ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಶವ: ತನಿಖೆ ನಡೆಸಿ, ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿ ಮಹಿಳಾ ಸಾಂಸ್ಕøತಿಕ ಸಂಘಟನೆಗಳ ಪ್ರತಿಭಟನೆ
ಮೈಸೂರು

ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಶವ: ತನಿಖೆ ನಡೆಸಿ, ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿ ಮಹಿಳಾ ಸಾಂಸ್ಕøತಿಕ ಸಂಘಟನೆಗಳ ಪ್ರತಿಭಟನೆ

November 10, 2020

ಮೈಸೂರು, ನ.9 (ಆರ್‍ಕೆಬಿ)- ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಹೊಸಕೋಟೆ ರಸ್ತೆಯ ಬದಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿರುವ ಬಗ್ಗೆ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ (ಎಐಎಂಎಸ್‍ಎಸ್) ಮೈಸೂರು ಜಿಲ್ಲಾ ಘಟಕ ಆತಂಕ ವ್ಯಕ್ತಪಡಿಸಿದೆ.

ಎಐಎಂಎಸ್‍ಎಸ್ ಸಂಘಟನೆಯು ಇತರೆ ಸಂಘಟನೆಗಳ ಜೊತೆಗೂಡಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಘಟನೆಗೆ ಸಂಬಂಧಿಸಿದವರನ್ನು ಶೀಘ್ರ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು.

ಯುವತಿಯನ್ನು ಕೊಲೆ ಮಾಡಿ, ಬೆಂಕಿ ಹಚ್ಚಿರುವ ಶಂಕೆ ಇದ್ದು, ಇಂತಹ ಘಟನೆ ಗಳು ದಿನೇ ದಿನೆ ಹೆಚ್ಚುತ್ತಿವೆ. ಮಹಿಳೆಯ ರಲ್ಲಿ ಅಭದ್ರತೆಯ ವಾತಾವರಣ ನಿರ್ಮಾಣ ವಾಗಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿ ದರು. ಅಶ್ಲೀಲತೆ, ಮದ್ಯ, ಮಾದಕ ವಸ್ತು ಗಳ ಹಾವಳಿ ಮಹಿಳೆಯರಿಗೆ ಗಂಡಾಂ ತರಕಾರಿಯಾಗಿವೆ. ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಗಳು, ಅತ್ಯಾಚಾರಗಳಂತಹ ಪ್ರಕರಣ ಗಳು ನಡೆಯುತ್ತಿದ್ದು, ಸಂತ್ರಸ್ತೆಗೆ ನ್ಯಾಯ ದೊರಕದೆ ಇರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ಜಲ್ಲಾಡಳಿತ ಶೀಘ್ರ ವಾಗಿ ಪ್ರಕರಣದ ತನಿಖೆಯನ್ನು ನಡೆಸಿ, ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಅಶ್ಲೀಲತೆ ಪ್ರದರ್ಶನ, ಮದ್ಯ ಮಾದಕ ವಸ್ತುಗಳನ್ನು ನಿಷೇಧಿಸ ಬೇಕು. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಸರ್ಕಾರ ವನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಐಎಂಎಸ್‍ಎಸ್ ರಾಜ್ಯ ಉಪಾಧ್ಯಕ್ಷೆ ಸಂಧ್ಯಾ, ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಸೀಮಾ, ಎಐಡಿವೈಓ ರಾಜ್ಯ ಅಧ್ಯಕ್ಷೆ ಎಂ.ಉಮಾ ದೇವಿ, ಜಿಲ್ಲಾಧ್ಯಕ್ಷ ಹರೀಶ್, ಜಿಲ್ಲಾ ಕಾರ್ಯ ದರ್ಶಿ ಚಂದ್ರಕಲಾ, ಮುಖಂಡರಾದ ಆಸಿಯಾ, ಅಭಿಲಾಷ, ಟಿ.ಆರ್.ಸುನೀಲ್, ಅನಿಲ್ ಇನ್ನಿತರರು ಭಾಗವಹಿಸಿದ್ದರು.

 

 

Translate »