‘ರತ್ನನ್ ಪ್ರಪಂಚ’ದಲ್ಲಿ ಡಾಲಿ ಧನಂಜಯ್
ಸಿನಿಮಾ

‘ರತ್ನನ್ ಪ್ರಪಂಚ’ದಲ್ಲಿ ಡಾಲಿ ಧನಂಜಯ್

August 7, 2020

ನಿರ್ಮಾಪಕ ವಿಜಯ್ ಕಿರಗಂಡೂರ್ ಅವರು ಕೆಆರ್‍ಜೆ ಸ್ಟುಡಿಯೋಸ್‍ನ ಮೊದಲ ನಿರ್ಮಾಣವಾದ `ರತ್ನನ್ ಪ್ರಪಂಚ’ ಚಿತ್ರದ ಸಿದ್ಧತೆ ನಡೆಸಿದ್ದಾರೆ. ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ರೋಹಿತ್ ಪಡಕಿ ನಿರ್ದೇಶನದ ಕಾಮಿಡಿ ಡ್ರಾಮಾ ಆಗಿರಲಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ.ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ಮೂರು ವರ್ಷಗಳಿಂದ ಚಿತ್ರ ವಿತರಣೆ ಕ್ಷೇತ್ರದಲ್ಲಿರುವ ಕೆಆರ್ ಜೆ ಸ್ಟುಡಿಯೋಸ್ ಕಂಪನಿಯು ಇತ್ತೀಚೆಗೆ ತಮ್ಮದೇ ಡಿಜಿಟಲ್ ಮಾರ್ಕೆಟಿಂಗ್ ಸೆಲ್ಯೂಷನ್ ಪ್ರಾರಂಭಿಸಿದೆ. ಕೆಆರ್ ಜೆ ಕನೆಕ್ಟ್ಸ್. ಎಂಬ ಹೆಸರಿನಲ್ಲಿ ಈ ಸಂಸ್ಥೆ ಕಾರ್ಯಾಚರಿಸಲಿದೆ. ನಟರಾದ ಯಶ್ ಮತ್ತು ರಾಧಿಕಾ ಪಂಡಿತ್ ಇದಕ್ಕೆ ಚಾಲನೆ ನೀಡಿದ್ದಾರೆ. ಈ ನಂತರ ವಿತರಣಾ ಕಂಪನಿ ಪೆÇ್ರಡಕ್ಷನ್ ಉದ್ಯಮದಲ್ಲಿ ತನ್ನ ಮೊದಲ ಹೆಜ್ಜೆ ಇಡುತ್ತಿದೆ.

ರತ್ನನ್ ಪ್ರಪಂಚ ಕಥೆಯನ್ನು ನಿರ್ದೇಶಕ ರೋಹಿತ್ ಅವರು ತಂಡದ ಸದಸ್ಯರೊಡನೆ ಕೂಡಿ ಬರೆದಿದ್ದಾರೆ. ಶ್ರೀಶ ಕುಡುವಳ್ಳಿ ಛಾಯಾಗ್ರಹಣ, ಚಿತ್ರಕ್ಕೆ ಅಜನೀಶ್ ಲೋಕಾಂತ್ ಸಂಗೀತ ಇರಲಿದೆ. ಎಡಿಟಿಂಗ್ ಡೆಸ್ಕ್ ಅನ್ನು ದೀಪು ಎಸ್.ಕುಮಾರ್ ನೋಡಿಕೊಳ್ಳಲಿದ್ದು, ಶಿವಕುಮಾರ್ ಆರ್ಟ್ ಡಿಪಾರ್ಟ್ ಮೆಂಟ್ ಅನ್ನು ನಿರ್ವಹಿಸಲಿದ್ದಾರೆ. ನಿರ್ದೇಶಕರ ಪ್ರಕಾರ, ರತ್ನನ್ ಪ್ರಪಂಚ ಚಿತ್ರದಲ್ಲಿನ ಧನಂಜಯ್ ರತ್ನನ ಪಾತ್ರ ಚಿತ್ರರಂಗದ ಇತಿಹಾಸದಲ್ಲೊಂದು ಹೊಸ ಅಧ್ಯಾಯ ರಚಿಸಲಿದೆ.

“ಚಿತ್ರವು ಹಾಸ್ಯ ಮತ್ತು ಎಮೋಷನ್‍ಗಳೊಂದಿಗೆ ಬೆರೆತಿರಲಿದೆ. ಧನಂಜಯ್ ಅವರನ್ನು ಸಾಮಾನ್ಯ ವ್ಯಕ್ತಿಯಂತೆ ತೋರಿಸಲಾಗಿದ್ದು ದೆ. ಚಿತ್ರವು ತಾಯಿ ಮತ್ತು ಮಗನ ನಡುವಿನ ಮೌಲ್ಯಗಳನ್ನು ಮತ್ತು ಅವಳ ಮಕ್ಕಳೊಂದಿಗಿನ ಸಂಬಂಧವನ್ನು ಸಹ ಪರಿಶೋಧಿಸುತ್ತದೆ. ಇವೆಲ್ಲವೂ ಸಹ ಹಾಸ್ಯದ ಲೇಪನದೊಡನೆ ಬರುತ್ತದೆ” ಎನ್ನಲಾಗಿದೆ.

Translate »