ಖಾಲಿ ರಸ್ತೆಯಲ್ಲಿ ಯುವ ಪಡ್ಡೆ ಭರ್ಜರಿ ಫೋಟೊಶೂಟ್!
ಮೈಸೂರು

ಖಾಲಿ ರಸ್ತೆಯಲ್ಲಿ ಯುವ ಪಡ್ಡೆ ಭರ್ಜರಿ ಫೋಟೊಶೂಟ್!

April 25, 2021

ಮೈಸೂರು, ಏ.24(ಎಂಕೆ)- ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿರುವುದು, `ನಮಗೆ ಸಿಕ್ಕಿದ ಸುವರ್ಣಾವಕಾಶ’ ಎಂಬಂತೆ ಮೈಸೂರಿನ ಖಾಲಿ ರಸ್ತೆಗಳಲ್ಲಿ ಪಡ್ಡೆ ಹುಡುಗರು ಶನಿವಾರ ಫೋಟೋಶೂಟ್ ನಡೆಸಿ ಖುಷಿಪಟ್ಟರು. ನಗರದ ಫೋರಂ ಮಾಲ್ ಎದುರು ಖಾಲಿ ರಸ್ತೆಗೆ ಐಷಾರಾಮಿ ಬೈಕ್‍ನಲ್ಲಿ ಬಂದ ಪಡ್ಡೆ ಹುಡುಗರು ಫೋಟೋ ಕ್ಲಿಕ್ಕಿಸಿಕೊಂಡರು. ಓರ್ವ ಬೈಕ್ ಮೇಲೆ ಕುಳಿತಿದ್ದರೆ, ಇನ್ನಿಬ್ಬರು ಮೊಬೈಲ್‍ನಲ್ಲಿ ಫೋಟೊ ಕ್ಲಿಕ್ಕಿಸಿ ಸಂಭ್ರಮಿಸಿದರು.

 

 

 

Translate »