌ಗಳು ಬಂದ್ ಆಗಿದ್ದು, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಪಾರ್ಸಲ್ ನೀಡಬಹುದಾಗಿದೆ.

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಗ್ರಾಹಕರ ಮನೆಗೆ ಆಹಾರ ಪೂರೈಸುವ ಸರಕು ಸಾಗಣೆ, ಆರೋಗ್ಯ ಸಿಬ್ಬಂದಿ, ಆರ್‌ಟಿ-ಪಿಸಿಆರ್ ಟೆಸ್ಟ್, ಲಸಿಕೆ ಪಡೆಯುವವರ ವಾಹನ ಸಂಚಾರಕ್ಕೆ ನಿರ್ಬಂಧವಿಲ್ಲ. ಉಳಿದಂತೆ ಶಾಲಾ-ಕಾಲೇಜು, ಸರ್ಕಾರಿ, ಖಾಸಗಿ ಕಚೇರಿ, ಬ್ಯಾಂಕ್, ಎಲ್‌ಐಸಿ ಕಚೇರಿ, ಯೋಗ ತರಬೇತಿ ಕೇಂದ್ರ, ಕ್ರೀಡಾ ತರಬೇತಿ, ಚಟುವಟಿಕೆ, ಸಭೆ-ಸಮಾರಂಭಗಳನ್ನು ಸ್ಥಗಿತಗೊಳಿಸಲಾಗಿದ್ದು, ಸಾರಿಗೆ, ಖಾಸಗಿ ಬಸ್, ರೈಲು, ವಿಮಾನ, ಆಟೋ, ಟ್ಯಾಕ್ಸಿಗಳ ಸಂಚಾರವಿರುತ್ತದೆಯಾದರೂ, ಪ್ರಯಾಣದ ಟಿಕೆಟ್‌ಗಳನ್ನು ತೋರಿಸಬೇಕಾಗಿದೆ. ಕೈಗಾರಿಕೆ, ಉದ್ಯಮ, ಗಾರ್ಮೆಂಟ್ ಗಳು, ಖಾಸಗಿ ಸಂಸ್ಥೆಗಳ ನೌಕರರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಸಂಚರಿಸ ಬಹುದಾಗಿದೆ. ಮಾಂಸ, ಮೀನು, ದಿನಸಿ, ಹಾಲು, ಹಣ್ಣು, ತರಕಾರಿ, ಆಹಾರ ಧಾನ್ಯಗಳು, ಕಟ್ಟಡ ನಿರ್ಮಾಣ ಸಾಮಗ್ರಿ, ಔಷಧಿ ಅಂಗಡಿಗಳAತಹ ಅಗತ್ಯ ಸೇವೆಗಳಿಗೆ ವಾರಾಂತ್ಯ ಕರ್ಫ್ಯೂ ಆದೇಶ ಅನ್ವಯವಾಗುವುದಿಲ್ಲ. ಕಲ್ಯಾಣ ಮಂಟಪಗಳಲ್ಲಿ ೧೦೦ ಮಂದಿ, ಹೊರ ಆವರಣದಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ೨೦೦ ಮಂದಿ ಪಾಲ್ಗೊಳ್ಳಬೇಕೆಂಬ ಮಿತಿ ಇದೆ. ಕೋವಿಡ್ ಮಾರ್ಗಸೂಚಿಯಂತೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲಿಸದೇ, ಗುಂಪಾಗಿ ಸೇರುವುದು, ಅನಗತ್ಯವಾಗಿ ಓಡಾಡುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುವರು.
ಸಂಚಾರ ಪೊಲೀಸರಿಗೆ ತಾಕೀತು: ಎರಡನೇ ವಾರಾಂತ್ಯ ಕರ್ಫ್ಯೂ ನಿರ್ಬಂಧ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಂಚಾರ ವಿಭಾಗದ ಎಸಿಪಿ ಎಸ್.ಇ.ಗಂಗಾಧರಸ್ವಾಮಿ, ಇಂದು ಪೊಲೀಸ್ ಇನ್ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಿದರು. ಪ್ರಮುಖ ರಸ್ತೆ, ಜಂಕ್ಷನ್, ವೃತ್ತಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ತಪಾಸಣೆ ಮಾಡಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ ವಹಿಸಬೇಕು. ಮೊದಲನೇ ವೀಕೆಂಡ್ ಕರ್ಫ್ಯೂನಂತೆಯೇ ಈ ಬಾರಿಯೂ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುವಂತೆ ಅವರು ಸಲಹೆ ನೀಡಿದರು.
ಅದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಶಪಡಿಸಿಕೊಂಡು, ನ್ಯಾಯಾಲಯದಿಂದ ಆದೇಶವಾಗಿರುವ ವಾಹನಗಳನ್ನು ನಿಯಮಾನುಸಾರ ಹರಾಜು ಮಾಡಿ ಪಾರದರ್ಶಕವಾಗಿ ವಿಲೇವಾರಿ ಮಾಡಬೇಕು. ಅನಗತ್ಯವಾಗಿ ಠಾಣೆಗಳಲ್ಲಿ ವಾಹನಗಳನ್ನು ವರ್ಷಗಟ್ಟಲೆ ಇರಿಸಿಕೊಳ್ಳಬೇಡಿ ಎಂದು ಗಂಗಾಧರಸ್ವಾಮಿ ಸಲಹೆ ನೀಡಿದರು.

 

 

Translate »