ಮೈಸೂರಲ್ಲಿ ಡಾ.ತಿಮ್ಮಯ್ಯ   ಮಂಡ್ಯದಲ್ಲಿ ಗೂಳಿಗೌಡ, ಕೊಡಗಲ್ಲಿ ಮಂಥರ್‍ಗೌಡ, ಹಾಸನದಲ್ಲಿ ಶಂಕರ್‍ಗೆ  ಕಾಂಗ್ರೆಸ್ ಟಿಕೆಟ್
ಮೈಸೂರು

ಮೈಸೂರಲ್ಲಿ ಡಾ.ತಿಮ್ಮಯ್ಯ ಮಂಡ್ಯದಲ್ಲಿ ಗೂಳಿಗೌಡ, ಕೊಡಗಲ್ಲಿ ಮಂಥರ್‍ಗೌಡ, ಹಾಸನದಲ್ಲಿ ಶಂಕರ್‍ಗೆ ಕಾಂಗ್ರೆಸ್ ಟಿಕೆಟ್

November 23, 2021

ಬೆಂಗಳೂರು,ನ.22-ಸ್ಥಳೀಯ ಸಂಸ್ಥೆ ಗಳಿಂದ ವಿಧಾನಪರಿಷತ್‍ನ 25 ಸ್ಥಾನ ಗಳಿಗೆ ಡಿ.10ರಂದು ನಡೆಯಲಿರುವ ಚುನಾ ವಣೆಗೆ ಕಾಂಗ್ರೆಸ್‍ನಿಂದ 20 ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೈಸೂರು ಕ್ಷೇತ್ರಕ್ಕೆ ಡಾ.ತಿಮ್ಮಯ್ಯ, ಮಂಡ್ಯಕ್ಕೆ ಎಂ.ಜಿ. ಗೂಳಿಗೌಡ, ಕೊಡಗಿಗೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎ.ಮಂಜು ಪುತ್ರ, ಹಾಸನದ ರಾಮನಾಥಪುರ ಜಿಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯರಾಗಿದ್ದ ಡಾ. ಮಂಥರ್‍ಗೌಡ, ಹಾಸನಕ್ಕೆ ಎಂ.ಶಂಕರ್ ಅವರಿಗೆ ಟಿಕೆಟ್ ಪ್ರಕಟಿಸಲಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ ಮದ್ ಅವರಿಗೆ ಹುಬ್ಬಳ್ಳಿ-ಧಾರವಾಡ ಕ್ಷೇತ್ರ ದಲ್ಲಿ ಟಿಕೆಟ್ ನೀಡಲಾಗಿದ್ದು, ಉಳಿದಂತೆ ಕಲಬುರಗಿಗೆ ಶಿವಾನಂದ ಪಾಟೀಲ್ ಮರ್ತೂರ್, ಬೆಳಗಾವಿ-ಚೆನ್ನರಾಜ ಹಟ್ಟಿಹೊಳಿ, ಉತ್ತರ ಕನ್ನಡ-ಭೀಮಣ್ಣ ನಾಯಕ್, ರಾಯಚೂರ್-ಶರಣಗೌಡ ಪಾಟೀಲ್, ಚಿತ್ರದುರ್ಗ -ಬಿ.ಸೋಮಶೇಖರ್, ಶಿವಮೊಗ್ಗ-ಆರ್.ಪ್ರಸನ್ನಕುಮಾರ್, ದಕ್ಷಿಣ ಕನ್ನಡ-ಮಂಜುನಾಥ ಭಂಡಾರಿ, ಚಿಕ್ಕಮಗಳೂರು-ಶ್ರೀಮತಿ ಎ.ವಿ.ಗಾಯತ್ರಿ ಶಾಂತೇಗೌಡ, ತುಮಕೂರು-ಆರ್.ರಾಜೇಂದ್ರ, ಬೆಂಗಳೂರು ಗ್ರಾಮಾಂತರ-ಎಸ್.ರವಿ, ಬಿಜಾಪುರ-ಸುನಿಲ್‍ಗೌಡ ಪಾಟೀಲ್ ಮತ್ತು ಬಳ್ಳಾರಿಯಲ್ಲಿ ಕೆ.ಸಿ.ಕೊಂಡಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಅಲ್ಲದೆ ಬೀದರ್‍ನಲ್ಲಿ ಭೀಮ್‍ರಾವ್ ಬಿ.ಪಾಟೀಲ್, ಕೋಲಾರ ದಲ್ಲಿ ಎಂ.ಎಲ್.ಅನೀಲ್‍ಕುಮಾರ್ ಹಾಗೂ ಬೆಂಗಳೂರು ನಗರದಲ್ಲಿ ಯೂಸುಫ್ ಷರೀಫ್‍ಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಹಾಲಿ ವಿಧಾನಸಭಾ ಸದಸ್ಯರಾಗಿದ್ದ ಮೈಸೂರಿನ ಆರ್.ಧರ್ಮಸೇನಾ ಮತ್ತು ವಿಜಯಪುರದ ಎಸ್.ಆರ್.ಪಾಟೀಲ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮೈಸೂರು ದ್ವಿಸದಸ್ಯ ಕ್ಷೇತ್ರದಲ್ಲಿ ಏಕ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಿ ಪರಿಶಿಷ್ಟ ಜಾತಿ ಎಡಗೈ ಪಂಗಡದವರಿಗೆ ಟಿಕೆಟ್ ನೀಡಲು ತೀರ್ಮಾನಿಸಿ ಡಾ.ತಿಮ್ಮಯ್ಯ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಕೊಡಗು ಕ್ಷೇತ್ರದಲ್ಲಿ ಸ್ಪರ್ಧಿಸಲು ಸ್ಥಳೀಯ ಕೆಲ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದ್ದರಾದರೂ, ಹಾಲಿ ಬಿಜೆಪಿಯಲ್ಲಿರುವ ಹಾಸನ ಜಿಲ್ಲೆಯವರಾದ ಮಾಜಿ ಸಚಿವ ಎ.ಮಂಜು ಅವರ ಪುತ್ರ ಡಾ.ಮಂಥರ್‍ಗೌಡರಿಗೆ ಟಿಕೆಟ್ ನೀಡಲಾಗಿದೆ. ಅದೇ ರೀತಿ ಮಂಡ್ಯದಲ್ಲಿ ಗೂಳಿ ಗೌಡರಿಗೆ ಟಿಕೆಟ್ ನೀಡಿದ್ದು, ಹಾಸನದಲ್ಲಿ ಎಂ.ಶಂಕರ್ ಅವರನ್ನು ಕಣಕ್ಕಿಳಿಸಲಾಗಿದೆ.

ಎಲ್ಲಾ ಅಭ್ಯರ್ಥಿಗಳನ್ನು ಇಂದು ಕೆಪಿಸಿಸಿ ಕಚೇರಿಗೆ ಕರೆಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆಯಾ ಜಿಲ್ಲೆಗಳ ಮುಖಂಡರ ಸಮ್ಮುಖದಲ್ಲಿ ಬಿ-ಫಾರಂ ವಿತರಿಸಿ ದರು. ನಾಮಪತ್ರ ಸಲ್ಲಿಸಲು ನಾಳೆಯೇ (ಮಂಗಳವಾರ) ಕೊನೇ ದಿನವಾಗಿರುವು ದರಿಂದ ಎಲ್ಲಾ ಅಭ್ಯರ್ಥಿಗಳು ನಾಳೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ.

Translate »