ವರದಕ್ಷಿಣೆ ಕಿರುಕುಳ: 10 ತಿಂಗಳ ಹಸುಗೂಸು ಕೊಂದು ಮಂಡ್ಯ ಜಿಪಂ ಮಾಜಿ ಸದಸ್ಯೆ ಪುತ್ರಿ ಆತ್ಮಹತ್ಯೆ
ಮಂಡ್ಯ

ವರದಕ್ಷಿಣೆ ಕಿರುಕುಳ: 10 ತಿಂಗಳ ಹಸುಗೂಸು ಕೊಂದು ಮಂಡ್ಯ ಜಿಪಂ ಮಾಜಿ ಸದಸ್ಯೆ ಪುತ್ರಿ ಆತ್ಮಹತ್ಯೆ

August 2, 2022

ನಾಗಮಂಗಲ, ಆ.1- ಪ್ರೀತಿಸಿ ವಿವಾಹವಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪುತ್ರಿ ವರದಕ್ಷಿಣೆ ಕಿರುಕುಳದಿಂದಾಗಿ ಡೆತ್‍ನೋಟ್ ಬರೆದಿಟ್ಟು 10 ತಿಂಗಳ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾದ ಘಟನೆ ನಾಗಮಂಗಲ ತಾಲೂಕು ಕೆಂಚೇಗೌಡನ ಕೊಪ್ಪಲು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಜಿಪಂ ಮಾಜಿ ಸದಸ್ಯೆ ಸುನಂದಾ ದೊರೆಸ್ವಾಮಿ ಪುತ್ರಿ ಬಿಂದು(25) ತನ್ನ ಪುತ್ರಿ 10 ತಿಂಗಳ ಜಾಹ್ನವಿ ಯನ್ನು ಕೊಂದು ನೇಣಿಗೆ ಶರಣಾದವಳಾಗಿದ್ದಾಳೆ.
ವಿವರ: ಬಿಂದು ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವೇಳೆ ತನ್ನದೇ ಗ್ರಾಮ ದವನಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡು ತ್ತಿದ್ದ ನವೀನ್ ಎಂಬಾತನನ್ನು ಪ್ರೀತಿಸಿ, ಮನೆಯ ವರಿಗೆ ಗೊತ್ತಾಗದಂತೆ ಕಳೆದ 5 ವರ್ಷಗಳ ಹಿಂದೆ ಬೆಳ್ಳೂರು ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹವಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿನಲ್ಲಿ ನವೀನ್ ಜೊತೆ ವಾಸವಾಗಿದ್ದಳು.

ಈ ವೇಳೆ ಪತಿ ನವೀನ್, ಅತ್ತೆ ನಾಗಮ್ಮ, ನಾದಿನಿ ಯರಾದ ನವ್ಯ ಮತ್ತು ನಯನಾ ಅವರು ಬಿಂದುವಿಗೆ ವರ ದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ. ಈ ನಡುವೆ ಪತಿ ಮಮತಾ ಎಂಬಾಕೆಯ ಜೊತೆಗೆ ಸಂಬಂಧ ಇರಿಸಿಕೊಂಡಿದ್ದು, ಬಿಂದುವಿಗೆ ವಿಚ್ಛೇದನಾ ನೀಡಿ ಆಕೆಯನ್ನು ವಿವಾಹವಾಗುವುದರ ಬಗ್ಗೆ ಹೇಳುತ್ತಿದ್ದ. ಆತನಿಗೆ ಆತನ ಮನೆಯವರು ಬೆಂಬಲ ನೀಡುತ್ತಿದ್ದರು ಎಂದು ಹೇಳಲಾಗಿದೆ.

ಕಳೆದ ಏಪ್ರಿಲ್ 2ರಂದು ಯುಗಾದಿ ಹಬ್ಬಕ್ಕಾಗಿ ತವರು ಮನೆಗೆ ಪುತ್ರಿ ಯೊಂದಿಗೆ ಬಂದ ಬಿಂದು ತನಗೆ ಪತಿ ಮನೆಯಲ್ಲಿ ವರದಕ್ಷಿಣೆಗಾಗಿ ಆಗುತ್ತಿರುವ ಕಿರುಕುಳದ ಬಗ್ಗೆ ಪೋಷ ಕರಿಗೆ ತಿಳಿಸಿದ್ದು, ಗಂಡನ ಮನೆಗೆ ಹೋಗದೆ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದಾಳೆ. ಈ ನಡುವೆ ಆಕೆಯ ಗಂಡ ನವೀನ್ ನಾಗಮಂಗಲ ಪಟ್ಟಣ ದಲ್ಲಿ ಬಿಂದು ಹೆಸರಿನಲ್ಲಿದ್ದ ಮನೆಯನ್ನು ಮಾರಾಟ ಮಾಡಿದ್ದಾನೆ. ನೆನ್ನೆ(ಭಾನುವಾರ) ಗ್ರಾಮಕ್ಕೆ ಆಗಮಿಸಿದ್ದ ನವೀನ್ ಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗಿ ಸಂಜೆ ಮನೆಗೆ ತಂದು ಬಿಟ್ಟು ಬೆಂಗಳೂರಿಗೆ ತೆರಳಿದ್ದ. ಆ ವೇಳೆ ಆತ ವ್ಯಾಪಾರ ಮಾಡುವುದ ಕ್ಕಾಗಿ 10 ಲಕ್ಷ ರೂ.ಗಳನ್ನು ನಿಮ್ಮ ತಂದೆಯಿಂದ ತೆಗೆದುಕೊಂಡು ಬಾ ಹಾಗೂ ಸಹೋದರಿಯರಿಗೆ ಹಣ ನೀಡಬೇಕು. ವರದಕ್ಷಿಣೆಯಾಗಿ 100 ಗ್ರಾಂ ಚಿನ್ನದ ಒಡವೆಯನ್ನು ತೆಗೆದುಕೊಂಡು ಬರುವಂತೆ ಪೀಡಿಸಿದನ್ನಲ್ಲದೆ, ತಾನು ಹೇಳಿದ ಹಣ ಮತ್ತು ಚಿನ್ನಾಭರಣ ತಾರದಿದ್ದರೆ ವಿಚ್ಛೇದನಾ ನೀಡಿ, ಮಮತಾ ಜೊತೆ ಮದುವೆಯಾಗುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂಬುದನ್ನು ತನಗೆ ಪುತ್ರಿ ಬಿಂದು ತಿಳಿಸಿದಳು. ಇಂದು ಮಧ್ಯಾಹ್ನ ತಾವು ಹೊರಗಡೆ ಹೋಗಿದ್ದಾಗ ಮಗಳು 10 ತಿಂಗಳ ಜಾಹ್ನವಿಯನ್ನು ನೇಣು ಹಾಕಿ ಕೊಂದ ನಂತರ, ತಾನು ಕೂಡ ನೇಣು ಹಾಕಿಕೊಂಡಿದ್ದಾಳೆ ಎಂದು ಆಕೆಯ ತಂದೆ ದೊರೆಸ್ವಾಮಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ನಾಗಮಂಗಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »