ಕೊರೊನಾ ಕಡಿವಾಣಕ್ಕೆ ಇನ್ನೂ ಕಠಿಣ ನಿರ್ಧಾರ ಸಾಧ್ಯವಿಲ್ಲ ಸೋಂಕಿನ ಸಂಗಡ ಬದುಕಬೇಕಿದೆ
News, ಮೈಸೂರು

ಕೊರೊನಾ ಕಡಿವಾಣಕ್ಕೆ ಇನ್ನೂ ಕಠಿಣ ನಿರ್ಧಾರ ಸಾಧ್ಯವಿಲ್ಲ ಸೋಂಕಿನ ಸಂಗಡ ಬದುಕಬೇಕಿದೆ

January 16, 2022

ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟನೆ

ರಾಜ್ಯದ ಆರ್ಥಿಕ ಸ್ಥಿತಿ ಈಗಷ್ಟೇ ಸುಧಾರಿಸುತ್ತಿದೆ; ಈಗ ಮತ್ತೆ ಕಠಿಣ ಕ್ರಮ ಕೈಗೊಳ್ಳಲಾಗದು

ಬೆಂಗಳೂರು, ಜ.೧೪(ಕೆಎಂಶಿ)-ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕಠಿಣ ತೀರ್ಮಾನ ಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕೊರೊನಾ ಜೊತೆ ಬದುಕಬೇಕಿದೆ. ಆದರೆ ನಾವು ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ತೆಗೆದುಕೊಂಡರೆ ಸೋಂಕು ಎದುರಿಸಬಹುದು. ರಾಜ್ಯದ ಆರ್ಥಿಕ ಪರಿಸ್ಥಿತಿ ಈಗಷ್ಟೇ ಸುಧಾರಿಸುತ್ತಿದೆ. ಜನರ ಜೀವನವೂ ಒಂದು ಹಂತಕ್ಕೆ ಬಂದಿದೆ. ಇಂತಹ ಸನ್ನಿವೇಶದಲ್ಲಿ ಕಠಿಣ ನಿಯಮಗಳನ್ನು ತೆಗೆದು ಕೊಳ್ಳಲು ಸಾಧ್ಯವಿಲ್ಲ. ಮೂರನೇ ಅಲೆ ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ರಾಜಧಾನಿ ಯಲ್ಲಿ ಇದರ ಪ್ರಮಾಣ ಹೆಚ್ಚು. ಆದರೆ ಸೋಂಕು ತೀವ್ರತೆಯನ್ನು ಕಳೆದುಕೊಂಡಿದೆ. ಸೋಂಕಿಗೆ ಒಳಪಟ್ಟ ಶೇಕಡ ೫ ರಿಂದ ೬ ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಎಲ್ಲರೂ ಎರಡೂ ಡೋಸ್ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಬೂಸ್ಟರ್ ಡೋಸ್ ಅರ್ಹತೆ ಪಡೆದವರು ಆ ಲಸಿಕೆ ಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು, ನಿನ್ನೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೊರೊನಾ ನಿಯಂತ್ರಣ ಸಭೆ ನಡೆಸಿದ ಸಂದರ್ಭದಲ್ಲಿ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಮಾರ್ಗವಲ್ಲ. ಜನರಿಗೆ ತೊಂದರೆಯಾಗದAತೆ ಕಠಿಣ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಹೀಗಾಗಿ ಲಾಕ್‌ಡೌನ್ ಮಾಡಿ, ಸೋಂಕು ನಿಯಂತ್ರಣ ಮಾಡುವ ಪ್ರಮೇಯವಿಲ್ಲ ಎಂದರು. ಆರ್ಥಿಕತೆಗೆ ನಷ್ಟವಾಗದಂತೆ ಕೊರೊನಾನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿಯವರು ಸಲಹೆ ನೀಡಿದ್ದಾರೆ. ಹೀಗಾಗಿ ಕಠಿಣ ತೀರ್ಮಾನವನ್ನು ಕೈಗೊಳ್ಳದೇ ಸೋಂಕು ನಿಯಂತ್ರಿಸಲು ಕ್ರಮ ಜರುಗಿಸಲಾಗುವುದು. ಜನಜಂಗುಳಿ ಯನ್ನು ನಿಯಂತ್ರಿಸಿ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಂಡರೆ ಲಾಕ್‌ಡೌನ್ ಅಗತ್ಯವಿಲ್ಲ ಎಂದರು. ವೀಕೆಂಡ್ ಕರ್ಫ್ಯೂ ಮಾಡಿದರೆ ಸೋಂಕು ಕಡಿಮೆ ಆಗುತ್ತಿಲ್ಲ ಎನ್ನುವ ವಿಚಾರ…ಕಳೆದ ವಾರದಿಂದ ವೀಕೆಂಡ್ ಲಾಕ್ ಮಾಡಿದ್ದೇವೆ… ೭ ದಿನಕ್ಕೆ ಸೋಂಕು ಕಡಿಮೆ ಆಗೊಲ್ಲ. ಮೊದಲ ಎರಡು ಅಲೆಯಲ್ಲಿ ೧೪ ದಿನಗಳ ಸರಪಳಿ ಇತ್ತು. ಆದರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಈ ಸೋಂಕು ೫-೬ ಪಟ್ಟು ವೇಗವಾಗಿ ಹರಡುತ್ತಿದೆ. ಹೀಗಾಗಿ ಇನ್ನು ಸ್ವಲ್ಪ ದಿನ ಹೋದರೆ ವೀಕೆಂಡ್ ಕರ್ಫ್ಯೂ ರಿಸಲ್ಟ್ ಸಿಗಬಹುದು ಎಂದರು. ರಾಜ್ಯದಲ್ಲಿ ಕೊರೊನಾ ಸೋಂಕು ದೊಡ್ಡಮಟ್ಟದಲ್ಲಿ ಹರಡುತ್ತಿಲ್ಲ. ತಜ್ಞರು ಕೂಡ ಇದನ್ನು ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ದೊಡ್ಡ ಪ್ರಮಾಣದಲ್ಲಿ ಹರಡಿ, ೩ ಮತ್ತು ೪ನೇ ವಾರದಿಂದ ಕಡಿಮೆ ಯಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ ಎಂದು ಹೇಳಿದರು.

Translate »