ಕೊರೊನಾ ಭೀತಿ ಬಿಟ್ಟು ರಕ್ತದಾನ ಮಾಡಿ: ಶಾಸಕ ರಾಮದಾಸ್
ಮೈಸೂರು

ಕೊರೊನಾ ಭೀತಿ ಬಿಟ್ಟು ರಕ್ತದಾನ ಮಾಡಿ: ಶಾಸಕ ರಾಮದಾಸ್

June 29, 2020

ಮೈಸೂರು, ಜೂ.28(ಆರ್‍ಕೆಬಿ)- ಕೊರೊನಾ ಭೀತಿಯಿಂದಾಗಿ ರಕ್ತದಾನಿಗಳು ರಕ್ತ ನೀಡಲು ಮುಂದೆ ಬರುತ್ತಿಲ್ಲ. ಆಸ್ಪತ್ರೆ ಗಳಲ್ಲಿ ರಕ್ತದ ಕೊರತೆಯಾಗಿದೆ. ಆದ್ದ ರಿಂದ ದಾನಿಗಳು ಆತಂಕ ತೊರೆದು ರಕ್ತ ದಾನಕ್ಕೆ ಮುಂದಾಗಬೇಕು ಎಂದು ಕೃಷ್ಣ ರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮ ದಾಸ್ ಮನವಿ ಮಾಡಿದರು.

ಮೈಸೂರಿನ ಚಾಮುಂಡಿಪುರಂ ಬಡಾ ವಣೆಯ ಅಪೂರ್ವ ಸಭಾಂಗಣದಲ್ಲಿ ಅಪೂರ್ವ ಸ್ನೇಹ ಬಳಗ, ಜೀವಧಾರ ರಕ್ತನಿಧಿ ಕೇಂದ್ರ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಭಾನುವಾರ ಜಂಟಿಯಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಲಾಕ್‍ಡೌನ್ ಸಂದರ್ಭ ರಕ್ತದಾನಕ್ಕೆ ದಾನಿ ಗಳು ಹಿಂಜರಿದ ಕಾರಣ ರಕ್ತನಿಧಿ ಸಂಖ್ಯೆ ಕುಸಿಯುತ್ತಿದೆ. ಮಾನವೀಯ ದೃಷ್ಟಿಯಿಂದ ಯುವಜನರು ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವರಕ್ಷಣೆಗೆ ಆಸರೆ ಯಾಗುತ್ತಿರುವುದು ಶ್ಲಾಘನೀಯ ಎಂದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ನಾಡ ಪ್ರಭು ಕೆಂಪೇಗೌಡರ ಅವಿರತ ಪ್ರಯತ್ನದ ಫಲವಾಗಿ ಬೆಂಗಳೂರು ಇಂದು ಇಡೀ ದೇಶದ ಗಮನ ಸೆಳೆಯುವಂತಿದೆ. ನೂರಾರು ಕೆರೆಕಟ್ಟೆಗಳು, ಗುಡಿ ಗೋಪುರ ಗಳು, ಅಗ್ರಹಾರವನ್ನು ನಿರ್ಮಿಸಿದ್ದಾರೆ. ವ್ಯವಸ್ಥಿತ ಮಾರುಕಟ್ಟೆಗಳು ನಿರ್ಮಾಣ ಗೊಂಡಿವೆ. ಅವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಯುವ ಮುಖಂಡ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜ ಪೇಯಿ, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವ ರಾಜ್ ಬಸಪ್ಪ, ಮಹೇಶ್, ಲಕ್ಷ್ಮಿದೇವಿ, ನರ ಸಿಂಹರಾಜು, ಡ್ರಿಲ್ ಸಂತೋಷ್, ಶ್ರೀಕಾಂತ್ ಕಶ್ಯಪ್, ಬಿಜೆಪಿ ಯುವ ಮೋರ್ಚಾ ಕ್ಷೇತ್ರ ಅಧ್ಯಕ್ಷ ಲೋಹಿತ್, ಕಾರ್ತಿಕ್, ಅವಿನಾಶ್, ಮಹಾಂತೇಶ್, ನವೀನ್, ಸಚೀಂದ್ರ ಇನ್ನಿತರರು ಉಪಸ್ಥಿತರಿದ್ದರು.

Translate »