ಡಾ.ರಾಜ್ ಜನ್ಮದಿನ ಮೈಸೂರಲ್ಲಿ ಸರಳ ಆಚರಣೆ
ಮೈಸೂರು

ಡಾ.ರಾಜ್ ಜನ್ಮದಿನ ಮೈಸೂರಲ್ಲಿ ಸರಳ ಆಚರಣೆ

April 25, 2021

ಮೈಸೂರು, ಏ.24(ಎಂಟಿವೈ)- ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿದ್ದರಿಂದ ವರನಟ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಮೈಸೂರಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು.

ಮಹಾನಗರ ಪಾಲಿಕೆ, ವಾರ್ತಾ ಇಲಾಖೆ ಮತ್ತು ಡಾ.ರಾಜ್ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದ ಉದ್ಯಾ ನದಲ್ಲಿ ಇರುವ ಡಾ.ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿ ಸಲಾಯಿತು. ಮಾಲಾರ್ಪಣೆ ಮಾಡಿ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ವಾರಾಂತ್ಯ ಕಫ್ರ್ಯೂ ನಡುವೆಯೂ ಡಾ. ರಾಜಕುಮಾರ್ ಹುಟ್ಟುಹಬ್ಬ ಆಚರಿಸಿ ದ್ದೇವೆ ಎಂದರು. ಅವರೊಬ್ಬ ಸಾರ್ವ ಕಾಲಿಕ ಕಲಾವಿದರು ಎಂದು ಬಣ್ಣಿಸಿದರು.

ವಾರ್ತಾ-ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು ಮಾತನಾಡಿ, ರಾಜಕುಮಾರ್ ಅವರು ಅಭಿನಯಿಸಿದ ಎಲ್ಲಾ ಚಲನಚಿತ್ರಗಳಲ್ಲೂ ಒಂದು ಸಂದೇಶ ಇರುತ್ತಿತ್ತು. ಒಲವೇ ಜೀವನ ಸಾಕ್ಷಾತ್ಕಾರ ಎಂಬ ಸಂದೇಶ ಪ್ರಮುಖವಾಗಿತ್ತು. ರಾಜಕುಮಾರ್ ಅವರ ಸಿನಿಮಾಗಳನ್ನು ನೋಡಿ ಅಲ್ಲಿನ ಸಂದೇಶ ವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬಹುತೇಕ ಕೌಟುಂಬಿಕ, ಸಾಮಾಜಿಕ ಸಮಸ್ಯೆ ಗಳು ನಿವಾರಣೆಯಾಗುತ್ತವೆ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಯಾವ ಸಿನಿಮಾದಲ್ಲೂ ಮದ್ಯಪಾನ, ಧೂಮಪಾನ ಮಾಡಿಲ್ಲ. ಅದೇ ಅವರು ನೀಡಿದ ಸಂದೇಶ ಎಂದರು.

ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಡಾ ಸದಸ್ಯೆ ಲಕ್ಷ್ಮಿದೇವಿ, ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹ ದೇವಸ್ವಾಮಿ, ಶ್ರೀನಿವಾಸ್, ಸೋಮ ಶೇಖರ್, ಅಪ್ಪು ಬ್ರಿಗೇಡ್ ಅಧ್ಯಕ್ಷ ರವಿ, ವಿಕ್ರಂ ಅಯ್ಯಂಗಾರ್, ನವೀನ್, ಸುಚೀಂದ್ರ ಮತ್ತಿತರರು ಉಪಸ್ಥಿತರಿದ್ದರು.

Translate »