60 ವರ್ಷ ಮೇಲ್ಪಟ್ಟವರನ್ನು ಹೋಂ ಐಸೋಲೇಷನ್‍ನಲ್ಲಿರಿಸಲು ಕಾನೂನು
ಮೈಸೂರು

60 ವರ್ಷ ಮೇಲ್ಪಟ್ಟವರನ್ನು ಹೋಂ ಐಸೋಲೇಷನ್‍ನಲ್ಲಿರಿಸಲು ಕಾನೂನು

July 6, 2020

ಬೆಂಗಳೂರು,ಜು.5-ರಾಜ್ಯದಲ್ಲಿ ಕೋವಿಡ್ ನಿಯಂ ತ್ರಣದಲ್ಲಿದ್ದು ಜನರು ಆತಂಕಪಡುವ ಅಗತ್ಯವಿಲ್ಲ, ಹಿರಿಯ ನಾಗರಿಕರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. 60 ವಯಸ್ಸಿ ಗಿಂತ ಮೇಲ್ಪಟ್ಟ ಹಿರಿಯರನ್ನು ಹೋಂ ಐಸೋಲೇಷನ್ ನಲ್ಲಿರಿಸಲು ಕಾನೂನು ತರಲಾಗುವುದು ಎಂದು ವೈದ್ಯ ಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಹಿರಿಯ ನಾಗರಿಕರಿಗೆ ಸೋಂಕು ತಗುಲದಂತೆ ನೋಡಿ ಕೊಳ್ಳುವ ಸವಾಲು ಎಲ್ಲರ ಮೇಲಿದೆ. ಅದಕ್ಕಾಗಿಯೇ ಅವ ರನ್ನು ಹೊರ ಕಳುಹಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವಜನತೆ ಮೇಲಿದೆ. ಬೇರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 60 ವಯಸ್ಸಿಗಿಂತ ಮೇಲ್ಪಟ್ಟವರು, ಜ್ವರ ಲಕ್ಷಣ ಗಳಿರುವ ಹಿರಿಯ ನಾಗರಿಕರನ್ನು ಟೆಸ್ಟ್‍ಗೆ ಒಳಪಡಿಸು ವಂತೆ ಕಾರ್ಯಪಡೆಗಳಿಗೆ ಸೂಚನೆ ನೀಡಲಾಗಿದೆ. ಹಿರಿಯ ನಾಗರಿಕರನ್ನು ಮನೆಗಳಿಂದ ಹೊರ ಬಿಡಬಾರದು ಎಂಬ ಕಾನೂನು ಜಾರಿಗೂ ಚಿಂತನೆ ನಡೆಸಲಾಗುತ್ತಿದೆ. ತಜ್ಞರು ಮತ್ತು ಪ್ರಮುಖರ ಜತೆ ಈ ಕುರಿತು ಚರ್ಚಿಸಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ಬೆಂಗಳೂರು ನಗರದಲ್ಲಿ ಮರಣ ಪ್ರಮಾಣ ಕಡಿಮೆ: ದೇಶದ ಮಹಾನಗರಗಳಾದ ದಿಲ್ಲಿ, ಮುಂಬೈ, ಚೆನ್ನೈ ಗಳಿಗೆ ಹೋಲಿಕೆ ಮಾಡಿದಾಗ ಬೆಂಗಳೂರು ನಗರದಲ್ಲಿ ಮರಣ ಪ್ರಮಾಣ ಶೇ.1.46ರಷ್ಟು. ಹೀಗಾಗಿ ಯಾರೊ ಬ್ಬರು ಭಯಪಡಬೇಕಿಲ್ಲ ಎಂದು ವಿವರಿಸಿದರು. ಕಳೆದ 10 ದಿನಗಳಿಂದ ಈಚೆಗೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಚಿಕಿತ್ಸೆ ನೀಡಲು ಮತ್ತು ನಿಗಾ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಗರದ ವಾರ್ಡ್‍ನಿಂದ ಗ್ರಾಮದ ಹಂತದ ವರೆಗೆ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದರು.

ನಮ್ಮಲ್ಲಿ ಒಟ್ಟು 80 ಪ್ರಯೋಗಾಲಯಗಳಿವೆ: ಕಾರ್ಯಪಡೆ ಉಸ್ತುವಾರಿಗಾಗಿಯೇ ಹಿರಿಯ ಅಧಿಕಾರಿ ಅತೀಕ್ ಅವರನ್ನು ನಿಯೋಜಿಸಲಾಗಿದೆ. ಈ ಸಮಿತಿಗಳು ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿ ಅನ್ವಯ ರೋಗ ಲಕ್ಷಣ ಇಲ್ಲದ ರೋಗಿಗಳ ಕ್ವಾರಂಟೈನ್ ವ್ಯವಸ್ಥೆ, ಜ್ವರ ಲಕ್ಷಣ ಇರುವವರು, ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರೀಕರನ್ನು ಗುರುತಿಸಿ ಟೆಸ್ಟ್‍ಗೆ ಒಳಪಡಿ ಸುವ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದರು. ನಮ್ಮಲ್ಲಿ ಒಟ್ಟು 80 ಪ್ರಯೋಗಾಲಯಗಳಿವೆ. ಅವುಗಳ ಪೈಕಿ ಕೆಲ ಲ್ಯಾಬ್‍ಗಳ ಮೇಲೆ ಒತ್ತಡವಿದೆ. ಇದನ್ನು ನಿವಾರಿಸಿ ದಿನದ 24 ತಾಸಿನಲ್ಲಿ ವರದಿ ನೀಡುವ ವ್ಯವಸ್ಥೆ ಜಾರಿಗೊಳಿಸುವ ಸಲುವಾಗಿ ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲಾಗಿದೆ. ಹಾಗೆಯೇ ಟೆಸ್ಟ್‍ಗಳ ಸಂಖ್ಯೆಯನ್ನು ದಿನವೊಂದಕ್ಕೆ 30 ಸಾವಿರಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಖಾಸಗಿ ಲ್ಯಾಬ್‍ಗಳೂ ಕೂಡ ಪೂಣ9 ಪ್ರಮಾಣದಲ್ಲಿ ಟೆಸ್ಟ್‍ಗಳನ್ನು ಮಾಡಲೇ ಬೇಕು. ಒಂದು ವೇಳೆ ನಿರಾಕರಿಸಿದರೆ ಕ್ರಮ ಜರುಗಿಸಲಾಗುವುದು. ಅಂತಹ ಖಾಸಗಿ ಮೆಡಿಕಲ್ ಕಾಲೇಜುಗಳ ಮಾನ್ಯತೆ ನವೀಕರಣ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನಮ್ಮಲ್ಲಿ ಹಾಸಿಗೆ ಕೊರತೆ ಇಲ್ಲ. ಹಂಚಿಕೆಯಲ್ಲಿನ ಗೊಂದಲ: ನಮ್ಮಲ್ಲಿ ಕೋವಿಡ್ ಕೇರ್, ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ 819 ಹಾಸಿಗೆಗಳ ಪೈಕಿ 152 ಖಾಲಿ ಯಿವೆ, ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ 1899ಹಾಸಿಗೆ ಪೈಕಿ 779 ಲಭ್ಯವಿವೆ, ಸರ್ಕಾರಿ ಆಸ್ಪತ್ರೆಗಳಲ್ಲಿ 611ರಲ್ಲಿ ಇನ್ನೂ 105 ಖಾಲಿಯಿವೆ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳಿವೆ. ಖಾಸಗಿ ಆಸ್ಪತ್ರೆಗಳು ನಮಗೆ 2734 ಹಾಸಿಗೆ ನೀಡಬೇಕಿದ್ದು ಇದುವರೆಗೆ 116 ಮಾತ್ರ ನೀಡಿದ್ದಾರೆ. ಹೀಗಾಗಿ ನಮ್ಮಲ್ಲಿ ಹಾಸಿಗೆ ಕೊರತೆ ಇಲ್ಲ. ಹಂಚಿಕೆಯಲ್ಲಿನ ಗೊಂದಲ ನಿವಾರಣೆ ಆಗಿ ಒಂದೆರಡು ದಿನದಲ್ಲಿ ಎಲ್ಲವೂ ಸರಿಯಾಗಲಿದೆ. ಜನರು ಗೊಂದಲಕ್ಕೆ ಒಳಗಾಗುವ, ಆತಂಕಪಡುವ ಅಗತ್ಯವಿಲ್ಲ ಎಂದರು.

ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ ನಿಜ: ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ ನಿಜ. ಅದನ್ನು ನಿರೀಕ್ಷಿಸಲಾಗಿತ್ತು, ಇನ್ನೂ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಯವರು ಇದಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ನಮ್ಮ ವೈದ್ಯರು ಮತ್ತು ಸಿಬ್ಬಂದಿ ಕೂಡ ಹೈರಾಣಾಗಿದ್ದಾರೆ. ಅವರು ನಾಲ್ಕು ತಿಂಗಳುಗಳಿಂದ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ವಾಸ್ತವ ಸಂಗತಿ ಅರ್ಥ ಮಾಡಿಕೊಂಡು ಸಾರ್ವಜನಿಕರು, ಪ್ರತಿ ಪಕ್ಷನಾಯಕರು ಸರ್ಕಾರದ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

Translate »