ಮೈಸೂರು, ಡಿ.2(ಎಂಕೆ)- ಸಂಗೀತ ಕಲೆಯ ಒಂದು ರೂಪವಾಗಿದ್ದು, ಪ್ರತಿ ಯೊಬ್ಬರ ಜೀವನದ ಮೇಲೂ ವಿಭಿನ್ನ ರೀತಿಯ ಪ್ರಭಾವವನ್ನುಂಟು ಮಾಡು ವುದಲ್ಲದೆ ದೈನಂದಿನ ಒತ್ತಡಗಳನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನೂ ಕಾಪಾ ಡುತ್ತದೆ ಎಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಭಿಪ್ರಾಯಪಟ್ಟರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವ ಜ್ಯೋತಿ ಸಭಾಂಗಣದಲ್ಲಿ ಜೆಎಸ್‍ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಆಯೋ ಜಿಸಿರುವ 5 ದಿನಗಳ ‘ಸಂಗೀತೋತ್ಸವ-2021’ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ ಮನಸ್ಸನ್ನು ಸುಸ್ಥಿತಿಯಲ್ಲಿ ಡುವುದರ ಜೊತೆಗೆ ಮಾನಸಿಕ ಖಿನ್ನತೆ ಯಿಂದ ಬಳಲುವವರಿಗೂ ಸಹಕಾರಿ ಯಾಗಿದೆ. ಕೆಲವು ವೈದ್ಯರ ಪ್ರಕಾರ, ಬುದ್ಧಿ ಮಾಂದ್ಯತೆ, ಖಿನ್ನತೆ, ಆತಂಕ, ಆಘಾತ ಮುಂತಾದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಸಂಗೀತ ಚಿಕಿತ್ಸೆಯು ಒಂದು ಉತ್ತಮ ಮಾರ್ಗ ವಾಗಿದೆ. ಕೊರೊನಾ ಪಿಡುಗಿನಿಂದಾಗಿ ಕಳೆದ 18 ತಿಂಗಳು ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಾಗೂ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈಗ ಕೊರೊನಾ ಕಡಿಮೆ ಯಾಗಿರುವುದು ಎಲ್ಲರಿಗೂ ಸಂತೋಷ ನೀಡಿದೆ. ಎಲ್ಲರನ್ನು ರಮಿಸುವ ಕಲೆ ಸಂಗೀತ ವಾಗಿದ್ದು, ದೇವಾನುದೇವತೆಗಳ ಕಾಲ ದಿಂದಲೂ ಸಂಗೀತ ಉತ್ಸವಗಳು ನಡೆ ಯುತ್ತಾ ಬಂದಿವೆ ಎಂದು ತಿಳಿದಿದ್ದೇವೆ. ಮೊಘಲರ ಆಳ್ವಿಕೆಯ ಕಾಲದಲ್ಲಿ ಭಾರ ತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಅವುಗಳಲ್ಲಿ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಸಂಗೀತ ಮುಖ್ಯವಾದವು. ಅದರಲ್ಲೂ ಕರ್ನಾಟಕ ಶಾಸ್ತ್ರೀಯ ಸಂಗೀತ ಅತ್ಯಂತ ಪ್ರಾಶಸ್ತ್ಯ ವನ್ನು ಪಡೆದಿದೆ ಎಂದು ಹೇಳಿಕೊಳ್ಳುವು ದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.
ದೇಶದಲ್ಲಿ ಪ್ರಮುಖವಾದ ಸಂಗೀತಗಾ ರರೇ ಬಹಳಷ್ಟು ಜನರಿದ್ದಾರೆ. ಅವರು ಗಳಲ್ಲಿ ತುಂಬಾ ಹೆಸರು ಪಡೆದವರು ಪುರಂ ದರದಾಸರು. ಅವರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗುತ್ತದೆ. 2 ಲಕ್ಷಕ್ಕೂ ಹೆಚ್ಚು ಹಾಡುಗಳನ್ನು ರಚಿಸಿರುವ ಪುರಂದರದಾಸರು ‘ಮಾಯಮಾಳವ ಗೌಳ’ ಎಂಬ ‘ರಾಗ’ವನ್ನು ಪರಿಚಯಿಸಿದ್ದಾರೆ. ಶ್ರೀಪಾದರಾಯರು, ಕನಕದಾಸರು, ಜಗನ್ನಾಥ ದಾಸರು ಮತ್ತು ವಿಜಯದಾಸರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು ಎಂದು ತಿಳಿಸಿದರು.
ಶಾಸ್ತ್ರೀಯ ಸಂಗೀತ ಮನೆ ಮಾತಾಗ ಬೇಕು: ಹಿರಿಯ ಸಂಗೀತ ವಿದ್ವಾಂಸ ಡಾ. ಆರ್.ಕೆ.ಪದ್ಮನಾಭ ಮಾತನಾಡಿ, ಶಾಸ್ತ್ರೀಯ ಸಂಗೀತ ಮನೆ ಮಾತಾಗ ಬೇಕು. ಈಗ ಎಲ್ಲಿ ನೋಡಿದರೂ ಹಗರಣ ಗಳು, ಗಲಾಟೆಗಳು ನಡೆಯುತ್ತಲೇ ಇವೆ. ಎಲ್ಲಿ ಶಾಸ್ತ್ರೀಯ ಸಂಗೀತವಿರುತ್ತದೆಯೋ ಅಲ್ಲಿ ಜನರು ಕ್ಷೇಮವಾಗಿರುತ್ತಾರೆ ಎಂದು ನಮ್ಮ ಪೂರ್ವಿಕರು ಹೇಳಿದ್ದಾರೆ. ಆದ್ದ ರಿಂದ ಪ್ರತಿಯೊಬ್ಬ ಕಲಾವಿದನ ಕರ್ತವ್ಯ ಶಾಸ್ತ್ರೀಯ ಸಂಗೀತವನ್ನು ತಿಳಿಸುವು ದಾಗಿದೆ ಎಂದು ಹೇಳಿದರು.
ಶಾಸ್ತ್ರೀಯ ಸಂಗೀತವನ್ನು ಅಳಿಸಲು ಸಾಧ್ಯವಿಲ್ಲ. ಈ ನೆಲದಲ್ಲಿ ವೇದಗಳು ಇರು ವವರೆಗೂ ಶಾಸ್ತ್ರೀಯ ಸಂಗೀತ ಇರುತ್ತದೆ. ಅಂದಿನಿಂದ ಹಿಂದಿನವರೆಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ತನ್ನ ಮೂಲ ತತ್ವ ಗಳನ್ನು ಬಿಡದೆ ಒಂದೇ ರೀತಿಯಲ್ಲಿ ನಡೆದು ಕೊಂಡು ಬಂದಿದೆ. ಇದಕ್ಕೆ ಸುತ್ತೂರು ಮಠದಂತಹ ಇನ್ನಿತರೆ ಮಠಗಳ ಪ್ರೋತ್ಸಾ ಹವೂ ಸೇರಿದೆ. ಸಾಮಾಜಿಕ ಸಾಮರಸ್ಯ ವನ್ನು ಕಾಪಾಡುವ ನಿಟ್ಟಿನಲ್ಲಿ ಸುತ್ತೂರು ಮಠ ಈ ರೀತಿಯ ಹಲವು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಜೆಎಸ್‍ಎಸ್ ಸಂಗೀತ ಸಭಾ ಟ್ರಸ್ಟ್ ಉಪಾಧ್ಯಕ್ಷ ಮೈಸೂರು ಎಂ.ನಾಗ ರಾಜ್, ಕಾರ್ಯದರ್ಶಿ ಮೈಸೂರು ಮಂಜುನಾಥ್, ಡಾ.ಪೂರ್ಣಿಮಾ ಮತ್ತಿ ತರರು ಉಪಸ್ಥಿತರಿದ್ದರು.