ಸಿ.ಟಿ.ರವಿ, ಪ್ರಿಯಾಂಕ ಖರ್ಗೆಗೆ ಬುದ್ಧಿ ಇದೆಯೇ?
ಮೈಸೂರು

ಸಿ.ಟಿ.ರವಿ, ಪ್ರಿಯಾಂಕ ಖರ್ಗೆಗೆ ಬುದ್ಧಿ ಇದೆಯೇ?

August 17, 2021

ಮೈಸೂರು, ಆ.16(ಆರ್‍ಕೆಬಿ)- ದೇಶದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಅಟಲ್‍ಬಿಹಾರಿ ವಾಜಪೇಯಿ ಅವರ ಬಗ್ಗೆ ಅವಹೇಳನ ಕಾರಿ ಹಾಗೂ ಬಾಲಿಶವಾಗಿ ಹೇಳಿಕೆ ನೀಡುತ್ತಿರುವ ಸಿ.ಟಿ.ರವಿ ಮತ್ತು ಪ್ರಿಯಾಂಕ ಖರ್ಗೆ ಅವರಿಗೆ ಬುದ್ದಿ ಇದೆಯೇ? ಅವರನ್ನು ಹೀಗೆಲ್ಲಾ ಹೇಳಬೇಡ `ಬಾಯಿ ಮುಚ್ಚಿ’ ಎಂದು ಹೇಳುವಷ್ಟು ನೈತಿಕತೆ ಮಾಜಿ ಸಿಎಂಗಳಿಗಿದೆಯೇ? ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇಂದಿಲ್ಲಿ ಪ್ರಶ್ನಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಡಿತ್ ಜವಾಹರಲಾಲ್ ನೆಹರು ಮತ್ತು ಅಟಲ್‍ಬಿಹಾರಿ ವಾಜಪೇಯಿ ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿ ನೆಲೆಗೊಳಿಸಿದ ನಾಯಕರು. ದೇಶಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ನೆಹರು ಅವರು ತಮ್ಮ ಅಧಿಕಾರದ ಅವಧಿಗಿಂತ ಹೆಚ್ಚು ಅವಧಿ ಜೈಲಿನಲ್ಲೇ ಕಳೆದವರು. ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟ ದಲ್ಲಿದ್ದರು. ಜಾತ್ಯಾತೀತ, ಸೌಹಾರ್ದತೆ ಸಾರಿದ ನೆಹರು ಕುಟುಂಬದ ಬಗ್ಗೆ ನಮ್ಮದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಡಿದ ಟೀಕೆ ಯಾರೂ ಮೆಚ್ಚತಕ್ಕದ್ದಲ್ಲ. ಸಿ.ಟಿ.ರವಿ ಸಂಘಟನಾ ಚತುರ ನಿಜ. ಆದರೆ ನೆಹರು ಅವರನ್ನು ಕುರಿತು ಆಡಿದ ಮಾತುಗಳು ಬಿಜೆಪಿಗೂ ಶೋಭೆ ತರುವಂಥದ್ದಲ್ಲ. ಅವರು ನೆಹರು ಅವರ ಚರಿತ್ರೆಯನ್ನು ಚೆನ್ನಾಗಿ ಓದಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ನಮ್ಮದೇ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜ ಪೇಯಿ, 1964ರಲ್ಲಿ ನೆಹರು ಅಸ್ತಂಗತರಾದಾಗ ಭಾರ ತಾಂಬೆಯ ರಾಜಕುಮಾರನೊಬ್ಬ ಭಾರತದಿಂದ ಅಗಲಿ ದರು ಎಂದು ವರ್ಣಿಸಿದ್ದರು. ವಿಪಕ್ಷದಲ್ಲಿದ್ದು ನೆಹರು ಆಡಳಿತದ ಬಗ್ಗೆ ವಾಜಪೇಯಿ ಮಾಡಿದ ಭಾಷಣ ಚರಿ ತ್ರಾರ್ಹವಾದದ್ದು. ಇಂತಹ ನಾಯಕರ ಬಗ್ಗೆ ಮಾತ ನಾಡುವ ಮುನ್ನ ಅವರ ಚರಿತ್ರೆ ಅರಿತುಕೊಳ್ಳಬೇಕು.

ಕೊಟ್ಟ ಖಾತೆಯಲ್ಲಿ ಯಾವ ರೀತಿ ಕೆಲಸ ಮಾಡಬಲ್ಲೆ ಎಂದು ಮೊದಲು ಅರಿಯಬೇಕು: ಸಚಿವ ಸ್ಥಾನದ ವಿಚಾರ ದಲ್ಲಿ ಕೆಲವು ಸಚಿವರ ನಡೆವಳಿಕೆಯ ಬಗ್ಗೆ ಪ್ರಸ್ತಾಪಿಸಿದ ವಿಶ್ವನಾಥ್, ನೀವೇನು ತಜ್ಞರೇ? ನಿಮಗ್ಯಾವ ಪ್ರಬುದ್ಧತೆ, ಅನುಭವ ಇದೆ? ಎಲ್ಲಾ ದುಡ್ಡು ಇರುವ ಇಲಾಖೆಗಳೇ ಬೇಕೇ? ಎಂದು ಪ್ರಶ್ನಿಸಿದರು. ರಾಜ್ಯದ ಸಚಿವರೆಲ್ಲರೂ ಕ್ಯಾಬಿನೆಟ್ ಸಚಿವರೇ ಆಗಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳದೇ ನನಗೆ ಇಂಥದೇ ಖಾತೆ ಬೇಕು ಎಂದು ಕೇಳುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಭಿನ್ನವಾಗಿ, ವಿಶೇಷ ಕಾರ್ಯಕ್ರಮಗಳೊಂದಿಗೆ ಎಲ್ಲರನ್ನು ವಿಶ್ವಾ ಸಕ್ಕೆ ತೆಗೆದುಕೊಂಡು ಕೆಲಸ ಆರಂಭಿಸಿದ್ದಾರೆ. ಸಹಕಾರ ಕೊಟ್ಟು ಅವರೊಂದಿಗೆ ಎಲ್ಲರೂ ಹೆಜ್ಜೆ ಹಾಕಬೇಕು. ಕೊಟ್ಟಿರುವ ಖಾತೆ ಯಾವುದು? ಅದರಲ್ಲಿ ನಾನು ಯಾವ ರೀತಿ ಕೆಲಸ ಮಾಡಬಲ್ಲೆ ಎಂದು ಮೊದಲು ಅರಿತುಕೊಳ್ಳ ಬೇಕು. ಹೀಗಾಗಿ ರಾಜ್ಯದ ಹಿತದೃಷ್ಟಿಯಿಂದ ನಾನು ಸಚಿವ ಗೆಳೆಯರಲ್ಲಿ ಮನವಿ ಮಾಡುತ್ತಿರುವುದಾಗಿ ಹೇಳಿದರು.

ಯಡಿಯೂರಪ್ಪರ ಮಾರ್ಗದರ್ಶನ ಎಂದು ಬಸವ ರಾಜ ಬೊಮ್ಮಾಯಿ ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಂದೆಯ ಮಾರ್ಗದರ್ಶನವಾಗ ಬೇಕೇ ಹೊರತು ಅತ್ತೆಯ ಮಾರ್ಗದರ್ಶನದಂತಾಗ ಬಾರದು ಎಂದು ಹೇಳಿದರು.

Translate »