ಏನಾದರೂ ಸಾಧನೆ ಮಾಡಿ, ಸಮಾಜಕ್ಕೆ ಕೊಡುಗೆ ನೀಡಿ
ಮೈಸೂರು

ಏನಾದರೂ ಸಾಧನೆ ಮಾಡಿ, ಸಮಾಜಕ್ಕೆ ಕೊಡುಗೆ ನೀಡಿ

November 10, 2020

ಮೈಸೂರು, ನ.9(ಆರ್‍ಕೆಬಿ)- ನಮ್ಮ ಜೀವನ ಮತ್ತು ಸುತ್ತಲಿನ ಸಮಾಜವನ್ನು ನೋಡಿ ನಾವು ಏನಾದರೂ ಸಾಧನೆ ಮಾಡಬೇಕು. ಉತ್ತೇಜನ ಮತ್ತು ಸ್ಫೂರ್ತಿ ಪಡೆಯಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯ (ಕರಾಮುವಿ) ಆಯೋಜಿಸಿದ್ದ 50 ದಿನಗಳ ಸ್ಪರ್ಧಾ ತ್ಮಕ ಪರೀಕ್ಞಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದವರಿಗೆ ಆನ್‍ಲೈನ್ ಮೂಲಕ ಶುಭ ಹಾರೈಸಿ ಮಾತನಾಡಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಏಳೆಂದು ತಿಂಗಳಿಂದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಆದರೆ ಕರಾ ಮುವಿ ತರಬೇತಿ ಕೇಂದ್ರವು ಆನ್‍ಲೈನ್ ಮೂಲಕ ಸ್ಪರ್ಧಾ ತ್ಮಕ ಪರೀಕ್ಷೆಗಳಿಗೆ ತರಬೇತಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಯುವಕರಿಗೆ ಉದ್ಯೋಗ ಪಡೆದು ಕೊಳ್ಳಲು ಅನುಕೂಲವಾಗುತ್ತದೆ ಎಂದರು.

ದೇಶದ ಆರ್ಥಿಕ ಸಂಪತ್ತನ್ನು ಅಭಿವೃದ್ಧಿ ಪಡಿಸಲು ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಾಗಿ ಕರ್ನಾ ಟಕ ರಾಜ್ಯ ಮುಕ್ತ ವಿವಿ ಆನ್‍ಲೈನ್ ಮೂಲಕ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದವಾಗುವ ಪ್ರತಿಯೊಬ್ಬ ಸ್ಪರ್ಧಿಯೂ ಮಾನಸಿಕ ಹಾಗೂ ಭೌತಿಕವಾಗಿ ತಮ್ಮ ಸಾಮಥ್ರ್ಯವನ್ನು ಓರೆಗಲ್ಲಿಗೆ ಹಚ್ಚಿಕೊಳ್ಳಬೇಕು. ಇನ್ನೊಬ್ಬ ರೊಂದಿಗೆ ಸ್ಪರ್ಧಿಸಲು ತನ್ನ ಜ್ಞಾನದ ಪರಿಮಿತಿಯನ್ನು ಅರಿತುಕೊಳ್ಳಬೇಕು. ಸಾಂಪ್ರದಾಯಿಕ ದೃಷ್ಟಿಕೋನಗಳನ್ನು ಬಿಟ್ಟು ಆಧುನಿಕ ಸವಾಲುಗಳಿಗೆ ಸಜ್ಜಾಗಬೇಕು. ಸ್ವಾವ ಲಂಬನೆ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಅಧಿಕಾರಿ ಯಾಗುವುದಷ್ಟೇ ಅಲ್ಲ, ಸಮಾಜದ ಸಮಸ್ಯೆಗಳ ನಿವಾ ರಣೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಉಪ ಪ್ರಧಾನ ವ್ಯವ ಸ್ಥಾಪಕ ಐ.ಪಾಂಡುರಂಗ ಮಿತಂತಾಯ ಮಾತನಾಡಿ, ಇಂದು ಇತರೆ ಬೇರೆ ಕ್ಷೇತ್ರಗಳಿಗಿಂತ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಗಳು ಆಕರ್ಷಕವಾಗಿವೆ. ಒಮ್ಮೆ ಆಯ್ಕೆ ಯಾದರೆ ಎತ್ತರದ ಅನೇಕ ಹುದ್ದೆಗಳಿಗೇರಲು ಅವಕಾಶ ವಿದೆ. ಆದಕ್ಕೆ ತಕ್ಕಂತೆ ಶ್ರಮ ಹಾಕಬೇಕು ಅಷ್ಟೇ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಸ್.ವಿದ್ಯಾ ಶಂಕರ್, ವಿವಿಗಳು ಕೇವಲ ಪದವೀಧರರ ತಯಾರಿ ಸುವ ಸಂಸ್ಥೆಯಾಗದೆ ಜ್ಞಾನ ಪಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಇದೇ ಆಶಯದೊಂದಿಗೆ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಪ್ರಾರಂಭಿ ಸಿದೆ ಎಂದರು. ಆನ್‍ಲೈನ್ ಮೂಲಕ ಈಗಾಗಲೇ 5 ವಿವಿಧ ತರಬೇತಿ ಶಿಬಿರವನ್ನು ಕರಾಮುವಿ ನಡೆಸಿದೆ. ಮುಂದೆ ಐಎಎಸ್, ಐಪಿಎಸ್/ಕೆಎಎಸ್ ಪರೀಕ್ಷೆಗಳ ಕುರಿತು 60 ದಿನದ ತರಬೇತಿ ಪ್ರಾರಂಭವಾಗಲಿದೆ. ಈಗಾ ಗಲೇ 500ಕ್ಕೂ ಹೆಚ್ಚು ಅಭ್ಯರ್ಥಿಗಳು ತರಬೇತಿಗೆ ನೋಂದಾಯಿಸಿಕೊಂಡಿದ್ದಾರೆ ಎಂದರು. ಕರಾಮುವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಸಂಯೋಜನಾಧಿ ಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಕೆನರಾ ಬ್ಯಾಂಕ್ ಅಧಿಕಾರಿ ಎಸ್.ರಾಧಾಕೃಷ್ಣ ಇದ್ದರು.

 

 

Translate »