ವಾರಾಂತ್ಯ ಕಫ್ರ್ಯೂ; ಮೈಸೂರಿಂದ ಬೆರಳೆಣಿಕೆ ಬಸ್ ಸಂಚಾರ
ಮೈಸೂರು

ವಾರಾಂತ್ಯ ಕಫ್ರ್ಯೂ; ಮೈಸೂರಿಂದ ಬೆರಳೆಣಿಕೆ ಬಸ್ ಸಂಚಾರ

April 25, 2021

ಗ್ರಾಮಾಂತರ ಬಸ್ ನಿಲ್ದಾಣದಿಂದ 60, ನಗರ ಸಾರಿಗೆ ವ್ಯಾಪ್ತಿಯಲ್ಲಿ ಕೆಲವೇ ಬಸ್ ಸಂಚಾರ
ಮೈಸೂರು, ಏ.24(ಎಂಟಿವೈ)- ಕೊರೊನಾ 2ನೇ ಅಲೆಯ ತೀವ್ರತೆ ನಿವಾ ರಿಸಲು ರಾಜ್ಯ ಸರ್ಕಾರ ವೀಕೆಂಡ್ ಕಫ್ರ್ಯೂ ಘೋಷಿಸಿದ್ದು, ಮೊದಲ ದಿನವಾದ ಶನಿವಾರ ಮೈಸೂರು ಪೂರ್ಣ ಸ್ತಬ್ಧ ವಾಗಿತ್ತು. ನಗರದಿಂದ ಸಾರಿಗೆ ಸಂಸ್ಥೆಯ ಬೆರಳೆಣಿಕೆ ಬಸ್‍ಗಳು ಸಂಚರಿಸಿದವು.

ವೀಕೆಂಡ್ ಕಫ್ರ್ಯೂ ಜಾರಿ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಬೆÀಳಗ್ಗೆ 6ರಿಂದ 10 ಗಂಟೆವರೆಗಷ್ಟೇ ಅವಕಾಶ ನೀಡಲಾಗಿತ್ತು. ಬೆಳಗ್ಗೆ 10.30ರ ನಂತರ ಪೊಲೀಸರು ನಗರ ಸುತ್ತಾಟ ನಡೆಸಿ ಜನರು ಅನಗತ್ಯ ಸಂಚಾರ ನಡೆಸದಂತೆ ನೋಡಿಕೊಂಡರು.

100 ಬಸ್ ಸಂಚಾರ: ವೀಕೆಂಡ್ ಕಫ್ರ್ಯೂ ನಡುವೆಯೂ ಶನಿವಾರ ಸಾರಿಗೆ ಸಂಸ್ಥೆಯ 100 ಬಸ್‍ಗಳು ವಿವಿಧ ಮಾರ್ಗ ಗಳಲ್ಲಿ ಸಂಚರಿಸಿದವು. ಗ್ರಾಮಾಂತರ ಬಸ್ ನಿಲ್ದಾಣದಿಂದಲೇ 60ಕ್ಕೂ ಹೆಚ್ಚು ಬಸ್‍ಗಳು ಬೆಂಗಳೂರು, ಮಡಿಕೇರಿ ಮಳವಳ್ಳಿ, ಚಾಮರಾಜನಗರ, ಶಿವಮೊಗ್ಗ, ಹಾಸನ, ತುಮಕೂರು ಮೊದಲಾದೆಡೆಗೆ ಸಂಚರಿಸಿದವು. ತುರ್ತುಸೇವೆ, ಪ್ರಯಾಣಿ ಕರ ಬೇಡಿಕೆ ಆಧರಿಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮಾಂತರ, ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಕಡಿಮೆ ಸಂಖ್ಯೆಯ ಬಸ್ ಕಾಯ್ದಿರಿಸಲಾಗಿತ್ತು. ಕಫ್ರ್ಯೂ ಮಾಹಿತಿ ಇಲ್ಲದೆ ನಿಲ್ದಾಣಕ್ಕೆ ಬಂದವರು, ವಿವಿಧೆಡೆಗೆ ತುರ್ತಾಗಿ ತೆರಳಬೇಕಿದ್ದ ಪ್ರಯಾಣಿಕರನ್ನು ಕರೆದೊಯ್ದವು.

ಬೆಂಗಳೂರಿಗೆ ಹೋಗಲು ಹೆಚ್ಚಿನ ಪ್ರಯಾಣಿಕರು ಬರುವ ನಿರೀಕ್ಷೆಯಿಂದ ಸಾರಿಗೆ ಸಂಸ್ಥೆ ಸಿಬ್ಬಂದಿ ಹಲವು ಬಸ್‍ಗಳ ವ್ಯವಸ್ಥೆ ಮಾಡಿದ್ದರು. ಐರಾವತ, ರಾಜ ಹಂಸ, ಸುವರ್ಣ ಕರ್ನಾಟಕ ಮತ್ತಿತರ ಬಸ್‍ಗಳೇನೋ ಸಿದ್ಧವಾಗಿದ್ದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಹಲವು ಬಸ್‍ಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದವು. ತಡೆರಹಿತ ಬಸ್‍ಗಳಿಗೆ ಬದ ಲಾಗಿ ಪ್ರಯಾಣಿಕರು ಮಧ್ಯೆ ನಿಲುಗಡೆ ಇರುವ ಬಸ್‍ಗಳಲ್ಲೇ ಪ್ರಯಾಣಿಸಿದರು.

ವಿವಿಧ ಜಿಲ್ಲೆ, ನಗರ, ಪಟ್ಟಣ ಗಳಿಂದಲೂ ಮೈಸೂರಿಗೆ ಕೆಲ ಬಸ್‍ಗಳು ಬಂದವು. ಇದರಿಂದ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಹಗಲಲ್ಲಿ 150ಕ್ಕೂ ಹೆಚ್ಚು ಬಸ್ ಸಂಚರಿಸಿದವು. ಕನಿಷ್ಠ 30 ಪ್ರಯಾಣಿಕರು ಬರುವವರೆಗೂ ಬಸ್ ಹೊರಡದಂತೆ ಸೂಚಿಸಲಾಗಿತ್ತು. ಪರಿ ಣಾಮ ಕೆಲ ಮಾರ್ಗಗಳ ಪ್ರಯಾಣಿಕರು ಮಾತ್ರ 2 ಗಂಟೆವರೆಗೂ ಕಾಯುವಂತಾಗಿತ್ತು.

ಅಂತಾರಾಜ್ಯ ಬಸ್: ನೆರೆರಾಜ್ಯ ತಮಿಳು ನಾಡು, ಕೇರಳದ ವಿವಿಧ ನಗರಗಳಿಂದ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಎಂದಿ ನಂತಿತ್ತು. ಊಟಿ, ಕೊಯಮತ್ತೂರು, ಕಲ್ಲಿಕೋಟೆ, ವಯನಾಡಿನಿಂದ ಬಂದ ಬಸ್‍ಗಳು ಮೈಸೂರು ಮಾರ್ಗವಾಗಿಯೇ ಬೆಂಗಳೂರಿಗೆ ಸಂಚರಿಸಿದವು. ಮೈಸೂರಿ ನಿಂದ ಪ್ರತಿ ಬಸ್‍ನಲ್ಲಿ 7-8 ಪ್ರಯಾಣಿಕ ರಷ್ಟೇ ಬೆಂಗಳೂರಿಗೆ ಹೊರ ರಾಜ್ಯದ ಬಸ್‍ಗಳಲ್ಲಿ ತೆರಳಿದರು.

ನಗರ ಬಸ್: ನಗರ ಬಸ್ ನಿಲ್ದಾಣ ದಲ್ಲಿ ಪ್ರಯಾಣಿಕರಿಗಾಗಿ 30ಕ್ಕೂ ಹೆಚ್ಚು ಬಸ್‍ಗಳು ಕಾಯುತ್ತಿದ್ದವಾದರೂ ಪ್ರಯಾಣಿ ಕರೇ ಬರಲಿಲ್ಲ. ಒಂದೇ ಬಸ್ 2-3 ಬಡಾ ವಣೆಗಳಿಗೆ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.

ರಿಕ್ಷಾ, ಟ್ಯಾಕ್ಸಿ ಸ್ಥಗಿತ: ಮೈಸೂರು ನಗರದಲ್ಲಿ ಆಟೋರಿಕ್ಷಾ, ಟ್ಯಾಕ್ಸಿ ಸಂಚಾ ರವೂ ಶನಿವಾರ ಸ್ಥಗಿತಗೊಂಡಿತ್ತು. ಇದ ರಿಂದ ಮೈಸೂರಲ್ಲಿ ವಾಹನ ಸಂಚಾರ ಬಹಳ ವಿರಳವಾಗಿತ್ತು. ಆಸ್ಪತ್ರೆಗೆ, ಅಗತ್ಯ ಕಾರ್ಯಗಳಿಗೆ ಹೋಗುವವರು ಮಾತ್ರ ಆಟೋರಿಕ್ಷಾಗಳಲ್ಲಿ ಸಂಚರಿಸಿದರು.

 

 

Translate »