ಮೇ 25ರಿಂದ ದೇಶಿಯ ವಿಮಾನ ಹಾರಾಟ
ಮೈಸೂರು

ಮೇ 25ರಿಂದ ದೇಶಿಯ ವಿಮಾನ ಹಾರಾಟ

May 21, 2020

ನವದೆಹಲಿ, ಮೇ 20- ದೇಶಿಯ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ತಿಂಗಳ 25 ರಿಂದ ಹಂತಹಂತವಾಗಿ ವಿಮಾನ ಸೇವೆಗಳು ಆರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದೀಪ್ ಸಿಂಗ್‍ಪುರಿ ತಿಳಿಸಿದ್ದಾರೆ.

ಈ ಸಂಬಂಧ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳಿಗೆ ಮಾಹಿತಿ ರವಾನಿಸಲಾಗಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯುವು ದಕ್ಕಾಗಿ ಮಾ.25ರಿಂದ ಎಲ್ಲ ದೇಶಿಯ ಹಾಗೂ ಅಂತರರಾಷ್ಟ್ರೀಯ ವಿಮಾನ ಗಳ ಹಾರಾಟವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು. ಲಾಕ್‍ಡೌನ್ ಅವಧಿ ಯಲ್ಲಿ ಸರಕು ಸಾಗಾಣಿಕೆ, ಕೆಲ ವಿಶೇಷ ಸೇವೆಗಳ ವಿಮಾನಗಳ ಹಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಮೇ 25ರಿಂದ ದೇಶಿಯ ವಿಮಾನಗಳ ಪ್ರಯಾಣ ಆರಂಭ ವಾಗಲಿದೆ. ಎಲ್ಲ ವಿಮಾನ ನಿಲ್ದಾಣಗಳು, ವಿಮಾನ ಸಂಸ್ಥೆಗಳಿಗೆ ಈ ಸಂಬಂಧ ಮಾಹಿತಿ ರವಾನಿಸಲಾಗಿದ್ದು, ಸಿದ್ಧವಾಗಿ ರುವಂತೆ ಸೂಚಿಸಿದ್ದೇವೆ. ಪ್ರಯಾಣಿಕರ ಸಂಚಾರ, ಜಾಗ್ರತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಚಿವಾಲಯ ಸದ್ಯದಲ್ಲೇ ಬಿಡುಗಡೆ ಮಾಡಲಿದೆ ಎಂದು ಹರದೀಪ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Translate »