ನಾಳೆಯಿಂದ ಮೈಸೂರು ಚಳಿಗಾಲದ ರೇಸ್‍ಗಳು ಆರಂಭ
ಮೈಸೂರು

ನಾಳೆಯಿಂದ ಮೈಸೂರು ಚಳಿಗಾಲದ ರೇಸ್‍ಗಳು ಆರಂಭ

November 10, 2020

ಮೈಸೂರು, ನ.9(ಆರ್‍ಕೆಬಿ)- ಕೋವಿಡ್-19 ಲಾಕ್‍ಡೌನ್ ಮತ್ತು ನಂತ ರದ ಅನ್‍ಲಾಕ್ ಮಾರ್ಗಸೂಚಿಗಳಿಂದಾಗಿ ಮೈಸೂರಿನಲ್ಲಿ ಕಳೆದ 8 ತಿಂಗಳಿಂದ ಕೇಳಿ ಬರದಿದ್ದ ಕುದುರೆ ಕಾಲಿನ ಸದ್ದು ನಾಳೆ ಯಿಂದ ಕೇಳಿ ಬರಲಿದೆ. ಮೈಸೂರು ಚಳಿ ಗಾಲದ (2020-21) ರೇಸ್‍ಗಳು ನ.11ರಿಂದ ಡಿ.6ರವರೆಗೆ ಆರು ದಿನಗಳ ಕಾಲ ರೇಸು ಗಳು ನಡೆಯಲಿದ್ದು, ಅದಕ್ಕಾಗಿ ಮೈಸೂರು ರೇಸ್‍ಕ್ಲಬ್ (ಎಂಆರ್‍ಸಿ) ಆವರಣದಲ್ಲಿ ಎಲ್ಲವನ್ನೂ ಸಜ್ಜುಗೊಳಿಸಲಾಗಿದೆ.

ಎಂಆರ್‍ಸಿ ಅಧ್ಯಕ್ಷ ಡಾ.ಎನ್.ನಿತ್ಯಾ ನಂದರಾವ್ ಸೋಮವಾರ ಮೈಸೂರು ರೇಸ್ ಕ್ಲಬ್ ಆವರಣದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಈ ಕುರಿತ ಮಾಹಿತಿ ನೀಡಿ ದರು. ಸಾಂಕ್ರಾಮಿಕ ರೋಗದ ಬಿಕ್ಕಟ್ಟಿ ನಿಂದ ಉಂಟಾದ ನಷ್ಟಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಎಂ.ಆರ್‍ಸಿ ಸುಮಾರು 3.50 ಲಕ್ಷದಷ್ಟು ನೇರ ನಷ್ಟ ಅನುಭವಿಸುವ ಮೂಲಕ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷರು ಆನ್ ಲೈನ್ ಬೆಟ್ಟಿಂಗ್ ಪೋರ್ಟಲ್‍ಗೆ ಚಾಲನೆ ನೀಡಿದರು. ಕುದುರೆ ಪಂದ್ಯಕ್ಕೆ ಆನ್‍ಲೈನ್ ಬೆಟ್ಟಿಂಗ್ ನಡೆಸಲು ರಾಜ್ಯ ಸರ್ಕಾರ ಅನು ಮತಿ ನೀಡಿದೆ. ಇಡೀ ರಾಷ್ಟ್ರದಲ್ಲಿಯೇ ಮೊದಲ ಆನ್‍ಲೈನ್ ಕುದುರೆ ಪಂದ್ಯ ಇದಾ ಗಿದ್ದು, ಹೆಚ್ಚಿನ ಮಾಹಿತಿಯನ್ನು www. betmysore.com ಮತ್ತು www. trufwinners.com ಪೋರ್ಟಲ್‍ನಲ್ಲಿ ಆಸಕ್ತರು ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದರು.

ನಂತರ ಸಮಿತಿಯ ಸದಸ್ಯ ಬಿ.ಎನ್. ಕಾರಿಯಪ್ಪ ಆನ್‍ಲೈನ್ ಮೂಲಕ ರೇಸ್ ನಲ್ಲಿ ಭಾಗವಹಿಸುವವರಿಗೆ ಅಗತ್ಯ ಮಾಹಿತಿ ನೀಡಿದರು. ಆನ್‍ಲೈನ್ ಬೆಟ್ಟಿಂಗ್ ಪೋರ್ಟಲ್ ಲಿಂಕ್ ಎಂಆರ್‍ಸಿ ವೆಬ್‍ಸೈಟ್ www. mysoreraceclub.com ನಲ್ಲಿಯೂ ಲಭ್ಯವಿದೆ. ಆನ್‍ಲೈನ್ ಬೆಟ್ಟಿಂಗ್ ತುಂಬಾ ಸುಲಭ ಹಾಗೂ ಸರಳವಾಗಿದೆ. ನಾರ್ಥ್ ಅಲೇ ಕಂಪನಿ ಸಹಯೋಗದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದೆ. ರೇಸ್ ನಲ್ಲಿ ಭಾಗವಹಿಸುವವರು ರೇಸ್‍ಕೋರ್ಸ್‍ಗೆ ಬರುವ ಅಗತ್ಯವಿಲ್ಲ. ಅವರಿರುವ ಸ್ಥಳದಿಂ ದಲೇ ಬೆಟ್ಟಿಂಗ್ ಮಾಡಲು ಇದು ಸಹಾ ಯಕವಾಗಲಿದೆ. ಈ ವೆಬ್ ಪೋರ್ಟಲ್ Android/IOS platform ನಲ್ಲಿಯೂ ಲಭ್ಯವಿದೆ ಎಂದು ಹೇಳಿದರು.

ಕರ್ನಾಟಕದ ರೇಸಿಂಗ್ ಸಾರ್ವಜನಿ ಕರಿಗೆ ಮಾತ್ರ ಈ ಆನ್‍ಲೈನ್ ಪೋರ್ಟಲ್ ಬಳಸಲು ಅವಕಾಶವಿದೆ. ಬಳಕೆದಾರರು ತಮ್ಮನ್ನು ಪೋರ್ಟಲ್‍ನಲ್ಲಿ ನೋಂದಾ ಯಿಸಿಕೊಳ್ಳಬಹುದು. ಪೇಟಿಎಂ, ಫೋನ್‍ಪೇ ಸೇರಿದಂತೆ ಯಾವುದೇ ಡಿಜಿಟಲ್ ವ್ಯಾಲೆಟ್ ಗಳನ್ನು ಹಣ ಪಾವತಿಗಾಗಿ ಬಳಸಬಹು ದಾಗಿದೆ. ಈ ಆನ್‍ಲೈನ್ ಸಾಫ್ಟ್‍ವೇರ್ ಜಿಎಸ್‍ಟಿ ಮತ್ತು ಟಿಡಿಎಸ್‍ನಂತಹ ಎಲ್ಲಾ ಶಾಸನಬದ್ಧ ಅನುಸರಣೆಯನ್ನು ಪೂರೈ ಸುತ್ತದೆ ಎಂದರು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ; 9606036015, 9606036017 ಸಂಪ ರ್ಕಿಸಬಹುದು ಎಂದು ತಿಳಿಸಿದರು.

ಈ ಬಾರಿಯ ಚಳಿಗಾಲದ ರೇಸ್‍ಗಳಿಗೆ ಒಟ್ಟು 70,20,000 ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಈ ಋತುವಿನಲ್ಲಿ ಸುಮಾರು 400 ಕುದುರೆಗಳು ಭಾಗವಹಿ ಸುವ ನಿರೀಕ್ಷೆಯಿದ್ದು, ಈ ಬಾರಿ ತರಬೇತಿ ನೀಡಲು ಎಂಆರ್‍ಸಿಯಿಂದ ಎಂ.ಬಾಬ್ಬಿ, ಬಿಪಿನ್ ವಿ.ಸಲ್ವಿ, ಎಸ್.ಎಂ.ಜಾನ್ಸನ್, ದಿನೇಶ್ ಪೂಜಾರ್, ಎಂ.ಈಶ್ವರ್, ರಂಜೀತ್ ಶಿಂಧೆ, ಸಿ.ಡಿ.ಮೋನಪ್ಪ, ಪ್ರಶಾಂತ್ ಪವಾರ್, ಪೂರ್ಣಚಂದ್ರ ತೇಜಸ್ವಿ, ಮಹಮದ್ ಸಾಜಿದ್ ಖುರೈಷಿ, ಸಿ.ಗಿರಿನಾಥ್, ರಾಕೇಶ್, ಎಸ್.ಸಂತೋಷ್‍ರಾವ್, ಪ್ರತಾಪ್ ಎಂ. ಕಾಮತ್, ಜಿ.ಟಿ.ಸುರೇಂದರ್, ಜಿ.ಶ್ರೀನಿ ವಾಸ್ ಬಾಬು, ವಿಕ್ರಂ ಅಪ್ಪಚ್ಚು, ವಿಶಾಲ್ ಯಾದವ್, ಜೆ.ಶರವಣನ್ ಇವರಿಗೆ ಪರ ವಾನಗಿ ನೀಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಂಆರ್‍ಸಿ ಸದಸ್ಯ ರಾದ ಎಂ.ಸಿ.ಮಲ್ಲಿಕಾರ್ಜುನ, ಬಿ.ಎನ್.ಕಾರಿ ಯಪ್ಪ, ಹೆಚ್.ಕೆ.ರಮೇಶ್, ಕಾರ್ಯದರ್ಶಿ ಎಂ.ಆರ್.ಜಗನ್ನಾಥ್, ಸ್ಟೀವರ್ಡ್‍ಗಳಾದ ವೈ.ಪಿ.ಉದಯಶಂಕರ್, ಟಿ.ಡಿ. ಮಹೇಶ್, ಬಿ.ಯು.ಚೆಂಗಪ್ಪ ಉಪಸ್ಥಿತರಿದ್ದರು.

 

Translate »