ಡಾ.ರಾಜ್‍ಕುಮಾರ್ ಪ್ರತಿಮೆ ಸ್ವಚ್ಛಗೊಳಿಸಿದ ಅಭಿಮಾನಿಗಳು
ಮೈಸೂರು

ಡಾ.ರಾಜ್‍ಕುಮಾರ್ ಪ್ರತಿಮೆ ಸ್ವಚ್ಛಗೊಳಿಸಿದ ಅಭಿಮಾನಿಗಳು

April 24, 2021

ಮೈಸೂರು,ಏ.23-ನಾಳೆ (ಏ.24) ವರ ನಟ ಡಾ.ರಾಜ್‍ಕುಮಾರ್ ಅವರ ಹುಟ್ಟು ಹಬ್ಬ. ಪ್ರತಿವರ್ಷ ಸಂಭ್ರಮದಿಂದ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದ ಅಭಿ ಮಾನಿ ಗಳಿಗೆ ಕೊರೊನಾ ಕಫ್ರ್ಯೂ ಅಡ್ಡಿಯಾಗಿದೆ. ಆದರೂ ರಾಜ್‍ಕುಮಾರ್ ಅವರ ಮೇಲಿನ ಪ್ರೀತಿಯಿಂದ ಅವರ ಅಭಿಮಾನಿಗಳು ಮೈಸೂ ರಿನ ಡಾ.ರಾಜ್‍ಕುಮಾರ್ ಉದ್ಯಾನವನ ದಲ್ಲಿರುವ ಅವರ ಪ್ರತಿಮೆಯನ್ನು ನಗರ ಪಾಲಿಕೆ ಸಿಬ್ಬಂದಿಯೊಡಗೂಡಿ ಸ್ವಚ್ಛಗೊಳಿಸಿ, ಪ್ರತಿಮೆಗೆ ಬಣ್ಣ ಹಚ್ಚಿದ್ದಲ್ಲದೆ, ಆವರಣ ಸ್ವಚ್ಛ ಗೊಳಿಸುವ ಮೂಲಕ ತಮ್ಮ ಅಭಿಮಾನ ವನ್ನು ವ್ಯಕ್ತಪಡಿಸಿದ್ದಾರೆ. ಕೊರೊನಾ ಕಫ್ರ್ಯೂ ಹಿನ್ನೆಲೆಯಲ್ಲಿ ಡಾ.ರಾಜ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗದಿ ದ್ದರೂ, ಅವರ ಪ್ರತಿಮೆ ಮತ್ತು ಅದರ ಸುತ್ತ ಲಿನ ಪರಿಸರವನ್ನು ಅಭಿಮಾನಿಗಳು ಸ್ವಚ್ಛ ಗೊಳಿಸಿರುವುದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

 

Translate »