ಎರಡನೇ ವಾರಾಂತ್ಯ ಕಫ್ರ್ಯೂಗೆ ಮೈಸೂರಲ್ಲಿ ಉತ್ತಮ ಪ್ರತಿಕ್ರಿಯೆ
ಮೈಸೂರು

ಎರಡನೇ ವಾರಾಂತ್ಯ ಕಫ್ರ್ಯೂಗೆ ಮೈಸೂರಲ್ಲಿ ಉತ್ತಮ ಪ್ರತಿಕ್ರಿಯೆ

January 17, 2022

ಮೈಸೂರು, ಜ.16(ಎಂಟಿವೈ)- ಕೊರೊನಾ ಸೋಂಕು ಹರಡದಂತೆ ತಡೆಯುವ ಸಲುವಾಗಿ ಸರ್ಕಾರ ಜಾರಿಗೆ ತಂದಿದ್ದ ವಾರಾಂತ್ಯ ಕಫ್ರ್ಯೂಗೆ ಭಾನುವಾರವೂ ಮೈಸೂರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಜಾರಿಗೆ ತಂದಿದ್ದ ವಾರಾಂತ್ಯ ಕಫ್ರ್ಯೂಗೆ ಜನರು ಸ್ಪಂದಿಸಿದರು. ಬೆರಳೆಣಿಕೆಯಷ್ಟು ಜನರು ಮತ್ತು ವಾಹನಗಳ ಓಡಾಟ ಮಾತ್ರ ಇತ್ತು. ಅಗತ್ಯ ಸೇವೆಗಳು, ವೈದ್ಯಕೀಯ ಸೇವೆಗಳನ್ನು ಬಿಟ್ಟರೆ ಉಳಿದ ಎಲ್ಲಾ ವ್ಯಾಪಾರ-ವಹಿವಾಟು ಬಂದ್ ಆಗಿತ್ತು.

ಮೈಸೂರಿನ ಪ್ರಮುಖ ರಸ್ತೆ, ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಜನರಿ ಲ್ಲದೆ ಬಿಕೋ ಎನ್ನುವ ಪರಿಸ್ಥಿತಿ ಮುಂದುವರಿ ಯಿತು. ಜನರ ಓಡಾಟಕ್ಕೆ ಕಡಿವಾಣ ಹಾಕಿದ್ದ ಹಿನ್ನೆಲೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಶನಿವಾರ ಸ್ತಬ್ಧವಾಗಿದ್ದ ಮೈಸೂರು ಭಾನು ವಾರವೂ ಅದೇ ಪರಿಸ್ಥಿತಿ ಮುಂದುವರೆಯಿತು. ಅರಮನೆ ಸುತ್ತಲು ಮತ್ತು ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಜನರ ಅನಗತ್ಯ ಓಡಾಟಕ್ಕೆ ಪೆÇಲೀಸರು ಕಡಿವಾಣ ಹಾಕಿದ್ದರು. ಅನಗತ್ಯವಾಗಿ ಓಡಾಡುತ್ತಿದ್ದ ಜನರನ್ನು ತಡೆದು ಪ್ರಶ್ನಿಸಿ ವಿಚಾರಿಸುತ್ತಿದ್ದರು. ಪೊಲೀಸರ ಭಯದಿಂದ ಬಹುತೇಕ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿ, ಜನ ಸಂಚಾರವೂ ಕಡಿಮೆ ಇತ್ತು.

ಸದಾ ವಾಹನಗಳಿಂದ ಗಿಜಿಗುಡುವ ಕೆ.ಆರ್. ವೃತ್ತ ಭಣಗುಡುತ್ತಿತ್ತು. ಚಾಮರಾಜ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆ, ಹುಣಸೂರು ರಸ್ತೆ, ಜೆ.ಎಲ್.ಬಿ.ರಸ್ತೆ, ನ್ಯೂ ಕಾಂತರಾಜ ರಸ್ತೆ ಇನ್ನಿತರ ರಸ್ತೆಗಳಲ್ಲಿ ವಾಹನ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಬಿಕೋ ಎನ್ನುತ್ತಿದ್ದವು. ಹೋಟೆಲ್‍ಗಳಲ್ಲಿ ಪಾರ್ಸಲ್ ಸೇವೆ ಮಾತ್ರ ದೊರೆಯುತ್ತಿತ್ತು. ಹಬ್ಬದ ಹಿನ್ನೆಲೆಯಲ್ಲಿ ಹಲವು ಹೋಟೆಲ್‍ಗಳು ಬಂದ್ ಆಗಿದ್ದವು. ಇದರೊಂದಿಗೆ ಸಿಹಿ ತಿನಿಸುಗಳ ಅಂಗಡಿಗಳು, ಚಾಟ್ಸ್ ಅಂಗಡಿಗಳೂ ಮುಚ್ಚಿದ್ದವು.
ಬಸ್ ನಿಲ್ದಾಣ ಖಾಲಿ: ಬಸ್‍ಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲದಿದ್ದರೂ ಪ್ರಯಾಣಿಕರು ಮಾತ್ರ ಇರಲಿಲ್ಲ. ಹೀಗಾಗಿ, ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ಮತ್ತು ನಗರ ಬಸ್ ನಿಲ್ದಾಣ ಸಂಪೂರ್ಣ ವಾಗಿ ಖಾಲಿ ಹೊಡೆದವು. ಶನಿವಾರ ಕೆಲ ಬಸ್‍ಗಳು ಸಂಚಾರ ನಡೆಸಿದ್ದವು. ಬೆರಳೆಣಿಕೆಯಷ್ಟು ಪ್ರಯಾಣಿಕರು ಸಹ ಇದ್ದರು. ಆದರೆ, ಭಾನುವಾರ ಮಾತ್ರ ಜನರು ನಿಲ್ದಾಣದ ಕಡೆಗೆ ಸುಳಿಯಲಿಲ್ಲ.

ರೈಲು ನಿಲ್ದಾಣವೂ ಬಿಕೋ ಎಂದಿತು: ಮೈಸೂ ರಿನ ಕೇಂದ್ರ ರೈಲ್ವೆ ನಿಲ್ದಾಣವೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಪ್ರತಿ ವಾರಾಂತ್ಯ ದಿನದಂದು ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದ ರೈಲ್ವೆ ನಿಲ್ದಾಣದಲ್ಲಿ ಇಂದು ದಿನವಿಡೀ 1500ಕ್ಕಿಂತ ಹೆಚ್ಚಿನ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿ ಸಲಿಲ್ಲ. ಹೊರ ರಾಜ್ಯಕ್ಕೆ ಹೋಗುವ ರೈಲುಗಳು ಸೇರಿ ದಂತೆ ನಿಗದಿತ ವೇಳಾಪಟ್ಟಿಯಂತೆ ಮೈಸೂರಿ ಂದ ಹಲವು ರೈಲುಗಳು ಪ್ರಯಾಣ ಬೆಳೆಸಿದವಾದರೂ ಪ್ರಯಾಣಿಕರ ಸಂಖ್ಯೆಯಲ್ಲಿ ತೀರಾ ಇಳಿಮುಖವಾಗಿತ್ತು. ಆಟೋ ರಿಕ್ಷಾ, ಓಲಾ ಹಾಗೂ ಉಬರ್ ಸೇರಿ ವಿವಿಧ ಕಂಪನಿ ಕ್ಯಾಬ್ ಗಳಿಗೂ ಗ್ರಾಹಕರಿಗೆ ಸಿಗಲಿಲ್ಲ. ಜತೆಗೆ, ಬಹುತೇಕ ಪ್ರವಾಸಿ ವಾಹನಗಳು ಸಹ ನಿಂತಲ್ಲೇ ನಿಂತಿದ್ದವು. ನಗರದ ಪ್ರಮುಖ ಪ್ರವಾಸಿತಾಣ ಗಳಲ್ಲೂ ಜನರ ಸುಳಿವು ಇರಲಿಲ್ಲ. ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ ಇನ್ನಿತರ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿ ಸಲಾಗಿತ್ತು. ಸದಾ ಕಾಲ ಜನಸಂದಣಿಯಿಂದ ಕಳೆಗಟ್ಟುತ್ತಿದ್ದ ಈ ತಾಣಗಳಲ್ಲಿ ನೀರವ ಮೌನ ಆವರಿಸಿತ್ತು.

ಸೋಮವಾರ ಎಂದಿನಂತೆ ಸಹಜ ಸ್ಥಿತಿ: ಸೋಮವಾರ ಬೆಳಗ್ಗೆ 5ಕ್ಕೆ ವಾರಾಂತ್ಯ ಕಫ್ರ್ಯೂ ತೆರವಾಗಲಿದ್ದು, ಮತ್ತೆ ಎಂದಿನಂತೆ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ದೊರೆಯಲಿದೆ. ಸಾರ್ವಜನಿಕರು, ವಾಹನಗಳು ಮಾಮೂಲಿ ಯಂತೆ ಓಡಾಟ ನಡೆಸಬಹುದು. ಮುಂದಿನ ಶನಿವಾರ, ಭಾನುವಾರವೂ ವಾರಾಂತ್ಯದ ಕಫ್ರ್ಯೂ ಮುಂದುವರಿಯುವ ಸಾಧ್ಯತೆ ಇದೆ.

Translate »