ಡಾ.ಹೆಚ್.ಎನ್.ದಿನೇಶ್  ಮೈಸೂರು ಮೆಡಿಕಲ್  ಕಾಲೇಜು ನೂತನ ನಿರ್ದೇಶಕ
ಮೈಸೂರು

ಡಾ.ಹೆಚ್.ಎನ್.ದಿನೇಶ್ ಮೈಸೂರು ಮೆಡಿಕಲ್ ಕಾಲೇಜು ನೂತನ ನಿರ್ದೇಶಕ

December 3, 2021

ಮೈಸೂರು, ಡಿ.2(ಆರ್‍ಕೆ)-ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರೆಕ್ಟರ್ ಆಗಿ ಸರ್ಜರಿ ವಿಭಾ ಗದ ಮುಖ್ಯಸ್ಥ ಹೆಚ್.ಎನ್.ದಿನೇಶ್ ಅವರನ್ನು ನೇಮಿಸಲಾಗಿದೆ.

ಈವರೆಗೆ ಡೀನ್ ಅಂಡ್ ಡೈರೆಕ್ಟರ್ ಆಗಿದ್ದ ಡಾ.ಸಿ.ಪಿ.ನಂಜರಾಜ್ ಅವರು ಕಾಲೇ ಜಿನ ಕ್ಷ-ಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ರಾಗಿ ಮುಂದುವರಿಯುವರು. ಈ ಕುರಿತು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆಡಳಿತ ಮಂಡಳಿ ಉಪಾ ಧ್ಯಕ್ಷರಾದ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಇಂದು ಅಧಿಸೂಚನೆ ಹೊರಡಿಸಿದ್ದಾರೆ.

ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ.ದಿನೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಸ್ಥೆಯ ಆಡಳಿತ ಮಂಡಳಿಯ ಘಟನೋತ್ತರ ಅನು ಮೋದನೆ ಪಡೆಯುವ ಷರತ್ತಿಗೊಳಪಟ್ಟು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ ಎಂದು ಸಿಂಗ್ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಹಾಸನ ಜಿಲ್ಲೆ, ಚನ್ನರಾಯಪಟ್ಟಣದವರಾದ ಡಾ. ಹೆಚ್.ಎನ್.ದಿನೇಶ್, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿ ಬಿಎಸ್ ಪದವಿ ಪಡೆದು, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಜನರಲ್ ಸರ್ಜರಿ ವಿಭಾಗದ ಎಂ.ಎಸ್. ಮಾಡಿದ ನಂತರ ಬಿಎಂಸಿ ಅಂಡ್ ಆರ್‍ಐನಲ್ಲಿ ಸರ್ಜಿಕಲ್ ಗ್ಯಾಸ್ಟ್ರೊ ಎಂಟರಾಲಜಿ ಮತ್ತು ಲಿವರ್ ಟ್ರಾನ್ಸ್‍ಪ್ಲಾಂಟ್ ವಿಷಯದಲ್ಲಿ ಫೆಲೋಶಿಪ್ ಪಡೆದಿ ದ್ದಾರೆ. ಸರ್ಜಿಕಲ್ ಸೊಸೈಟಿ ಆಫ್ ಮೈಸೂರು ಅಧ್ಯಕ್ಷರಾಗಿ, ಮಾ ಟ್ರಸ್ಟ್ ಖಜಾಂಚಿಯಾಗಿ ಐಎಂಎ ಮೈಸೂರು ಚಾಪ್ಟರ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ ಕರ್ನಾಟಕ ಸ್ಟೇಟ್ ಚಾಪ್ಟರ್ ಎಕ್ಸಿಕ್ಯೂಟಿವ್ ಕಮಿಟಿ ಸದಸ್ಯರಾಗಿ ಡಾ.ದಿನೇಶ್ ಸೇವೆ ಸಲ್ಲಿಸುತ್ತಿದ್ದಾರೆ.

Translate »