ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತ ವಿರೋಧಿ ಮಸೂದೆ ರದ್ದು
ಮೈಸೂರು

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತ ವಿರೋಧಿ ಮಸೂದೆ ರದ್ದು

October 11, 2020

ಮಂಡ್ಯ, ಅ. 10-ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ದಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬರಲಿದ್ದು, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಮಸೂದೆಗಳನ್ನು ರದ್ದುಪಡಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ವತಿಯಿಂದ ಶನಿವಾರ ನಡೆದ ‘ರೈತ ಧ್ವನಿ’ ಸಮಾವೇಶದಲ್ಲಿ ಮಾತ ನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ಮೇಲೆ ದೇವರಾಜ ಅರಸು ಅವರು ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಯನ್ನು ಯಥಾವತ್ತಾಗಿ ಮತ್ತೆ ಜಾರಿಗೆ ತರುತ್ತೇವೆ. ಎಪಿಎಂಸಿಗಳನ್ನು ಇನ್ನಷ್ಟು ರೈತಸ್ನೇಹಿ ಮಾಡುತ್ತೇವೆ ಎಂಬ ಭರವಸೆಯನ್ನು ನಾಡಿನ ಎಲ್ಲಾ ರೈತರಿಗೂ ಕಾಂಗ್ರೆಸ್ ಪಕ್ಷದ ಪರವಾಗಿ ನೀಡುತ್ತಿದ್ದೇನೆ ಎಂದರು.

ರೈತ ವಿರೋಧಿ ಮಸೂದೆಗಳ ಬಗ್ಗೆ ವಿಧಾನಸಭೆಯಲ್ಲಿ ನಾನು ಗಂಟೆಗಟ್ಟಲೇ ಮಾತನಾಡಿದ್ದೆ. ಆದರೆ, ಅದು ಹೊಳೆಯಲ್ಲಿ ಹುಣಸೇಹಣ್ಣು ತೇದ ಹಾಗೆ ಆಯಿತು. ಧ್ವನಿಮತದ ಮೂಲಕ ಮಸೂದೆ ಪಾಸಾ ದರೂ ಅದನ್ನು ಜನರ ಧ್ವನಿ ಎದುರು ಗೆಲ್ಲಲು ಬಿಡಬಾರದು ಎಂದ ಅವರು, ಈ ಹೋರಾಟ ದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗಿ ಯಾಗಬೇಕು. ನಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಂಡು ಮನೆಯಲ್ಲಿ ಕುಳಿತರೆ ಆಗು ವುದಿಲ್ಲ. ಬೀದಿಗಿಳಿದರೆ ಮಾತ್ರ ನಾವು ಆಡಿದ ಮಾತಿಗೆ ಬೆಲೆ ಬರುತ್ತದೆ ಎಂದರು.

ರೈತ ವಿರೋಧಿ ಮಸೂದೆಗಳನ್ನು ಮಂಡಿಸಿದ್ದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದೆ. ಅದಕ್ಕೆ ಜೆಡಿಎಸ್ ಬಳಿ ಸಹಕಾರ ಕೇಳಿದ್ದೆ. ಆದರೆ ಅವರು ಸಭೆ ಮಾಡುತ್ತೇವೆ ಎಂದರು. ಸಭೆ ಬಳಿಕ ಜೆಡಿಎಸ್‍ನವರು ಅವಿಶ್ವಾಸಕ್ಕೆ ಬೆಂಬಲ ನೀಡುವುದಿಲ್ಲ ಎಂದರು. ಇದು ಅವರು ರೈತರ ಪರ ಇಲ್ಲ ಎಂಬುದನ್ನು ತೋರಿಸುತ್ತದೆ. ‘ನಾವು ರೈತರ ಮಕ್ಕಳು’ ಎಂದು ಜೆಡಿಎಸ್ ನವರು ಹೇಳುತ್ತಾರೆ. ಹಾಗಾದರೆ ನಾವು ರೈತರ ಮಕ್ಕಳಲ್ಲವೇ? ಎಂದು ಪ್ರಶ್ನಿಸಿದರು.

ನಾನು ರೈತ ಕುಟುಂಬದಲ್ಲೇ ಹುಟ್ಟಿದವನು. 1980ರಿಂದ 83ರವರೆಗೆ ಮೈಸೂರು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಾಗಿ ಕೆಲಸ ಮಾಡಿದ್ದೇನೆ. ಈ ನೆಲದ ರೈತರ ಬದುಕು-ಬವಣೆ, ಕಷ್ಟ-ಸುಖಗಳನ್ನು ಕಣ್ಣಾರೆ ಕಂಡಿದ್ದೇನೆ ಹಾಗೂ ಅನುಭವಿ ಸಿದ್ದೇನೆ. ಹಾಗಾಗಿ ಸದಾ ಕಾಲ ರೈತರ ಪರ ನಿಲ್ಲುವ ಬದ್ಧತೆ ನನ್ನಲ್ಲಿದೆ ಎಂದರು.

ನಾನು ಮುಖ್ಯ ಮಂತ್ರಿಯಾಗಿದ್ದಾಗ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕೃಷಿ ಬೆಲೆ ಆಯೋಗ ರಚನೆ ಮತ್ತು ಎಪಿಎಂಸಿ ಮಾರುಕಟ್ಟೆಗಳಲ್ಲಿ ಆನ್‍ಲೈನ್ ಪದ್ಧತಿ ಜಾರಿಗೊಳಿಸಿದ್ದೆ. ಈ ಪದ್ಧತಿಯನ್ನು ಹೊಗಳಿ ದೇಶದ ಇತರ ರಾಜ್ಯಗಳಲ್ಲೂ ಅದನ್ನು ಅಳವಡಿಸಿಕೊಳ್ಳು ವಂತೆ ತನ್ನ ಬಜೆಟ್‍ನಲ್ಲೇ ಸಲಹೆ ನೀಡಿದ್ದ ಕೇಂದ್ರದ ಬಿಜೆಪಿ ಸರ್ಕಾರ, ಇಂದು ಎಪಿ ಎಂಸಿಗಳ ಬಾಗಿಲು ಮುಚ್ಚಲು ಹೊರ ಟಿರುವುದು ವಿಪರ್ಯಾಸವಲ್ಲವೇ? ಎಂದು ಪ್ರಶ್ನಿಸಿದರು.

ಇದೇ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಡೀ ವಿಶ್ವದಲ್ಲಿ ರೈತರಿಗೆ ಯಾವುದೇ ಜಾತಿ-ಧರ್ಮ ಇಲ್ಲ. ಈ ದೇಶದ ಸಂಸ್ಕøತಿಯನ್ನು ಉಳಿಸಿಕೊಂಡು ಬರುತ್ತಿರುವವನು ಅನ್ನದಾತ. ಕಾಂಗ್ರೆಸ್ ರಾಜಕೀಯ ಪಕ್ಷವೇ ಆಗಿದ್ದರೂ ನಾವು ಇಲ್ಲಿ ಪಕ್ಷದ ಬಾವುಟ ಹಾಕಿಕೊಂಡು ಕಾರ್ಯಕ್ರಮ ನಡೆಸುತ್ತಿಲ್ಲ. ದೇಶದ ಇತಿಹಾಸವಿರುವ ತ್ರಿವರ್ಣ ಧ್ವಜ ಹಾಗೂ ಸ್ವಾಭಿಮಾನದ ಶಕ್ತಿ ಇರುವ ಹಸಿರು ಬಾವುಟ ಹಾಕಿಕೊಂಡು ರೈತರನ್ನು ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡೆ ಯಿಂದಾಗಿ ರೈತರು, ವರ್ತಕರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಯಾವೊಂದು ವರ್ಗವೂ ನೆಮ್ಮದಿಯಾಗಿಲ್ಲ. ಹೆಚ್ಚೆಂದರೆ ದೆಹಲಿಯಲ್ಲಿರುವ ಕೆಲವು ಶ್ರೀಮಂತರು ಸೇರಿದಂತೆ ದೇಶದಲ್ಲಿ 100 ಉದ್ಯಮಿಗಳು ಮಾತ್ರ ನೆಮ್ಮದಿಯಾಗಿದ್ದಾರೆ. ಪ್ರಸ್ತುತ ಪರಿ ಸ್ಥಿತಿಯಲ್ಲಿ ಜನರು ನೊಂದು ಬೇಯು ತ್ತಿದ್ದಾರೆ. ಹಸಿರು ಟವಲ್ ಹಾಕಿಕೊಂಡು ರೈತರನ್ನು ಉಳಿಸುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರಿಗೆ ರೈತರ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಹಾಗಿರುವಾಗ ರೈತ ಸಮುದಾಯ ಈ ಸರ್ಕಾರಕ್ಕೆ ಯಾಕೆ ಬೆಂಬಲವಾಗಿ ನಿಲ್ಲಬೇಕು. ನಿಮ್ಮ ಜಿಲ್ಲೆಯ ಸಕ್ಕರೆ

ಕಾರ್ಖಾನೆಯನ್ನು ನಾವು ಉಳಿಸಿಕೊಂಡು ಬಂದಿದ್ದೆವು. ಆ ಕಾರ್ಖಾನೆ ಉಳಿಸಲು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೋಟ್ಯಾಂತರ ರೂ. ಕೊಟ್ಟಿದ್ದರು. ಆದರೆ, ಆ ಕಾರ್ಖಾನೆ ಯನ್ನು ಬಂಡವಾಳಶಾಹಿಗಳಿಗೆ ಮಾರಿದ್ದಾರೆ. ಖಾಸಗಿಯವರಿಗೆ ಕಾರ್ಖಾನೆ ನಡೆಸಲು ಸಾಧ್ಯವಾಗುವುದಾದರೆ, ಸರ್ಕಾರದಿಂದ ಏಕೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಉಳುವವನೇ ಭೂಮಿ ಒಡೆಯ ಎಂದು ಘೋಷಿಸಿ ರೈತರಿಗೆ ಭೂಮಿಯನ್ನು ಕೊಟ್ಟಿದೆ. ಆದರೆ ಈ ಸರ್ಕಾರ ಕೃಪಿ ಭೂಮಿಯನ್ನು ಯಾರೂ ಬೇಕಾದರೂ ಖರೀದಿ ಸಲು ಅವಕಾಶ ಮಾಡಿಕೊಟ್ಟಿದೆ. ಯಡಿಯೂರಪ್ಪ ಮತ್ತು ಅಶೋಕ್ ಸೇರಿ ಈ ರಾಜ್ಯವನ್ನು ಮಾರಾಟ ಮಾಡಲು ಹೊರಟಿದ್ದಾರೆ. ಅದರ ವಿರುದ್ಧ ನಿಮ್ಮ ಧ್ವನಿ ಇರಬೇಕಾಗಿದೆ ಎಂದು ಡಿಕೆಶಿ ಹೇಳಿದ್ದರು. ಸಮಾವೇಶದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ, ವಿಧಾನ ಪರಿಷತ್ ವಿಪಕ್ಷ ನಾಯಕ, ಎಸ್.ಆರ್.ಪಾಟೀಲ್, ಮಾಜಿ ಸಂಸದ ಆರ್. ಧ್ರುವನಾರಾ ಯಣ್, ಮಾಜಿ ಸಚಿವರಾದ ಈಶ್ವರ ಖಂಡ್ರೆ, ಕೃಷ್ಣ ಭೈರೇಗೌಡ, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಕೃಷಿ ತಜ್ಞ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ರೈತ ಮುಖಂಡರಾದ ಚಾಮರಸ ಪಾಟೀಲ್, ಡಾ. ವಾಸು, ಕೆಪಿಸಿಸಿ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗ ಇನ್ನಿತರರಿದ್ದರು.

 

 

 

Translate »