ಶಿಸ್ತು, ಪರಿಶ್ರಮ ಪ್ರತಿಪಾದಿಸಿದ ಡಾ.ಶಿವರಾಮ ಕಾರಂತರಿಗೂ ಬಲಪಂಥೀಯ ಪಟ್ಟ ಕಟ್ಟಲಾಗಿತ್ತು
ಮೈಸೂರು

ಶಿಸ್ತು, ಪರಿಶ್ರಮ ಪ್ರತಿಪಾದಿಸಿದ ಡಾ.ಶಿವರಾಮ ಕಾರಂತರಿಗೂ ಬಲಪಂಥೀಯ ಪಟ್ಟ ಕಟ್ಟಲಾಗಿತ್ತು

October 11, 2020

ಮೈಸೂರು,ಅ.10(ಪಿಎಂ)-ಡಾ.ಶಿವರಾಮ ಕಾರಂತರು ದೂರ ದೃಷ್ಟಿ ಹೊಂದಿದ್ದ ಮೇರು ವ್ಯಕ್ತಿತ್ವದವರು. ತಮ್ಮ ಸ್ವಂತ ಜಿಲ್ಲೆಯಾದ `ದಕ್ಷಿಣ ಕನ್ನಡ (ಈಗಿನ ಉಡುಪಿ ಜಿಲ್ಲೆ ಒಳಗೊಂಡಂತೆ)’ ಪ್ರಗತಿ -ಬೆಳವಣಿಗೆ ಹೊಂದಿದ ಹಿನ್ನೆಲೆಯನ್ನು ಅವರು ತಮ್ಮ ಒಂದೊಂದು ಕಾದಂಬರಿಯಲ್ಲೂ ಚಿತ್ರಿಸಿದ್ದಾರೆ. ಜಿಲ್ಲೆಯು ಶಿಸ್ತು, ಪರಿಶ್ರಮದ ಹಿನ್ನೆಲೆ ಯಲ್ಲಿ ಬೆಳೆದು ಬಂದ ಬಗೆಯನ್ನು ನೋಡಿದ್ದ ಅವರು ಸಹಜವಾಗಿಯೇ ಅದನ್ನೇ ಪ್ರತಿಪಾದಿಸುತ್ತಿದ್ದ ಕಾರಣಕ್ಕೆ ಅವರಿಗೂ ಬಲಪಂಥೀಯ ಎಂಬ ಪಟ್ಟ ಕಟ್ಟಲಾಯಿತು ಎಂದು ಸರಸ್ವತಿ ಸಮ್ಮಾನ್ ಪುರಸ್ಕøತ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರು ಹೇಳಿದರು.

ಮೈಸೂರಿನ ಕುವೆಂಪುನಗರದ ಉದಯ ರವಿ ರಸ್ತೆಯ ಪ್ರಮತಿ ಶಾಲೆ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಟ್ರಸ್ಟ್, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಶನಿ ವಾರ ಹಮ್ಮಿಕೊಂಡಿದ್ದ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ದಲ್ಲಿ 16ನೇ ವರ್ಷದ `ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಡಾ.ಶಿವರಾಮ ಕಾರಂತರು ಮೇರು ಲೇಖಕರು ಹಾಗೂ ಕಾದಂಬರಿಕಾರರು. ಇವರು ಕಾದಂಬರಿ ಗಳಲ್ಲಿ ವಾಸ್ತವಕ್ಕೆ ಹೆಚ್ಚು ಒತ್ತು ನೀಡಿದವರು. ಇವರು ಬರೆಯು ವುದಕ್ಕಿಂತ ಮೊದಲು ನವೋದಯ ಹಾಗೂ ಪ್ರಗತಿ ಶೀಲ ಕಾಲ ದಲ್ಲಿ ವಾಸ್ತವಿಕತೆಗೆ ಆದ್ಯತೆ ಇರಲಿಲ್ಲ. ನವೋದಯದಲ್ಲಿ ಕೇವಲ ಆದರ್ಶಗಳು ತುಂಬಿದ್ದರೆ, ಪ್ರಗತಿಶೀಲ ಸನ್ನಿವೇಶದಲ್ಲಿ ಸಿದ್ಧಾಂತವೇ ವಿಜೃಂಭಿಸಿದ್ದವು. ಆದರೆ ಕಾರಂತರು ಬಂದ ಮೇಲೆ ವಾಸ್ತವದ ಚಿತ್ರಣ ಅನಾವರಣಗೊಂಡಿತು. ಮುಕ್ತ ಮನಸ್ಸಿನಿಂದ ಬರವಣಿಗೆ ಮಾಡುತ್ತಿದ್ದ ಹೆಚ್ಚುಗಾರಿಕೆ ಕಾರಂತರಿಗೆ ಸಲ್ಲಬೇಕು. ಇಂತಹ ಗುಣಲಕ್ಷಣ ಒಬ್ಬ ಲೇಖಕನಿಗೆ ಅತ್ಯಗತ್ಯ ಎಂದು ನುಡಿದರು.

ಕಾರಂತರು ಕೇವಲ ಕಾದಂಬರಿಕಾರ ಮಾತ್ರ ಆಗಿರಲಿಲ್ಲ. ಜೊತೆಗೆ ಯಕ್ಷಗಾನಕ್ಕೂ ಹೊಸ ಸ್ವರೂಪ ಕೊಟ್ಟರು. ಅವರಿಗೆ ಚಿತ್ರ ಕಲೆ ಯಲ್ಲೂ ಹಿಡಿತವಿತ್ತು. ರೇಖಾಚಿತ್ರಗಳನ್ನೂ ಬರೆಯುತ್ತಿದ್ದ ಅವರು ತಮ್ಮ ಪುಸ್ತಕಕ್ಕೆ ತಾವೇ ಮುಖಪುಟದ ವಿನ್ಯಾಸ ಮಾಡುತ್ತಿದ್ದರು. ಪ್ರತಿಯೊಂದರಲ್ಲಿ ಅತೀವ ಆಸಕ್ತಿ ಹೊಂದಿದ್ದ ಅವರು ಬಡಜನಕ್ಕೆ ಸಹಾಯವನ್ನೂ ಮಾಡು ತ್ತಿದ್ದರು. ಬಡಕುಟುಂಬದ ವಿಧವೆಯರಿಗೆ ಮಾಸಿಕ ಹಣ ಕಳುಹಿಸುತ್ತಿದ್ದ ಮಾನ ವೀಯ ಹೃದಯ ಅವರದು ಎಂದರು.

ಪ್ರಶಸ್ತಿ ಹಿಂದಿರುಗಿಸಿದರು: 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ, ಕಾರಂ ತರು ತಮಗೆ ಸರ್ಕಾರ ಕೊಟ್ಟಿದ್ದ ಪದ್ಮ ಭೂಷಣ ಪ್ರಶಸ್ತಿಯನ್ನು ಇಂದಿರಾ ಗಾಂಧಿ ಯವರಿಗೆ ಹಿಂದಿರುಗಿಸಿದರು. ಅವರ ಪುಸ್ತಕ ವನ್ನು ಅವರೇ ಪ್ರಕಾಶನ ಮಾಡುತ್ತಿದ್ದರು. ಅಲ್ಲದೆ, ತಾವೇ ಮಾರಾಟ ಮಾಡಿ ಅಲ್ಪಸ್ವಲ್ಪ ಗಳಿಸುತ್ತಿದ್ದ ಆದಾಯದಲ್ಲಿ ಸಮಾಜ ಸೇವೆಗೂ ವಿನಿಯೋಗಿಸುತ್ತಿದ್ದರು. ಇಂತಹ ಉನ್ನತ ವ್ಯಕ್ತಿತ್ವದ ಅವರಿಗೆ ಬಲಪಂಥೀಯ ಎಂದು ಪಟ್ಟ ಕಟ್ಟಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರಂತರು ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಪರಿಸ್ಥಿತಿಯು ಅನಂ ತರದಲ್ಲಿ ಹೇಗೆ ಸುಧಾರಣೆ ಕಂಡಿತು ಎಂಬು ದನ್ನು ಕಣ್ಣಾರೆ ನೋಡಿದವರು. ಒಂದು ಕಾಲ ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ರಸ್ತೆ ಗಳೇ ಇರಲಿಲ್ಲ. ಕ್ರಮೇಣ ಇಡೀ ಕರ್ನಾ ಟಕಕ್ಕೆ ನಂಬರ್ 1 ಜಿಲ್ಲೆಯಾಗಿ ದಕ್ಷಿಣ ಕನ್ನಡ ಬೆಳೆಯಿತು. ಅಡುಗೆ ಕೆಲಸ ಕಲಿತ್ತಿದ್ದವರು ಬೇರೆ ಬೇರೆ ಕಡೆಗೆ ಜೀವನೋಪಾಯಕ್ಕೆ ಹೋದರು. ಹೋಟೆಲ್ ಉದ್ಯಮ ಹಾಗೂ ಬ್ಯಾಂಕ್ ವ್ಯವಹಾರ ಆರಂಭವಾದವು. ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಥಾಪನೆಯಾದ ಬ್ಯಾಂಕು ಗಳು ಇಂದಿಗೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ ಸಂಸ್ಥೆಗಳು ಉತ್ತಮ ವಾಗಿ ಬೆಳೆದಿವೆ. ನಾವು ಮುಂದುವರೆಯ ಬೇಕಾದರೆ ಶಿಸ್ತು, ಶ್ರಮ ಬೇಕೆಂಬುದನ್ನು ಇಡೀ ಜಿಲ್ಲೆಯ ಅರಿತುಕೊಂಡಿತು. ಕಾರಂತರ ಬರವಣಿಗೆಯಲ್ಲಿ ಈ ಅಂಶಗಳನ್ನು ಕಾಣು ತ್ತೇವೆ. ಅಂದರೆ ಕಷ್ಟಪಟ್ಟು ಕೆಲಸ ಮಾಡಿ ದರೆ ಮುಂದುವರೆಯಲು ಸಾಧ್ಯವೆಂಬ ಅಂಶ ಮನಗಾಣಬೇಕು ಎಂದರು.

`ಬಲಪಂಥೀಯ’ ಸಿದ್ಧಾಂತವೇ ಇಲ್ಲ: ಸರ್ಕಾರದ ಹಸ್ತಕ್ಷೇಪ ಇರದೇ ವ್ಯಕ್ತಿ ಸ್ವಾತಂತ್ರ್ಯ ಇರಬೇಕು. ಶಿಸ್ತು, ಪ್ರಾಮಾಣಿಕತೆ, ಪರಿಶ್ರಮ ಇರಬೇಕೆಂಬುದು ಕಾರಂತರ ತತ್ವ. ಈ ಕಾರಣಕ್ಕೆ ಅವರನ್ನು ಬಲಪಂಥೀಯ ಎಂದು ಕರೆಯಲಾಯಿತು. ಈ ಬಲಪಂಥೀಯ ಹಾಗೂ ಎಡಬಂಥೀಯ ಎಂಬ ಶಬ್ಧ ಗಳನ್ನು ಈ ಎಡಪಂಥೀಯರು ಸೃಷ್ಟಿ ಮಾಡಿ ದರೆ ಹೊರತು, ಬಲಪಂಥೀಯ ಎಂಬ ಸಿದ್ಧಾಂತವೇ ಇಲ್ಲ. ನಮ್ಮ ಪರಂಪರೆಯಲ್ಲಿ ನ್ಯಾಯವಾದ ದಾರಿಯಲ್ಲಿ ಶ್ರಮಪಟ್ಟು ಸಂಪಾದಿಸಿ, ದಾನ ಧರ್ಮ ಮಾಡಿದರೆ ಅದೇ ಪುಣ್ಯ ಎನ್ನಲಾಗಿದೆ. ಆದರೆ ಎಡಪಂಥೀ ಯರು ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂದು ಪ್ರತಿಪಾದಿಸುತ್ತಾರೆ. ಯಾರೂ ಒಬ್ಬರು `ರೈಟಿಸ್ಟಿ ಇಸ್ ಆಲ್‍ವೇಸ್ ರೈಟ್’ ಎಂದು ವಿನೋದಕ್ಕೆ ಹೇಳಿದ್ದರು. ಇದನ್ನು ನಾನು ಒಪ್ಪುತ್ತೇನೆ ಎಂದು ನುಡಿದರು.
ಅಧಃಪತನಕ್ಕೆ ಕಾರಣ ಎಂದರೆ ಈ ಎಡಪಂಥೀಯರು. ದಕ್ಷಿಣ ಕನ್ನಡದಲ್ಲಿ ಈ ಹಿಂದೆ ಗೋವಿಂದ ಪೈ, ಕೃಷ್ಣಭಟ್ಟರು ಸೇರಿ ದಂತೆ ಮಹಾನ್ ಲೇಖಕರು, ಸಾಹಿತಿಗಳು ಹೊರಹೊಮ್ಮಿದರು. ಆದರೆ ಇಂದು ಅಲ್ಲಿಯೂ ಸಿದ್ಧಾಂತ ಶುರುವಾಗಿದೆ. ಈ ಕಾರಣಕ್ಕೆ ಅಲ್ಲಿಯೂ ಈ ಹಿಂದಿನಂತಹ ಮಹಾನ್ ಲೇಖಕರು ಹೊರ ಬರುತ್ತಿಲ್ಲ. ಕಾರಂತರ ಕೃತಿಗಳನ್ನು ಓದುವುದರಿಂದ ದಕ್ಷಿಣ ಕನ್ನಡ ಜಿಲ್ಲೆ ಬೆಳೆದ ಬಗೆಯನ್ನು ತಿಳಿದುಕೊಳ್ಳ ಬಹುದು. ಅಲ್ಲದೆ, ಇಡೀ ಭಾರತ ಮುಂದು ವರೆಯಬೇಕಾದರೆ ದಕ್ಷಿಣ ಕನ್ನಡದ ಬೆಳ ವಣಿಗೆ ಒಂದು ಮಾದರಿ ಎಂದು ಭೈರಪ್ಪ ಅವರು ಪ್ರತಿಪಾದಿಸಿದರು.

ಇದೇ ವೇಳೆ ನಿವೃತ್ತ ವೈದ್ಯ ಡಾ.ಭಾಸ್ಕರ್ ರಾವ್ ಅವರು ಬೆಂಗಳೂರಿನಿಂದ ತಮ್ಮ ಸಹೋದರಿ ಶಿಲ್ಪ ಕಲಾವಿದೆ ಕನಕಾ ಮೂರ್ತಿ ಅವರು ಕಳುಹಿಸಿರುವ ಡಾ.ಶಿವರಾಮ ಕಾರಂತರ ಪುಟ್ಟ ಪುತ್ಥಳಿಯನ್ನು ಡಾ.ಎಸ್. ಎಲ್.ಭೈರಪ್ಪ ಅವರಿಗೆ ಹಸ್ತಾಂತರಿಸಿದರು.ಕೊರೊನಾ ಹಿನ್ನೆಲೆಯಲ್ಲಿ ಕೋಟದ ಕಾರಂತರ ಥೀಂ ಪಾರ್ಕ್‍ನಲ್ಲಿ ನಡೆಯ ಬೇಕಿದ್ದ ಕಾರ್ಯಕ್ರಮ ಶನಿವಾರ ಮೈಸೂ ರಿನಲ್ಲಿ ನಡೆಯಿತು.

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಪ್ರಧಾನ ಗುರುದತ್, ಲೇಖಕ ಸಂಸ್ಕøತಿ ಸುಬ್ರಹ್ಮಣ್ಯ, ಕೋಟತಟ್ಟು ಗ್ರಾಮ ಪಂಚಾಯಿತಿ ಆಡ ಳಿತಾಧಿಕಾರಿ ಡಾ.ಅರುಣ್‍ಕುಮಾರ್‍ಶೆಟ್ಟಿ, ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಟ್ರಸ್ಟಿ ಸುಬ್ಬ ರಾಯ ಆಚಾರ್, ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ.ಶೇಖರ್ ಮತ್ತಿತರರು ಹಾಜರಿದ್ದರು.

 

 

Translate »