ಸಂಕ್ರಾಂತಿ ಸಂಭ್ರಮ ಕುಂದಿಸಿದ ಕೊರೊನಾ
News, ಮೈಸೂರು

ಸಂಕ್ರಾಂತಿ ಸಂಭ್ರಮ ಕುಂದಿಸಿದ ಕೊರೊನಾ

January 16, 2022

ವ್ಯಾಪಾರ ವಹಿವಾಟು ಇಳಿಮುಖ

ನಷ್ಟದ ಆತಂಕದಲ್ಲಿ ವ್ಯಾಪಾರಿಗಳು

ಮೈಸೂರು, ಜ.೧೪(ಎಂಟಿವೈ)- ಸುಗ್ಗಿಯ ಹಬ್ಬ ಸಂಕ್ರಾAತಿ ಸಂಭ್ರಮಕ್ಕೆ ಕೊರೊನಾ ಮೂರನೇ ಅಲೆ ತಣ ್ಣÃರೆರಚಿದೆ. ಕೊರೊನಾ ಸೋಂಕಿನ ಆತಂಕದಲ್ಲಿರುವ ಜನ, ಅದ್ಧೂರಿ ಆಚರಣೆಗೆ ಮುಂದಾಗದ ಪರಿಣಾಮ ಹಬ್ಬದ ಮುನ್ನಾ ದಿನವಾದ ಶುಕ್ರವಾರ ಮೈಸೂರಿನಲ್ಲೂ ಹಬ್ಬದ ಕಳೆ ಕಾಣಲಿಲ್ಲ. ಹಬ್ಬದ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವಾಹನ ಹಾಗೂ ಜನ ದಟ್ಟಣೆ ಉಂಟಾಗುತ್ತಿತ್ತು. ಮಾರುಕಟ್ಟೆ, ಇನ್ನಿತರ ವಾಣ ಜ್ಯ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಜೋರಾಗಿರುತ್ತಿತ್ತು. ವಾಹನ ನಿಲುಗಡೆಗೆ ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಹಬ್ಬದಲ್ಲಿ ಬಳಸುವ ವಸ್ತುಗಳನ್ನು ರಾಶಿ ಹಾಕಿಕೊಂಡು ವ್ಯಾಪಾರಿಗಳು ಅತ್ಯುತ್ಸಾಹದಿಂದ ವ್ಯಾಪಾರ ಮಾಡುತ್ತಿದ್ದರು. ಸಾರ್ವಜನಿಕರು ನಾಲ್ಕಾರು ಕಡೆ ಅಡ್ಡಾಡಿ,

ಬೆಲೆ ಹೆಚ್ಚಾಗಿದ್ದರೂ ತಮಗೆ ಬೇಕಾದ ವಸ್ತುಗಳನ್ನು ಕೊಂಡು ಹೋಗುತ್ತಿದ್ದರು. ಮಾರುಕಟ್ಟೆ ಮಾತ್ರವಲ್ಲ ಮುಖ್ಯರಸ್ತೆಗಳು, ಬಡಾವಣೆಗಳನ್ನು ಸಂಪರ್ಕಿಸುವ ರಸ್ತೆಗಳು, ಪ್ರಮುಖ ವೃತ್ತಗಳಲ್ಲೂ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಈ ರೀತಿಯ ಎಲ್ಲಾ ಸಂಭ್ರಮ-ಸಡಗರವನ್ನು ಕೊರೊನಾ ನುಂಗಿ ಹಾಕಿದೆ.
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೈಸೂರು ನಗರದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಗ್ರಾಮಾಂತರ ಪ್ರದೇಶಕ್ಕೂ ನಿಧಾನವಾಗಿ ವ್ಯಾಪಿಸುತ್ತಿದೆ. ಮಕ್ಕಳನ್ನೂ ಬಾಧಿಸುತ್ತಿರುವುದರಿಂದ ಮೈಸೂರು ನಗರ ಹಾಗೂ ತಾಲೂಕಿನಲ್ಲಿ ೯ನೇ ತರಗತಿವರೆಗೆ ಭೌತಿಕ ತರಗತಿಯನ್ನು ಸ್ಥಗಿತಗೊಳಿಸ ಲಾಗಿದೆ. ರಾತ್ರಿ ಕರ್ಫ್ಯೂ ಜೊತೆಗೆ ವಾರಾಂತ್ಯ ಕರ್ಫ್ಯೂ ಅನ್ನೂ ಜಾರಿಗೊಳಿಸಲಾಗಿದೆ. ಒಂದು ರೀತಿಯಲ್ಲಿ ಆತಂಕಮಯ ವಾತಾವರಣ ನಿರ್ಮಾಣವಾಗಿರುವುದರಿಂದ ಹಬ್ಬದ ಸಂಭ್ರಮ ಕಾಣದಂತಾಗಿದೆ. ಕ್ಯಾಲೆಂಡರ್ ನೂತನ ವರ್ಷದ ಮೊದಲ ಹಬ್ಬ ನಿರಾಶಾದಾಯಕವಾಗಿದೆ. ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಇಂದು ಹೆಚ್ಚಿನ ವ್ಯಾಪಾರ ವಹಿವಾಟಿನ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ಬೆಳಗಿನಿಂದ ಮದ್ಯಾಹ್ನ ೧೨.೩೦ರವÀರೆಗೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನದ ೨ ಗಂಟೆಯ ನಂತರ ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡು ಬಂದಿತು. ಸಂಜೆ ವೇಳೆಗೆ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ದೇವರಾಜ ಮಾರುಕಟ್ಟೆ, ಚಿಕ್ಕ ಗಡಿಯಾರ ವೃತ್ತ, ಶಿವರಾಮಪೇಟೆ, ವಾಣ ವಿಲಾಸ, ಮಂಡಿ ಮಾರುಕಟ್ಟೆ, ಅಗ್ರಹಾರ ವೃತ್ತ, ನಂಜುಮಳಿಗೆ ವೃತ್ತ ಸೇರಿದಂತೆ ನಗರದ ಹಲವು ಮಾರುಕಟ್ಟೆ, ವೃತ್ತಗಳು ಹಾಗೂ ರಸ್ತೆ ಬದಿಯಲ್ಲಿ ಹಬ್ಬದ ವ್ಯಾಪಾರ ಸಂಜೆ ವೇಳೆಗೆ ಸ್ವಲ್ಪ ಬಿರುಸಾದಂತೆ ಕಂಡುಬAದಿತು. ಸಂಕ್ರಾತಿ ಹಬ್ಬದಲ್ಲಿ ಪರಸ್ಪರ ಹಂಚುವ ಎಳ್ಳು, ಬೆಲ್ಲ, ಎಳ್ಳು-ಬೆಲ್ಲ ಮಿಶ್ರಣದ ಪೊಟ್ಟಣ, ಕಬ್ಬಿನ ಜಲ್ಲೆ ಇನ್ನಿತರ ಅತ್ಯಗತ್ಯವೆನಿಸುವ ವಸ್ತುಗಳ ಖರೀದಿ ಜೋರಾಗಿತ್ತಾದರೂ ಹಿಂದಿನ ಹಬ್ಬಗಳ ಸಡಗರ ಮರುಕಳಿಸಲಿಲ್ಲ.

ಏರಿಳಿತ ಕಂಡ ದರ: ದೇವರಾಜ ಮಾರುಕಟ್ಟೆಯಲ್ಲಿ ಕಬ್ಬಿನ ಜಲ್ಲೆವೊಂದನ್ನು ೧೦, ೨೦, ೩೦ ರೂ.ಗೆ, ಅಗ್ರಹಾರ ಮತ್ತು ಇತರೆಡೆ ೫೦-೬೦ ರೂ.ಗೆ ಮಾರಾಟ ಮಾಡಲಾ ಯಿತು. ಎಳ್ಳು-ಬೆಲ್ಲ ಸ್ಪೆಷಲ್ ಮಿಕ್ಸ್ ಕಾಲು ಕೆಜಿ, ಅರ್ಧ ಮತ್ತು ಒಂದು ಕೆಜಿಯ ಪ್ಯಾಕೆಟ್‌ಗಳು ಮಾರಾಟ ಹೆಚ್ಚಾಗಿತ್ತು. ಒಂದು ಕೆಜಿಯ ಪ್ಯಾಕೆಟ್‌ಗೆ ೧೬೦ ರೂ. ದರ ನಿಗಧಿ ಮಾಡಲಾಗಿತ್ತು. ಕೆಲವರು ಎಳ್ಳು ಬೆಲ್ಲ ಮಿಕ್ಸ್ ಪ್ಯಾಕೆಟ್ ಕೊಂಡರೆ, ಬಹುತೇಕರು ಎಳ್ಳು, ಬೆಲ್ಲ, ಕೊಬ್ಬರಿ, ಕಡಲೆ ಬೀಜ, ಕಲ್ಯಾಣ ಸೇವೆ, ಕಲ್ಲು ಸಕ್ಕರೆ ಅಚ್ಚು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಪ್ರತ್ಯೇಕವಾಗಿ ಖರೀದಿಸಿದರು. ಎಳ್ಳು ಕೆಜಿಗೆ ೨೮೦ ರೂ., ಬೆಲ್ಲ ಕೆಜಿಗೆ ೧೨೦ ರೂ., ಕಡಲೆ ಬೀಜ (ಬೇಳೆ) ಕೆಜಿಗೆ ೧೬೦, ಉಂಡೆ ಕಡಲೆ ಬೀಜ ಕೆಜಿಗೆ ೧೦೦ ರೂ. ಕೊಬ್ಬರಿ ಕೆಜಿಗೆ ೧೨೦ ರೂ.ಗೆ ಮಾರಾಟ ಆಗುತ್ತಿತ್ತು.

ಹೂ ಬೆಲೆ ಏರಿಕೆ: ಹಬ್ಬದ ಹಿನ್ನೆಲೆಯಲ್ಲಿ ವಾಡಿಕೆಯಂತೆ ಹೂಗಳು ಬೆಲೆ ಸಾಮಾನ್ಯ ದಿನಗಳಿಗಿಂತ ೨೦-೩೦ ರೂ. ಹೆಚ್ಚಿರುತ್ತದೆ. ಅಂತೆಯೇ ಒಂದು ಮಾರು ಸೇವಂತಿಗೆ ೮೦-೧೦೦ ರೂ., ಮಲ್ಲಿಗೆ ಮೀಟರ್‌ಗೆ ೧೦೦ ರೂ., ಕನಕಾಂಬರ, ಕಾಕಡ ತಲಾ ೫೦ ರೂ. ಹೀಗೆ ಹೂವಿನ ಭರಾಟೆ ನಡೆಯಿತು. ಬಾಳೆ ಹಣ್ಣು ಕೆಜಿಗೆ ೫೦-೬೦ ರೂ.ಗೆ ಮಾರಾಟ ಮಾಡಲಾಯಿತು. ತರಕಾರಿ ಮತ್ತು ಹಣ್ಣುಗಳು ಬೆಲೆಯಲ್ಲಿ ಅಷ್ಟೇನು ವ್ಯತ್ಯಯ ಕಾಣಲಿಲ್ಲ. ಕೆಲವರು ಎಳ್ಳು ಬೆಲ್ಲದ ಜತೆ ಕಿತ್ತಲೆ ಹಣ್ಣು ನೀಡುವುದರಿಂದ ಕಿತ್ತಲೆ ಬೆಲೆಯೂ ದುಬಾರಿಯಾಗಿತ್ತು. ಕೆಜಿ ಹಣ್ಣು ೧೦೦ ರೂ.ಗೆ ಬಿಕರಿಯಾಗುತ್ತಿತ್ತು.

ಹಳ್ಳಿಗಳಲ್ಲೂ ಸಡಗರವಿಲ್ಲ: ಸಂಕ್ರಾತಿ ಎಂದರೆ ಸುಗ್ಗಿ ಹಬ್ಬ. ನಗರ ಪ್ರದೇಶದಲ್ಲಿ ಎಷ್ಟೇ ಅದ್ಧೂರಿಯಾಗಿ ಆಚರಿಸಿದರೂ ಹಳ್ಳಿಗಳಲ್ಲೇ ಹೆಚ್ಚು ಸಂಭ್ರಮವಿರುತ್ತಿತ್ತು. ಬೆಳೆಯ ಒಕ್ಕಣೆ ಮಾಡಿ, ರಾಶಿಗೆ ಪೂಜೆ ಸಲ್ಲಿಸಿ, ಧಾನ್ಯಲಕ್ಷಿö್ಮಯನ್ನು ಸಂಭ್ರಮದಿAದ ಮನೆ ತುಂಬಿಸಿಕೊಳ್ಳುವ ಸಂಪ್ರದಾಯ ಇನ್ನೂ ಹಲವೆಡೆ ಉಳಿದಿದೆ. ಇದರ ಹೊರತು ಬಹುತೇಕ ಎಲ್ಲಾ ಹಳ್ಳಿಗಳಲ್ಲೂ ತಮ್ಮ ಜೀವನದ ಬಂಡಿಗೆ ಹೆಗಲಾದ ರಾಸುಗಳಿಗೆ ಮಜ್ಜನ ಮಾಡಿಸಿ, ಅಲಂಕೃತಗೊಳಿಸಿ ಕಿಚ್ಚು ಹಾಯಿಸುವುದು ಇದ್ದೇ ಇದೆ. ಆದರೆ ಈ ಬಾರಿ ಅಕಾಲಿಕ ಮಳೆಯಿಂದ ನಿರೀಕ್ಷಿತ ಪ್ರಮಾಣದ ಬೆಳೆ ರೈತರ ಕೈ ಸೇರಿಲ್ಲ. ೨ ವರ್ಷಗಳಿಂದ ಕೊರೊನಾ ಪರಿಣಾಮವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಎಲ್ಲರೂ ಒಟ್ಟಾಗಿ ಹಬ್ಬವನ್ನು ಸಂಭ್ರಮಿಸುವ ಸಂದರ್ಭವೂ ಇದಲ್ಲ. ಹಾಗಾಗಿ ಹಳ್ಳಿಗಳಲ್ಲೂ ಸುಗ್ಗಿ ಸಂಭ್ರಮ ಕುಂದಿದೆ. ಆದರೂ ಸಾಂಪ್ರದಾಯಿಕವಾಗಿ ಆಚರಿಸಲು ಗ್ರಾಮೀಣ ಜನ ಸಿದ್ಧತೆ ಮಾಡಿಕೊಂಡಿದ್ದಾರೆ.

Translate »