ಡಾ.ರಾಜ್‍ಕುಮಾರ್ ಜನ್ಮ ದಿನಾಚರಣೆ  ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ 
ಮೈಸೂರು

ಡಾ.ರಾಜ್‍ಕುಮಾರ್ ಜನ್ಮ ದಿನಾಚರಣೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ 

April 24, 2021

ಮೈಸೂರು, ಏ.23(ಆರ್‍ಕೆಬಿ)- ಶನಿವಾರ ಏ.24ರಂದು ಕನ್ನಡದ ವರನಟ, ಡಾ.ರಾಜ್ ಕುಮಾರ್ ಅವರ 93ನೇ ಜನ್ಮ ದಿನ. ಆದರೆ ಶನಿವಾರ ಮತ್ತು ಭಾನುವಾರ ಕೊರೊನಾ ಕಫ್ರ್ಯೂ ಇರುವ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧ ಕನ್ನಡ ಪರ ಸಂಘಟನೆಗಳು ಶುಕ್ರವಾರವೇ ಡಾ.ರಾಜ್ ಕುಮಾರ್ ಜನ್ಮ ದಿನವನ್ನು ಆಚರಿಸಿದವು.

ಡಾ.ರಾಜ್‍ಕುಮಾರ್ ಸೇವಾ ಸಮಿತಿ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಆವರಣದಲ್ಲಿರುವ ಡಾ.ರಾಜ್ ಪುತ್ಥಳಿಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್‍ಗೌಡ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ಅವರು ಡಾ. ರಾಜ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಅಂಬಳೆ ಶಿವಣ್ಣ (ಜನಪದ ಕಲಾವಿದ), ಎಂ.ರಾಮೇಗೌಡ (ಕನ್ನಡ ಸೇವೆ), ಆರ್.ಚಕ್ರಪಾಣಿ (ಧಾರ್ಮಿಕ), ಮಂಜುನಾಥ್ (ರಂಗಭೂಮಿ), ಕು.ಅಮೂಲ್ಯ (ಯೋಗ), ಡಾ.ಬಿ.ಹೆಚ್.ಮೋಹನ್ (ಪಶುವೈದ್ಯ), ಪರಮೇಶ್ವರಯ್ಯ, ಜಿ.ಶ್ರೀನಾಥ್ ಬಾಬು, ಎಸ್.ಇ .ಗಿರೀಶ್ (ಸಮಾಜ ಸೇವೆ) ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾನವೀಯ ಮೌಲ್ಯಕ್ಕೆ ಡಾ. ರಾಜ್ ನಿದರ್ಶನ: ಈ ಸಂದರ್ಭದಲ್ಲಿ ಮಾತನಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ಕೊರೊನಾ 2ನೇ ಅಲೆ ಆತಂಕ ಉಂಟು ಮಾಡಿದ್ದು, ಮಾನವೀಯ ಮೌಲ್ಯವನ್ನೇ ಕಸಿದುಕೊಂಡಿದೆ. ಇಂತಹ ಸಂದರ್ಭದಲ್ಲಿ ಮಾನ ವೀಯ ಮೌಲ್ಯದ ಅರಿವು ಮೂಡಿಸುವುದು ಅಗತ್ಯ. ಮಾನವೀಯ ಮೌಲ್ಯದ ಮಹತ್ವವನ್ನು ಡಾ.ರಾಜ್ ಕುಮಾರ್ ತಮ್ಮ ಚಿತ್ರಗಳ ಮೂಲಕ ಸಾರಿದ್ದಾರೆ. ಅವರ ಅನೇಕ ಪಾತ್ರ, ನಡೆ, ನುಡಿ ಮೂಲಕ ಅವರು ಸಮಾಜಕ್ಕೆ ಬಹು ದೊಡ್ಡ ಸಂದೇಶ ನೀಡಿದ್ದಾರೆ. ಇಡೀ ವಿಶ್ವದಲ್ಲಿ ಕರ್ನಾಟಕದ ಭಾರಿಯಾಗಿ ಮೆರೆದವರು ಎಂದು ಸ್ಮರಿಸಿದರು. ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್ ಗೌಡ ಮಾತನಾಡಿ,ಡಾ.ರಾಜ್ ಅವರ ನಡವಳಿಕೆ, ಜನರೊಂದಿಗೆ ಅವರು ಬೆರೆಯುತ್ತಿದ್ದ ರೀತಿ, ಅವರ ವ್ಯಕ್ತಿತ್ವ ಎಲ್ಲರಿಗೂ ಅನುಕರಣೀಯ ಎಂದರು. ಈ ಸಂದರ್ಭದಲ್ಲಿ ಮುಡಾ ಸದಸ್ಯೆ ಲಕ್ಷ್ಮಿದೇವಿ, ಬಿಜೆಪಿ ಮುಖಂಡ ಯಶಸ್ವಿನಿ ಸೋಮಶೇಖರ್, ಡಾ.ರಾಜ್ ಸೇವಾ ಸಮಿತಿಯ ಅಧ್ಯಕ್ಷ ಸುಚೀಂದ್ರ, ಕಾರ್ಯ ದರ್ಶಿ ಲೋಹಿತ್, ಮಧು ಎನ್.ಪೂಜಾರ್, ಹರೀಶ್ ನಾಯ್ಡು ಇನ್ನಿತರರು ಉಪಸ್ಥಿತರಿದ್ದರು.

 

Translate »