ಬೆಂಗಳೂರು ಬಿಟ್ಟು ಊರಿಗೆ ತೆರಳಬೇಡಿ
ಮೈಸೂರು

ಬೆಂಗಳೂರು ಬಿಟ್ಟು ಊರಿಗೆ ತೆರಳಬೇಡಿ

July 6, 2020

ಬೆಂಗಳೂರು: ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಜನತೆ ಆತಂಕಪಡುವ ಅಗತ್ಯವಿಲ್ಲ. ಬೆಂಗ ಳೂರು ತೊರೆಯ ಬೇಡಿ ಎಂದು ಗೃಹ ಸಚಿವ ಬಸವ ರಾಜ್ ಬೊಮ್ಮಾಯಿ ಜನತೆಗೆ ಮನವಿ ಮಾಡಿದ್ದಾರೆ.

ಜನರು ಆತಂಕ ಹಾಗೂ ಲಾಕ್‍ಡೌನ್ ಭೀತಿಯಿಂದ ನಗರವನ್ನು ಬಿಟ್ಟು ತಮ್ಮ ಊರುಗಳ ಕಡೆ ಮುಖ ಮಾಡಿದ್ದಾರೆ. ಇದರಿಂದ ಜಿಲ್ಲೆ ಹಾಗೂ ಹಳ್ಳಿಗಳಲ್ಲಿ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಜನರು ದಯವಿಟ್ಟು ಬೆಂಗಳೂರಿನಲ್ಲಿ ಸುರಕ್ಷತೆಯಿಂದ ಇರಿ. ಸರ್ಕಾರ ಲಾಕ್ ಡೌನ್ ಮಾಡುವುದಿಲ್ಲ. ಲಾಕ್‍ಡೌನ್ ಆಗುತ್ತದೆ ಎಂಬ ಭಯ ಪಡಬೇಡಿ ಎಂದು ಬಸವರಾಜ್ ಬೊಮ್ಮಾಯಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮುಖ್ಯಮಂತ್ರಿ ಯಡಿ ಯೂರಪ್ಪ ಅವರ ನಿರ್ಣಯದಂತೆ ಪ್ರತಿ ಭಾನುವಾರ ಹಾಗೂ ಒಟ್ಟು ನಾಲ್ಕು ಭಾನುವಾರ ಲಾಕ್‍ಡೌನ್ ಮಾಡಲು ನಿರ್ಧಾರ ಮಾಡಲಾಗಿತ್ತು. ಇಂದಿನ ಲಾಕ್ಡೌನ್ ಪ್ರಾರಂಭದಲ್ಲಿ ಯಶಸ್ವಿ ಆಗಿದೆ. ಜನರು ಸ್ವಯಂ ಪ್ರೇರಿತರಾಗಿ ಕಫ್ರ್ಯೂಗೆ ಬೆಂಬಲ ಕೊಟ್ಟು ಸ್ವಯಂ ಲಾಕ್ ಆಗಿದ್ದಾರೆ. ನಗರದಲ್ಲಿ ವಾಹನ ಸಂಚಾರ ವಿರಳವಾಗಿದೆ. ಜನರೂ ಕೂಡಾ ಅನಗತ್ಯ ವಾಗಿ ಹೊರಗಡೆ ಬಂದಿಲ್ಲ. ಇನ್ನೂ ಸಂಜೆವರೆಗೆ ಎಲ್ಲರೂ ಕಟ್ಟುನಿಟ್ಟಿನ ಲಾಕ್‍ಡೌನ್ ನಿಯಮಾವಳಿ ಪಾಲನೆ ಮಾಡಬೇಕು. ಜನರೇ ಸ್ವಯಂ ನಿಯಂತ್ರಣ ಹಾಕಿಕೊಳ್ಳಿ ಎಂದು ಕರೆ ನೀಡಿದರು. ಕೊರೊನಾ ವಾರಿಯರ್‍ಗಳಾದ ನಮ್ಮ ಪೆÇಲೀಸರಿಗೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಮೂರು ತಿಂಗಳಿಂದ ನಿಮ್ಮನ್ನು ಕಾಯುತ್ತಿರುವ ಕೊರೋನಾ ವಾರಿಯರ್‍ಗಳು ಸುರಕ್ಷತೆಯಿಂದ ಇರಬೇಕು ಎಂದರೆ ದಯವಿಟ್ಟು ಜನರು ಸಹಕಾರ ನೀಡಬೇಕು. ಪ್ರತಿದಿನ ಐದಾರು ಪೆÇಲೀಸ್ ಠಾಣೆ ಸೀಲ್‍ಡೌನ್ ಆಗುತ್ತಿದೆ. ಪೆÇಲೀಸರ ಹಿತದೃಷ್ಟಿಯಿಂದ ಅವರ ಆರೋಗ್ಯ ತಪಾಸಣೆ, ಟೆಸ್ಟಿಂಗ್ ಟ್ರೀಟ್‍ಮೆಂಟ್‍ಗೆ ಮತ್ತಷ್ಟು ಆದ್ಯತೆ ನೀಡುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.