ಬೆಂಗಳೂರಿನಿಂದ ಮೈಸೂರು, ಬೆಳಗಾವಿಗೆ ವಿಶೇಷ ರೈಲು
ಮೈಸೂರು

ಬೆಂಗಳೂರಿನಿಂದ ಮೈಸೂರು, ಬೆಳಗಾವಿಗೆ ವಿಶೇಷ ರೈಲು

May 21, 2020

ಬೆಂಗಳೂರು, ಮೇ 20- ದಕ್ಷಿಣ ರೈಲ್ವೆ ಬೆಂಗಳೂರು-ಬೆಳಗಾವಿ ಮತ್ತು ಬೆಂಗ ಳೂರು-ಮೈಸೂರು ಮಧ್ಯೆ ಎಕ್ಸ್‍ಪ್ರೆಸ್ ರೈಲು ಓಡಿಸಲು ಮುಂದಾಗಿದೆ.

ಈ ರೈಲು ಓಡುವ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ. ಭಾರತೀಯ ರೈಲ್ವೇ ವೆಬ್‍ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಈ ರೈಲು ಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ನಿಲ್ದಾಣದಲ್ಲಿನ ಕೌಂಟರ್ ಗಳಲ್ಲಿ ಟಿಕೆಟ್ ನೀಡುವುದಿಲ್ಲ. ಭಾನುವಾರ ರೈಲುಗಳು ಸಂಚರಿಸುವುದಿಲ್ಲ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಬೆಂಗಳೂರಿನಿಂದ ಬೆಳಗಾವಿಗೆ ಸೋಮವಾರ, ಬುಧವಾರ, ಶುಕ್ರವಾರ ರೈಲು ಓಡಿದರೆ, ಬೆಳಗಾವಿಯಿಂದ ಬೆಂಗಳೂರಿಗೆ ಮಂಗಳವಾರ, ಗುರುವಾರ, ಶುಕ್ರವಾರ ಸಂಚರಿಸಲಿದೆ.

ಈ ರೈಲು ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೇಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ ನಿಲ್ದಾಣಗಳಲ್ಲಿ ನಿಲ್ಲಲಿದೆ. ಬೆಂಗಳೂರಿನಿಂದ ಮೈಸೂರಿಗೆ ಬೆಳಿಗ್ಗೆ 9:43, 10:15, 10:48, 11:08, 11:44, 11:59, ಮಧ್ಯಾಹ್ನ 12:45ಕ್ಕೆ ಹೊರಟರೆ ಮೈಸೂರಿನಿಂದ ಬೆಂಗಳೂರಿಗೆ ಮಧ್ಯಾಹ್ನ 1:45, 1:54, 2:10, 2:40, 3:02, 3:34, 4:10ಕ್ಕೆ ಹೊರಡಲಿದೆ. ಬೆಂಗಳೂರು-ಮೈಸೂರು ರೈಲುಗಳಿಗೆ ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆಯಿದೆ.

Translate »